ಸ್ಯಾಂಡಲ್ವುಡ್ನಲ್ಲಿ ಶೀರ್ಷಿಕೆಯಿಂದಲೇ ಸಖತ್ ಸದ್ದು ಮಾಡ್ತಿರೋ ಸಿನಿಮಾ ರಾಣ. ಪಡ್ಡೆಹುಲಿ ಸಿನಿಮಾದಿಂದ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆದಿರುವ ನಟ ಶ್ರೇಯಸ್ ಮಂಜು ನಟಿಸುತ್ತಿರುವ ನಿರೀಕ್ಷಿತ ಚಿತ್ರ. ಸದ್ಯ ಈ ಚಿತ್ರದಲ್ಲಿ ಕಿರಿಕ್ ಪಾರ್ಟಿ ಹುಡುಗಿ ಸಂಯುಕ್ತಾ ಹೆಗ್ಡೆ ಸ್ಪೆಷಲ್ ಹಾಡಿಗೆ ಸಖತ್ ಆಗಿ ಸೊಂಟ ಬಳಕಿಸಿದ್ದಾರೆ.
ಕಿರಿಕ್ ಪಾರ್ಟಿ ಚಿತ್ರದಲ್ಲಿ ಡ್ಯಾನ್ಸ್ನಿಂದಲೇ ನೋಡುಗರ ಗಮನ ಸೆಳೆದಿದ್ದ ಸಂಯುಕ್ತ ಹೆಗ್ಡೆ ಇದೀಗ ಮಳ್ಳಿ ಮಳ್ಳಿ ಹಾಡಿಗೆ ಮೈ ಬಳುಕಿಸಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ಕಲಾ ನಿರ್ದೇಶಕ ಶಿವು ಕೆಜಿಎಫ್ ನಿರ್ಮಿಸಿರುವ ಭವ್ಯವಾದ ಸೆಟ್ನಲ್ಲಿ ಶ್ರೇಯಸ್ ಮಂಜು ಸಂಯುಕ್ತ ಹೆಗ್ಡೆ ಜೊತೆ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಚುಟು ಚುಟಿ ಖ್ಯಾತಿಯ ಶಿವು ಭೇರ್ಗಿ 'ಮಳ್ಳಿ ಮಳ್ಳಿ' ಹಾಡನ್ನು ಬರೆದಿದ್ದು, ಚಂದನ್ ಶೆಟ್ಟಿ ಹಾಡುವುದರ ಜೊತೆಗೆ ಸಂಗೀತ ನೀಡಿದ್ದಾರೆ.