ಕರ್ನಾಟಕ

karnataka

ETV Bharat / sitara

ಲಾಕ್​ಡೌನ್​ ಬಿಕಟ್ಟು... ಕನ್ನಡ ಚಿತ್ರರಂಗವೇ ಹೆಮ್ಮಪಡುವಂತಹ ಕೆಲಸ ಮಾಡಿದ ಸಂಚಾರಿ ವಿಜಯ್ - covid 19

‘ಕೋವಿಡ್ 19’ ಸೋಂಕಿನ ಹಿನ್ನೆಲೆ ಏಪ್ರಿಲ್ 14ರವರೆಗೆ ಲಾಕ್​ಡೌನ್ ಆದೇಶವಿರುವುದರಿಂದ, ಸಂಕಷ್ಟದಲ್ಲಿರುವ ಆರು ಕುಟುಂಬಗಳಿಗೆ ಸಂಚಾರಿ ವಿಜಯ್ ಸಹಾಯ ಮಾಡುತ್ತಿದ್ದಾರೆ.

sanchari-vijay
ಸಂಚಾರಿ ವಿಜಯ್

By

Published : Mar 25, 2020, 11:57 AM IST

ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಮೃದು ಸ್ವಭಾವದ ವ್ಯಕ್ತಿ. ಇವರಿಗೆ ಬಡವರ ಹಾಗೂ ಅಸಹಾಯಕರ ಕಷ್ಟ ಚೆನ್ನಾಗಿ ಅರಿವಿದೆ. ಅದಕ್ಕೆ ಅವರು ಬೆಳದು ಬಂದ ಹಾದಿಯೂ ಕಾರಣ.

ಸಂಚಾರಿ ವಿಜಯ್

ಕನ್ನಡದ ಕಲಾವಿದರ ಸಂಘವೇ ಮೆಚ್ಚುಗೆ ವ್ಯಕ್ತಪಡಿಸುವಂತಹ ಕೆಲಸಕ್ಕೆ ಸಂಚಾರಿ ವಿಜಯ್ ಮುಂದಾಗಿದ್ದಾರೆ. ಕೋವಿಡ್​ 19 ಪರಿಣಾಮ ದೇಶಾದ್ಯಂತ ಲಾಕ್​ಡೌನ್​ ಇರುವ ಕಾರಣ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವ ಆರು ಕುಟುಂಬಗಳನ್ನು ಅವರು ಪತ್ತೆ ಹಚ್ಚಿ ಅವರಿಗೆ ಇರುವ ಸಂಕಷ್ಟ ತಿಳಿದು ಒಂದು ತಿಂಗಳ ಜೀವನ ನಿರ್ವಹಣೆಗೆ ಹಣ ಸಹಾಯ ಮಾಡುತ್ತಿದ್ದಾರೆ.

ಸಂಚಾರಿ ವಿಜಯ್ ಬೆಂಗಳೂರಿನ ಫ್ರೇಜರ್ ಟೌನ್ ಬಳಿ ಇರುವ ಆರು ಸಿನಿಮಾ ಕುಟುಂಬಗಳನ್ನು ಆಯ್ಕೆ ಮಾಡಿ ತಲಾ 25000 ರೂಪಾಯಿ ನೀಡುತ್ತಿದ್ದಾರೆ.

‘ಕೋವಿಡ್ 19’ ಸೋಂಕಿನ ಹಿನ್ನೆಲೆ ಏಪ್ರಿಲ್ 14ರವರೆಗೆ ಲಾಕ್​ಡೌನ್ ಆದೇಶವಿರುವುದರಿಂದ ಸಂಚಾರಿ ವಿಜಯ್ ಈ ನಿರ್ಧಾರ ಕೈಗೊಂಡಿದ್ದಾರೆ.

ABOUT THE AUTHOR

...view details