ಕನ್ನಡ ಚಿತ್ರರಂಗದಲ್ಲಿ ಕಿರಿಕ್ ಹುಡುಗಿ ಎಂದೇ ಜನಪ್ರಿಯರಾದವರು ಸಂಯುಕ್ತಾ ಹೆಗ್ಡೆ. ಕನ್ನಡವಲ್ಲದೆ ತೆಲುಗು ಮತ್ತು ತಮಿಳಿನಲ್ಲೂ ನಟಿಸಿ ಬಂದವರು. ಇದೀಗ ಬಾಲಿವುಡ್ಗೂ ಎಂಟ್ರಿ ಕೊಡಲು ಮುಂದಾಗಿದ್ದಾರೆ. ಹಿಂದಿಯ ವೆಬ್ಸೀರಿಸ್ವೊಂದರಲ್ಲಿ ‘ಮಿಷಾ’ ಎಂಬ ಹೆಸರಿನ ಪಾತ್ರ ನಿರ್ವಹಿಸುತ್ತಿದ್ದಾರೆ.
ಬಾಲಿವುಡ್ಗೆ ಎಂಟ್ರಿ ಕೊಟ್ಟ ‘ಕಿರಿಕ್’ ಹುಡುಗಿ ಸಂಯುಕ್ತಾ ಹೆಗಡೆ - Bollywood Webseries
‘ಪಂಚ್ ಬೀಟ್' ಎಂಬ ವೆಬ್ ಸೀರಿಸ್ನ ಸೀಸನ್ -2ರಲ್ಲಿ ವಿಶೇಷ ಪಾತ್ರವೊಂದನ್ನು ಸಂಯುಕ್ತಾ ಮಾಡಿದ್ದಾರೆ. ಈ ಸೀರಿಸ್ನ ಟ್ರೈಲರ್ ಸಹ ರಿಲೀಸ್ ಆಗಿದ್ದು, ಜೂನ್ 27 ರಿಂದ ಆಲ್ಟ್ ಬಾಲಾಜಿ ಒಟಿಟಿಯಲ್ಲಿ ಪ್ರಸಾರವಾಗಲಿದೆ..
ಈ ಕುರಿತು ಸಂಯುಕ್ತಾ ಇನ್ಸ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ. ಹಿಂದಿಯಲ್ಲಿ ತಯಾರಾಗಿರುವ ‘ಪಂಚ್ ಬೀಟ್' ಎಂಬ ವೆಬ್ ಸೀರಿಸ್ನ ಸೀಸನ್ -2ರಲ್ಲಿ ವಿಶೇಷ ಪಾತ್ರವೊಂದನ್ನು ಸಂಯುಕ್ತಾ ಮಾಡಿದ್ದಾರೆ. ಈ ಸೀರಿಸ್ನ ಟ್ರೈಲರ್ ಸಹ ರಿಲೀಸ್ ಆಗಿದೆ. ಈ ವೆಬ್ ಸೀರಿಸ್ನಲ್ಲಿ ಸಂಯುಕ್ತಾ ಹೆಗ್ಡೆ ವಿಶೇಷ ಪಾತ್ರವೊಂದನ್ನು ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.
ಜೀವ ರಕ್ಷಕ ಕಲೆಗಳನ್ನು ಕಲಿತು, ಅಪ್ಪನ ಜಿಮ್ ನಡೆಸುವ ಮಿಶಾ ಹೆಸರಿನ ಯುವತಿಯ ಪಾತ್ರವಂತೆ ಅದು. ತಮ್ಮ ನಿಜಜೀವನಕ್ಕೆ ಬಹಳ ಹತ್ತಿರವಿರುವ ಪಾತ್ರವನ್ನು ಇದರಲ್ಲಿ ಮಾಡಿದ್ದು, ಅವರ ಜೊತೆಗೆ ಪ್ರಿಯಾಂಕ್ ಶರ್ಮಾ, ಸಮೀರ್ ಸೋನಿ, ನಿಕಿ ವಾಲಿಯಾ ಮುಂತಾದವರು ನಟಿಸಿದ್ದಾರೆ. ಏಕ್ತಾ ಕಪೂರ್ ತಮ್ಮ ಆಲ್ಟ್ ಬಾಲಾಜಿ ಒಟಿಟಿಗಾಗಿ ಈ ಸರಣಿಯನ್ನು ನಿರ್ಮಾಣ ಮಾಡಿದ್ದಾರೆ. ಆಕಾಶ್ ಚೌಬೆ ನಿರ್ದೇಶನದ ಈ ಸರಣಿ ಜೂನ್ 27ರಿಂದ ಪ್ರಸಾರವಾಗಲಿದೆ.