ಬೆಂಗಳೂರು:ನಗರದಲ್ಲಿ ಮಾದಕ ದ್ರವ್ಯ ಜಾಲವನ್ನು ವಿಸ್ತರಿಸಬೇಕು ಎಂದು ಖದೀಮರು ಯೋಜನೆ ರೂಪಿಸಿದ್ದ ಮಾಹಿತಿ ಸಿಸಿಬಿ ಹಾಗೂ ಎನ್ಸಿಬಿ ನಡೆಸಿದ ಕಾರ್ಯಾಚರಣೆ ಬಹಿರಂಗವಾಗಿದೆ. ಅಲ್ಲದೆ ಡ್ರಗ್ ದಂಧೆಯಲ್ಲಿ ಸ್ಯಾಂಡಲ್ವುಡ್ ಕೂಡ ಭಾಗಿಯಾಗಿರುವ ಹಿನ್ನೆಲೆ ಎರಡು ತಂಡಗಳು ಕಾರ್ಯಾಚರಣೆ ನಡೆಸಲು ಮುಂದಾಗಿವೆ.
ಗಾಂಜಾ ಜಾಲದ ಹಿಡಿತ ಸಾಧಿಸಲು ಹೊರಟಿದ್ದ ದಂಧೆಕೋರರು..!
ಇಂದು ಬಂಧಿತ ಆರೋಪಿಗಳಾದ ಸಮೀರ್, ಕೈಸರ್ ಪಾಷಾ ಹಾಗೂ ಇಸ್ಮಾಯಿಲ್ ರಾಜ್ಯಾದ್ಯಂತ ಗಾಂಜಾ ಸರಬರಾಜು ಮಾಡಲು ಯೋಜನೆ ರೂಪಿಸಿದ್ದ ವಿಚಾರ ವಿಚಾರಣೆ ವೇಳೆ ತಿಳಿಸಿದ್ದಾರೆ. ಕೇವಲ ನಾಲ್ಕು ವರ್ಷದಲ್ಲಿ ಕೈಸರ್, ಬೆಂಗಳೂರು, ಮೈಸೂರು, ಚಿಕ್ಕಮಂಗಳೂರು, ರಾಮನಗರ, ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಕಡೆ ಜಾಲ ವಿಸ್ತರಿಸಿದ್ದ. ಇನ್ನು ಕೈಸರ್ ಪಾಷಾಗೆ ಬಲಗೈ ಬಂಟನಂತಿದ್ದ ಇಸ್ಮಾಯಿಲ್ ಶರೀಫ್ ಗಾಂಜಾ ಟ್ರಾನ್ಸಪೋರ್ಟ್ ಡ್ರೈವರ್ ಆಗಿದ್ದ.
ಇದನ್ನು ಓದಿ-ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ... 1 ಕೋಟಿ ರೂ. ಮೌಲ್ಯದ 204 ಕೆಜಿ ಗಾಂಜಾ ವಶ!
ಬಿಗ್ ಬಾಸ್ ಆಗಿದ್ದ ಆಂಧ್ರದ ಶಿವಾರೆಡ್ಡಿ: ಆಂಧ್ರ ಪ್ರದೇಶದಲ್ಲಿ ಗಾಂಜಾ ಪೂರೈಕೆಯ ದೊಡ್ಡ ಜಾಲವೇ ಇದೆ. ಅದನ್ನ ಶಿವಾರೆಡ್ಡಿ ನೊಡ್ಕೋತ್ತಿದ್ದ. ರಾಜ್ಯದಲ್ಲಿ ಗಾಂಜಾ ಹಿಡಿತ ಸಾಧಿಸಲು ಕೈಸರ್ ಪಾಷಾ ಹಾಗೂ ಶಿವಾರೆಡ್ಡಿ ಮುಂದಾಗಿದ್ದರು. ಆಂಧ್ರದ ಗೋದಾವರಿಯಿಂದ ಬೆಂಗಳೂರು ಹಾಗೂ ದೇವನಹಳ್ಳಿ ಹಾದಿ ಮೂಲಕ ನಾನಾ ಜಿಲ್ಲೆಗಳಿಗೆ ಮಾದಕ ವಸ್ತು ಸೇರುತ್ತಿತ್ತು. ಸದ್ಯ ಆಂಧ್ರದ ಶಿವಾರೆಡ್ಡಿ ಬಂಧಿಸಲು ಸಿಸಿಬಿ ಮುಂದಾಗಿದೆ.
ಸ್ಯಾಂಡಲ್ ವುಡ್ ಆಕ್ಟರ್ಸ್ ಮತ್ತು ಮ್ಯೂಸಿಷಿಯನ್ಸ್ ಮೇಲೆ ಎನ್ಸಿಬಿ ಕಣ್ಣು ಲಾಕ್ಡೌನ್ ಸಮಯದಲ್ಲಿ 350 ಕೆಜಿ ಗಾಂಜಾ ಮಾರಾಟ:ಮಾದಕ ವಸ್ತುಗಳನ್ನ ಲಾರಿಯಲ್ಲಿ ತಂದು ಏಜೆಂಟ್ಗಳು ಇಂಡಿಗೋ, ವಾಹನಕ್ಕೆ ಡಂಪ್ ಮಾಡಿ ಬ್ಯಾಂಕಿಂಗ್ ಮೂಲಕ ಹಣ ವರ್ಗಾಯಿಸುತ್ತಿದ್ದರು. ಸದ್ಯ ಸಿಸಿಬಿ ಡಿಸಿಪಿ ರವಿಕುಮಾರ್ ಮತ್ತು ಇನ್ಸ್ಪೆಕ್ಟರ್ ಬೋಳೆತ್ತಿನ್ ಹಾಗೂ ವಿರುಪಾಕ್ಷ ಸ್ವಾಮಿ ಟೀಂ ಆರೋಪಿಗಳನ್ನ ಖೆಡ್ಡಾಕ್ಕೆ ಕೆಡವಿದೆ. ಅಲ್ಲದೆ ಲಾಕ್ ಡೌನ್ ಸಮಯದಲ್ಲಿ ರಾಜ್ಯಾದಂತ 350 ಕೆಜಿ ಗಾಂಜಾ ಸರಬರಾಜು ಮಾಡಿರುವುದಾಗಿ ತಿಳಿದುಬಂದಿದೆ.
ಸ್ಯಾಂಡಲ್ವುಡ್ ಕಲಾವಿದರು ಮತ್ತು ಸಂಗೀತ ನಿರ್ದೇಶಕರ ಮೇಲೆ ಎನ್ಸಿಬಿ ಕಣ್ಣು:ಎನ್ಸಿಬಿ ನಗರದಲ್ಲಿ ನಡೆಯುತ್ತಿರುವ ಡ್ರಗ್ ದಂಧೆಯ ಮೇಲೆ ಕಣ್ಣಿಟ್ಟಿದೆ. ಸಿಸಿಬಿ ಅಧಿಕಾರಿಗಳ ಜೊತೆ ಇದರ ಬಗ್ಗೆ ಚರ್ಚೆ ಕೂಡ ನಡೆಸಿದ್ದಾರೆ. ನಗರದಲ್ಲಿ ಕೆಲ ಪ್ರತಿಷ್ಠಿತ ನಟ ನಟಿಯರು ಡ್ರಗ್ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಎನ್ಸಿಬಿಗೆ ಲಭ್ಯವಾಗಿದೆ. ಹೀಗಾಗಿ ಎನ್ಸಿಬಿ ಹಾಗೂ ಸಿಸಿಬಿ ವಿಂಗ್ ಸ್ಥಳೀಯ ಪೊಲೀಸರ ಜೊತೆ ಸೇರಿಕೊಂಡು ಬಂಧಿತರ ಜೊತೆ ಲಿಂಕ್ ಇರುವವರ ಹುಡುಕಾಟ ನಡೆಸಿದ್ದಾರೆ. ಸದ್ಯ ಡ್ರಗ್ಸ್ ಜಾಲದಲ್ಲಿ ಬಹುತೇಕ ಪ್ರತಿಷ್ಠಿತ ನಟ-ನಟಿಯರಿಗೆ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.