ಇದೇ 27 ಅಂದ್ರೆ ನಾಡಿದ್ದು ಬಿಡುಗಡೆಯಾಗುತ್ತಿರುವ ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನರಾಯಣ ಸಿನಿಮಾದ ಹವಾ ಜೋರಾಗಿಯೇ ಇದೆ. ಅದ್ರಲ್ಲು ಹ್ಯಾಂಡ್ಸ್ ಅಪ್ ಸ್ಟೆಪ್ಪಿನ ಕ್ರೇಜ್ ಇನ್ನೂ ಕಡಿಮೆ ಆಗಿಲ್ಲ.
ಇತ್ತೀಚೆಗೆ ರಕ್ಷಿತ್ ಸಮುದ್ರ ತೀರದಲ್ಲಿ ನಿಂತು ಹ್ಯಾಂಡ್ಸ್ ಅಪ್ ಹಾಡಿನ ಸಿಗ್ನೇಚರ್ ಸ್ಟೆಪ್ ಹಾಕಿ ಕೆಲವರಿಗೆ ಚಾಲೆಂಜ್ ಮಾಡಿದ್ರು. ಅದ್ರಲ್ಲಿ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ತಮ್ಮ ಜೊತೆ ಅಭಿನಯಿಸಿದ್ದ ಸಂಯುಕ್ತ ಹೆಗ್ಡೆಗೂ ರಕ್ಷಿತ್ ಸವಾಲು ಹಾಕಿದ್ದರು.
ಆ ಸವಾಲನ್ನು ಸ್ವೀಕರಿಸಿರುವ ಕಿರಿಕ್ ಹುಡ್ಗಿ ಸಖತ್ತಾಗಿ ಸ್ಟೆಪ್ ಹಾಕಿದ್ದಾರೆ. ಅಲ್ಲದೆ ತಮ್ಮ ಜರ್ಮನಿಯ ಬಾಯ್ ಫ್ರೆಂಡ್ ಕ್ರಿಸ್ಗೆ ಈ ಚಾಲೆಂಜ್ ಮಾಡಿದ್ದು, ಕ್ರಿಸ್ ಆ ಚಾಲೆಂಜ್ ಸ್ವೀಕರಿಸಿ ಅವರೂ ಕೂಡ ಅವನೇ ಶ್ರೀಮನ್ನಾರಾಯಣನ ಸ್ಟೆಪ್ ಹಾಕಿದ್ದಾರೆ.
ಸ್ಟೆಪ್ ಹಾಕಿರುವ ಕ್ರಿಸ್, ವಿರಾಟ್ ಕೊಹ್ಲಿ ಮತ್ತು ಸಲ್ಮಾನ್ ಖಾನ್ಗೆ ಈ ಚಾಲೆಂಜ್ ಸ್ವೀಕರಿಸಲು ಹೇಳಿದ್ದಾರೆ. ಇನ್ನು ಈ ಇಬ್ಬರು ಮಾಡಿರುವ ಡ್ಯಾನ್ಸ್ ವಿಡಿಯೋವನ್ನು ತಮ್ಮ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ.