ಕರ್ನಾಟಕ

karnataka

ETV Bharat / sitara

ಮುಂದಿನ ಚಿತ್ರದಲ್ಲಿ ಜೋಡಿಯಾಗಿ ಮಿಂಚಲಿದ್ದಾರೆ ಸಮಂತಾ - ವಿಜಯ್ ದೇವರಕೊಂಡ? - ವಿಜಯ್ ದೇವರಕೊಂಡ ಹೊಸ ಸಿನಿಮಾ

ವಿಜಯ್ ದೇವರಕೊಂಡ ಮತ್ತು ಸಮಂತಾ ಪ್ರಮುಖ ಪಾತ್ರದಲ್ಲಿ ಪರದೆ ಹಂಚಿಕೊಳ್ಳುವ ತವಕದಲ್ಲಿದ್ದಾರೆ.

Samantha Ruth Prabhu, Vijay Deverakonda
ಸಮಂತಾ-ವಿಜಯ್ ದೇವರಕೊಂಡ

By

Published : Mar 23, 2022, 10:13 AM IST

ನಟ ಅಕ್ಕಿನೇನಿ ನಾಗ ಚೈತನ್ಯ ಅವರಿಂದ ವಿಚ್ಛೇದನ ಪಡೆದುಕೊಂಡ ಬಳಿಕ ದಕ್ಷಿಣ​ ಚಿತ್ರರಂಗದ ಖ್ಯಾತ ನಟಿ ಸಮಂತಾ ರುತ್ ಪ್ರಭು ತಮ್ಮ ವೃತ್ತಿ ಜೀವನದಲ್ಲಿ ಸಖತ್​ ಬ್ಯುಸಿಯಾಗಿದ್ದಾರೆ. ಒಂದರ ನಂತರ ಒಂದರಂತೆ ಚಿತ್ರ ಮಾಡುತ್ತಿದ್ದು, ಸಿನಿಮಾಗಳು ಹಿಟ್​ ಆಗುತ್ತಿವೆ. ಪುಷ್ಪ ಚಿತ್ರದಲ್ಲಿನ 'ಊ ಅಂಟಾವಾ' ಐಟಂ ಸಾಂಗ್​​​ನಲ್ಲಿ ಸೊಂಟ ಬಳುಕಿಸಿ ಮಿಂಚು ಹರಿಸಿದ್ದ ಸಮಂತಾ ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದ ಖುಷಿಯಲ್ಲಿ ತೇಲುತ್ತಿದ್ದಾರೆ.

ಜೋಡಿಯಾಗಿ ಮಿಂಚಲಿದ್ದಾರೆ ಸಮಂತಾ-ವಿಜಯ್ ದೇವರಕೊಂಡ

ಇನ್ನೂ ಟಾಲಿವುಡ್​ನ ಟಾಪ್​ ನಟ ವಿಜಯ್ ದೇವರಕೊಂಡ ಕೂಡ ಕಡಿಮೆಯೇನಿಲ್ಲ. ಹಿಟ್​ ಚಿತ್ರಗಲ ಮೂಲಕ ಸಾಕಷ್ಟು ಅಭಿಮಾನಿ ಬಳಗ ಹೊಂದಿರುವ ವಿಜಯ್ ದೇವರಕೊಂಡ ಇದೀಗ ನಟಿ ಸಮಂತಾ ಅವರೊಂದಿಗೆ ಸ್ಕ್ರೀನ್​ ಶೇರ್​ ಮಾಡಿಕೊಳ್ಳುವ ವಿಚಾರ ಬಹುತೇಕ ಖಚಿತವಾಗಿದ್ದು, ಅಧಿಕೃತ ಮಾಹಿತಿ ಹೊರ ಬೀಳಬೇಕಿದೆ.

ಇದನ್ನೂ ಓದಿ:ಇದೇ 25ಕ್ಕೆ ಬಹು ನಿರೀಕ್ಷಿತ RRR ರಿಲೀಸ್‌; ಥಿಯೇಟರ್‌ ಪರದೆ ಮುಂದೆ ಮುಳ್ಳುತಂತಿ ಬೇಲಿ ಅಳವಡಿಕೆ..!

ಇದು ಪ್ರೇಮಕಥೆ ಎನ್ನಲಾಗಿದ್ದು, ಈ ಇಬ್ಬರೂ ಇದೇ ಮೊದಲ ಬಾರಿಗೆ ಪ್ರಮುಖ ಪಾತ್ರದಲ್ಲಿ ಜೋಡಿಯಾಗಿ ಪರದೆ ಹಂಚಿಕೊಳ್ಳುವ ತವಕದಲ್ಲಿದ್ದಾರೆ. ಅಭಿಮಾನಿಗಳಲ್ಲಿಯೂ ಸಹ ಅಷ್ಟೇ ಕುತೂಹಲ ಹುಟ್ಟುಹಾಕಿದೆ. ಇನ್ನೂ ಹೆಚ್ಚಿನ ಚಿತ್ರೀಕರಣ ಕಾಶ್ಮೀರದಲ್ಲಿ ನಡೆಯಲಿದ್ದು, ಅಭಿಮಾನಿಗಳು ಕಾತುರರಾಗಿದ್ದಾರೆ.

ABOUT THE AUTHOR

...view details