ಹೈದರಾಬಾದ್:'ಪುಷ್ಪಾ' ಚಿತ್ರದಲ್ಲಿನ ತಮ್ಮ ನೃತ್ಯದ ಮೂಲಕ ನಟಿ ಸಮಂತಾ ಭಾರಿ ಪ್ರಶಂಸೆಗೆ ಒಳಗಾಗುತ್ತಿದ್ದಾರೆ. ಈ ಚಿತ್ರದಲ್ಲಿನ ಇವರ ಐಟಂ ಸಾಂಗ್‌ನ ಸ್ಕ್ರೀನ್ ಪ್ರೆಸೆನ್ಸ್‌ಗಾಗಿ ಈ ಹೊಗಳಿಕೆ ವ್ಯಕ್ತವಾಗುತ್ತಿದೆ.
'ಊ ಅಂಟಾವಾ' ಹಾಡು ಮಾಡಲು ತಮಗೆ ಮೊದ ಮೊದಲಿಗೆ ಇಷ್ಟ ಇರಲಿಲ್ಲ. ಆದರೆ, ನಟ ಅಲ್ಲು ಅರ್ಜುನ್‌ನ ಪ್ರೇರಣೆಯಿಂದಾಗಿ ಐಟಂ ಸಾಂಗ್ನಲ್ಲಿ ಡ್ಯಾನ್ಸ್ ಮಾಡಲು ಒಪ್ಪಿಕೊಂಡೇ ಎಂದು ಸಮಂತಾ ಹೇಳಿಕೊಂಡಿದ್ದಾರೆ.
ತೆಲುಗಿನಲ್ಲಿ ಹವಾ ಕ್ರಿಯೇಟ್ ಮಾಡಿರುವ ಪುಷ್ಪಾ ಚಿತ್ರದಲ್ಲಿ ನಟ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸುಕುಮಾರ್ ಈ ಚಿತ್ರವನ್ನ ನಿರ್ದೇಶಿಸಿದ್ದಾರೆ. ಇನ್ನು ಐಟಂ ಸಾಂಗ್ನಲ್ಲಿ ಸಖತ್ ಸ್ಟೆಪ್ಸ್ ಹಾಕಿರುವ ಸಮಂತಾ ಈ ಚಿತ್ರದಲ್ಲಿ ತಮ್ಮ ಡ್ಯಾನ್ಸ್ನಿಂದಲೇ ಮಿಂಚುತ್ತಿದ್ದಾರೆ. ಈ ಹಾಡಿನ ಸಕ್ಸಸ್ನಿಂದ ಖುಷಿ ಆಗಿರುವ ಸಮಂತಾ ನಟ ಅಲ್ಲು ಅರ್ಜುನ್ ಅವರಿಗೆ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.