ಕರ್ನಾಟಕ

karnataka

ETV Bharat / sitara

ನಾಲ್ಕು ವರ್ಷದಿಂದ ಪರಿಸರ ಸ್ನೇಹಿ ಗಣೇಶ ಮಾಡ್ತಿರೋ ಲೈಫ್ ಇಷ್ಟೇನೆ ಬೆಡಗಿ! - Samyuktha Horanadu

ಕಳೆದ ನಾಲ್ಕು ವರ್ಷಗಳಿಂದ ಗಣೇಶ ಹಬ್ಬದಂದು, ಸಂಯುಕ್ತಾ ಹೊರನಾಡು ಮಣ್ಣಿನಲ್ಲಿ, ತಮ್ಮ ಕೈಯಾರೇ ಗಣೇಶನನ್ನು ಮಾಡ್ತಾ ಬಂದಿದ್ದಾರೆ.

Samyuktha
ನಟಿ ಸಂಯುಕ್ತಾ ಹೊರನಾಡು

By

Published : Aug 22, 2020, 2:46 PM IST

ಸಮಾಜಮುಖಿ ಹಾಗೂ ವಿಭಿನ್ನ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆಯುತ್ತಿದ್ದಾರೆ ನಟಿ ಸಂಯುಕ್ತಾ ಹೊರನಾಡು. ಇದೀಗ ಗಣೇಶ ಹಬ್ಬಕ್ಕೆ ಪರಿಸರ ಸ್ನೇಹಿ ಗಣೇಶನನ್ನ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ

ಪರಿಸರ ಸ್ನೇಹಿ ಗಣೇಶ ಮಾಡ್ತಿರೋ ಲೈಫ್ ಇಷ್ಟೇನೆ ಬೆಡಗಿ

ಲೈಫು ಇಷ್ಟೇನೆ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ನಲ್ಲಿ ತನ್ನದೇ ಐಡೆಂಟಿಟಿಯನ್ನ ಕ್ರಿಯೇಟ್ ಮಾಡಿಕೊಂಡಿರುವ ಒಗ್ಗರಣೆ ಸಿನಿಮಾದ ಸುಂದರಿ. ಈ ಕೊರೊನಾ ಸಂದರ್ಭದಲ್ಲಿ ಬೀದಿ ಶ್ವಾನಗಳು, ಪೌರ ಕಾರ್ಮಿಕರು ಹಾಗೂ ಹಸಿದ ಜನರಿಗೆ ಊಟದ ವ್ಯವಸ್ಥೆಯನ್ನ ಮಾಡಿದ್ರು.

ಸಂಯುಕ್ತಾ ತಯಾರಿಸಿರುವ ಮಣ್ಣಿನ ಗಣೇಶ ಮೂರ್ತಿಗಳು

ಕಳೆದ ನಾಲ್ಕು ವರ್ಷಗಳಿಂದ ಗಣೇಶ ಹಬ್ಬದಂದು, ಸಂಯುಕ್ತಾ ಹೊರನಾಡು ಮಣ್ಣಿನಲ್ಲಿ, ತಮ್ಮ ಕೈಯಾರೆ ಗಣೇಶನನ್ನು ಮಾಡ್ತಾ ಬಂದಿದ್ದಾರೆ. ಈ ವರ್ಷವು ಕೂಡ ಸಂಯುಕ್ತಾ ಹೊರನಾಡು ಮಣ್ಣಿನಲ್ಲಿ ಗಣೇಶ ಮಾಡಿ, ಎಲ್ಲರೂ ಮಣ್ಣಿನಲ್ಲಿ ಮಾಡಿರುವ ಗಣೇಶನನ್ನು ಬಳಸಿ ಹಾಗೇ ತಮ್ಮ ಮನೆಯಲ್ಲೇ ವಿಸರ್ಜನೆ ಮಾಡಿ ಅಂದಿದ್ದಾರೆ‌.

ಸಂಯುಕ್ತಾ ತಯಾರಿಸಿರುವ ಮಣ್ಣಿನ ಗಣೇಶ ಮೂರ್ತಿಗಳು

ಈ ವರ್ಷ ಕೊರೊನಾ ಇರುವುದರಿಂದ ಗಣೇಶ ವಿಸರ್ಜನೆ ಮಾಡಬೇಕಾದರೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಅಂತಾ ಗೌರಿ ಗಣೇಶ ಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ಸದ್ಯ ಸಂಯುಕ್ತಾ ಹೊರನಾಡು ಮಣ್ಣಿನಲ್ಲಿ ಮಾಡಿರುವ ಗಣೇಶ ಅದ್ಬುತವಾಗಿ ಮೂಡಿ ಬಂದಿರೋದು ವಿಶೇಷ.

ಸಂಯುಕ್ತಾ ತಯಾರಿಸಿರುವ ಮಣ್ಣಿನ ಗಣೇಶ ಮೂರ್ತಿಗಳು

ABOUT THE AUTHOR

...view details