ಹೈದರಾಬಾದ್ : ತೆಲುಗು ನಟ ಅಲ್ಲು ಅರ್ಜುನ್ ಬ್ಲಾಕ್ ಬಸ್ಟರ್ 'ಪುಷ್ಪ' ಸಿನಿಮಾದ ಐಟಂ ಸಾಂಗ್ನಲ್ಲಿ ಸೊಂಟ ಬಳುಕಿಸುವ ಮೂಲಕ ನಟಿ ಸಮಂತಾ ಸಾಕಷ್ಟು ಖ್ಯಾತಿ ಪಡೆದಿದ್ದು, ಬೇಡಿಕೆ ಕೂಡ ಹೆಚ್ಚಾಗಿದೆ. ಇದೀಗ ಮತ್ತೊಮ್ಮೆ ಗಮನ ಸೆಳೆದಿದ್ದಾರೆ.
ಮಾರ್ಚ್10ರಂದು ಮುಂಬೈನಲ್ಲಿ ನಡೆದ 4ನೇ ಆವೃತ್ತಿಯ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಸಮಂತಾ ಭಾಗವಹಿಸಿದ್ದರು. ಈ ವೇಳೆ ಸಮಂತಾ ಹಸಿರು ಬಣ್ಣದ ಗೌನ್ ಧರಿಸಿದ್ದರು.
ಈ ಕುರಿತಾದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗಿದ್ದವು. ಇದೀಗ ನಟಿಯ ಡ್ರೆಸ್ ಬಗ್ಗೆ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳಿಗೆ ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ.
'ಹಿಂದೆ ಇಟ್ಟಿರುವ ಬಟ್ಟೆಯನ್ನು ಮುಂದೆ ಹಾಕಿದ್ದರೆ ಉತ್ತಮ' ಎಂದೊಬ್ಬರು ಕಮೆಂಟ್ ಮಾಡಿದ್ದರೆ, ಮತ್ತೊಬ್ಬ ತಮಾಷೆಯಾಗಿ ‘ನನ್ನ ಮನೆಯ ಕರ್ಟನ್ ಸಿಕ್ಕಿದೆ' ಎಂದು ಬರೆದಿದ್ದಾರೆ.