ಕರ್ನಾಟಕ

karnataka

ETV Bharat / sitara

ಟ್ರೋಲಿಗರ ಟೀಕೆಗಳಿಗೆ ಜಗ್ಗದ ಸಮೀರಾ ಮತ್ತೆ ಅದೇ ಕೆಲ್ಸ ಮಾಡಿದ್ರಾ? - news kannada

ಸೋಷಿಯಲ್​ ಸೈಟ್​ನಲ್ಲಿ ಬಿಕಿನಿ ಫೋಟೋಗಳನ್ನು ಹಾಕಿ ಸುದ್ದಿಗೆ ಆಹಾರವಾಗಿದ್ದ ನಟಿಯೊಬ್ಬಳು ಇದೀಗ ಮತ್ತೆ ಸುದ್ದಿಯ ಮುನ್ನೆಲೆಗೆ ಬಂದಿದ್ದಾಳೆ.

ನಟಿ ಸಮೀರಾ ರೆಡ್ಡಿ

By

Published : Jul 5, 2019, 8:57 AM IST

ಹೌದು, ಸ್ಯಾಂಡಲ್​ವುಡ್​ ಸೇರಿದಂತೆ ಇತರ ಸಿನಿಮಾಗಳಲ್ಲಿ ತೆರೆ ಹಂಚಿಕೊಂಡಿದ್ದ ನಟಿ ಸಮೀರಾ ರೆಡ್ಡಿ ಮತ್ತೆ ವೈರಲ್ ಆಗಿದ್ದಾರೆ. ತಾಯ್ತನದಲ್ಲಿರುವ ಸಮೀರಾ, ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಕೆಲವು ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ರು. ಇದಕ್ಕೆ ಕೆಲವು ನೆಟಿಜನ್​ಗಳು ಕೆಟ್ಟದಾಗಿ ಕಮೆಂಟ್​ ಮಾಡಿದ್ರೆ, ಇನ್ನು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರು.ಈಗಲೂ ನಟಿಯ ನಡೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ತಾಯ್ತನದ ತುಂಬು ದಿನದಲ್ಲಿರುವ ಅವರು ಈ ಬಾರಿ ಈಜುಕೊಳದಲ್ಲಿ ಫೋಟೋ ಶೂಟ್​ ಮಾಡಿಸಿಕೊಂಡಿದ್ದಾರೆ. ತಮ್ಮ 'ಇನ್‌ಸ್ಟಾಗ್ರಾಂ'ನಲ್ಲಿ ಈ ಫೋಟೋಗಳು ಹಂಚಿಕೊಂಡಿದ್ದು ಸಖತ್​ ವೈರಲ್ ಆಗಿದೆ.

ಈ ಮೊದಲಿನ ಫೋಟೋಗಳಿಗೆ ಟ್ರೋಲಿಗರು ಕೆಟ್ಟದಾಗಿ ಕಮೆಂಟ್​ ಮಾಡಿದ್ರು. ಈ​ ಟೀಕೆಗಳಿಗೆ ಜಗ್ಗದ ಸಮೀರಾ ಈಗ ಮತ್ತೊಂದು ಫೋಟೋ ಶೂಟ್​​ಗೆ ಪೋಸ್​ ನೀಡಿದ್ದಾರೆ. ಅಲ್ಲದೆ ಈ ಫೋಟೋಗಳಿಗೆ ಕ್ಯಾಪ್ಶನ್​ ಕೂಡ ಬರೆದುಕೊಂಡಿದ್ದಾರೆ.ಸಮೀರಾ 9 ತಿಂಗಳ ಗರ್ಭಿಣಿಯಂತೆ.

ABOUT THE AUTHOR

...view details