ಪ್ರತಿ ವರ್ಷದಂತೆ ಈ ವರ್ಷವೂ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯುತ್ತಿದೆ. ಚಿತ್ರೋತ್ಸವ ಮಾರ್ಚ್ 24 ರಿಂದ 31ವರೆಗೂ ಜರುಗಲಿದೆ. ಈ ಚಿತ್ರೋತ್ಸವ ಆರಂಭವಾಗಲು 15 ದಿನಗಳು ಬಾಕಿ ಇರುವಾಗಲೇ ವಿವಾದದ ಕಿಡಿಯೊಂದು ಹತ್ತಿಕೊಂಡಿದೆ.
ಬೆಂಗಳೂರು ಅಂ.ಚಿತ್ರೋತ್ಸವ ಆರಂಭಕ್ಕೂ ಮುನ್ನವೇ ಸಂಚಾರಿ ವಿಜಯ್ ಅಸಮಾಧಾನ
ಮಾರ್ಚ್ 24 ರಿಂದ ಆರಂಭವಾಗುವ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಬಾರಿ ತಮ್ಮ 'ತಲೆದಂಡ' ಸಿನಿಮಾವನ್ನು ಕೈ ಬಿಟ್ಟಿದ್ದಾರೆ ಎಂದು ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಭಾರತೀಯ ಸೇನೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ ಬಾಲಿವುಡ್ ನಟ!
ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅಭಿನಯದ 'ತಲೆ ದಂಡ' ಸಿನಿಮಾವನ್ನು ಕೈ ಬಿಡಲಾಗಿದೆ. ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಂಚಾರಿ ವಿಜಯ್ ತಮ್ಮ 'ತಲೆದಂಡ' ಸಿನಿಮಾವನ್ನು ಈ ವರ್ಷದ ಸ್ಪರ್ಧಾತ್ಮಕ ವಿಭಾಗದ ಪ್ರದರ್ಶನದಿಂದ ಕೈ ಬಿಟ್ಟಿರುವುದಕ್ಕೆ ಅಸಮಾಧಾನ ಹೊರ ಹಾಕಿದ್ದಾರೆ. ಸಮಾಜಕ್ಕೆ ಸಂದೇಶ ಹೊಂದಿರುವ, ಪರಿಸರ ನಾಶ ಹಾಗೂ ಅರಣ್ಯ ಉಳಿವಿನ ಕಥೆ ಆಧರಿಸಿರುವ 'ತಲೆದಂಡ' ಸಿನಿಮಾವನ್ನು ಯಾವ ಆಧಾರದ ಮೇಲೆ ಕೈ ಬಿಟ್ಟಿದ್ದಾರೆ ಗೊತ್ತಿಲ್ಲ ಎಂದು ವಿಜಯ್ ಬೇಸರ ವ್ಯಕ್ತಪಡಿಸಿದ್ದಾರೆ. ಈ ಚಲನಚಿತ್ರೋತ್ಸವ ಸ್ಪರ್ಧಾತ್ಮಕ ವಿಭಾಗದ ಕಮಿಟಿ ಸದಸ್ಯರಲ್ಲಿ 'ತಲೆದಂಡ' ಚಿತ್ರಕ್ಕೆ ಕ್ಯಾಮರಾ ಕೆಲಸ ಮಾಡಿರುವ ಅಶೋಕ್ ಕಶ್ಯಪ್ ಇರುವ ಕಾರಣ ಸಿನಿಮಾವನ್ನು ಈ ಬಾರಿ ಕೈ ಬಿಡಲಾಗಿದೆ ಎಂದು ವಿಜಯ್ ಅಸಮಾಧಾನ ಹೊರ ಹಾಕಿದ್ದಾರೆ.
TAGGED:
ಸಂಚಾರಿ ವಿಜಯ್ ಅಭಿನಯದ ತಲೆದಂಡ