ಕರ್ನಾಟಕ

karnataka

ETV Bharat / sitara

ವಿಜಯ್ ಅಗಲಿಕೆ ನೋವು; ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನೀನಾಸಂ ಸತೀಶ್ ನಿರ್ಧಾರ - Neenasam Satish's birthday function cancel

ಜೂನ್ 20 ನಟ ಸತೀಶ್ ನೀನಾಸಂ ಅವರಿಗೆ ಜನ್ಮದಿನ. ಆದರೆ, ಸಂಚಾರಿ ವಿಜಯ್ ಅಗಲಿಕೆಯಿಂದ ತಮ್ಮ ಹುಟ್ಟುಹಬ್ಬವನ್ನ ಆಚರಣೆ ಮಾಡದಿರಲು ನಿರ್ಧಾರ ಮಾಡಿದ್ದಾರೆ.

sanchari-vijay and ninasam sathish
ಸಂಚಾರಿ ವಿಜಯ್ ಹಾಗೂ ನಿನಾಸಂ ಸತೀಶ್

By

Published : Jun 18, 2021, 7:29 PM IST

ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅಕಾಲಿಕ ಮರಣದಿಂದಾಗಿ ಅವರ ಕುಟುಂಬಸ್ಥರಿಗೆ, ಅವರ ಆಪ್ತರಿಗೆ ಹಾಗೂ ಸ್ನೇಹಿತರಿಗೆ ಆ ನೋವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದರಲ್ಲಿ ನಟ ನೀನಾಸಂ ಸತೀಶ್​ ಕೂಡ ವಿಜಯ್ ಅವರ ಆಪ್ತ ಗೆಳೆಯರಲ್ಲಿ ಒಬ್ಬರಾಗಿದ್ದರು. ಇದೀಗ ಗೆಳೆಯನ ಅಗಲಿಕೆಯ ನೋವನ್ನು ಅನುಭವಿಸುತ್ತಿರುವ ಸತೀಶ್ ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ.

ಜೂನ್ 20 ನಟ ಸತೀಶ್ ನೀನಾಸಂ ಅವರಿಗೆ ಜನ್ಮದಿನ. ಆದರೆ, ಸಂಚಾರಿ ವಿಜಯ್ ಅಗಲಿಕೆಯಿಂದ ತಮ್ಮ ಹುಟ್ಟುಹಬ್ಬವನ್ನ ಆಚರಣೆ ಮಾಡದಿರಲು ನಿರ್ಧಾರ ಮಾಡಿದ್ದಾರೆ. ಸಂಚಾರಿ ವಿಜಯ್​ಗೆ ಬೈಕ್ ಅಪಘಾತವಾದಾಗಿನಿಂದ ಅವರನ್ನು ಆಸ್ಪತ್ರೆಗೆ ಸೇರಿಸಿದ್ದರಿಂದ ಹಿಡಿದು ಅವರ ಅಂತ್ಯಸಂಸ್ಕಾರದವರೆಗೂ ಎಲ್ಲಾ ಕಾರ್ಯಗಳನ್ನ ಮಾಡಿದ್ದರು. ಇದರ ನೋವಿನಲ್ಲಿರುವ ಅವರು ಇಂಥದ್ದೊಂದು ನಿರ್ಧಾರಕ್ಕೆ ಬಂದಿದ್ದಾರೆ.

ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಗೆಳೆಯರೇ, ಇದೇ ಜೂನ್ 20ರಂದು ನನ್ನ ಹುಟ್ಟು ಹಬ್ಬ. ಆದರೆ, ವಿಜಿ ಇಲ್ಲದ ಈ ಸಂದರ್ಭದಲ್ಲಿ ತುಂಬ ನೋವಿನಲ್ಲಿ ನನ್ನ ಗೆಳೆಯರ ಬಳಗವಿದೆ. ಹಾಗಾಗಿ, ಆ ದಿನ ಯಾವುದೇ ಸಂಭ್ರಮಗಳಿರುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.

ಸತೀಶ್ ನೀನಾಸಂ ಅಭಿನಯದ, ನಿರ್ದೇಶಕ ವಿಜಯ್ ಪ್ರಸಾದ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಪೆಟ್ರೋಮ್ಯಾಕ್ಸ್ ಸಿನಿಮಾದ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿತ್ತು. ಆದರೆ, ಜೂನ್ 20ರಂದು ಬಿಡುಗಡೆಯಾಗಬೇಕಿದ್ದ ಪೆಟ್ರೋಮ್ಯಾಕ್ಸ್‌ ಚಿತ್ರದ ಟೀಸರ್ ಕೂಡ ಮುಂದೂಡಿದ್ದೇವೆ ಎಂದು ಸತೀಶ್ ಹೇಳಿದ್ದಾರೆ. ಇವರಿಗೆ ನಾಯಕಿಯಾಗಿ ಹರಿಪ್ರಿಯಾ ಬಣ್ಣ ಹಚ್ಚಿದ್ದಾರೆ.

ಓದಿ:ಸ್ನೇಹಿತನ ಜಮೀನಿನಲ್ಲಿ ಕೆಲಸ ಮಾಡ್ತಿರೋ ಕಲಿವೀರ ನಟ ಏಕಲವ್ಯ

ABOUT THE AUTHOR

...view details