ಕರ್ನಾಟಕ

karnataka

ETV Bharat / sitara

ಬೇರೆ ಸಂಬಂಧ​​, ಗರ್ಭಪಾತದ ವದಂತಿ ಬಗ್ಗೆ ಮೌನ ಮುರಿದ ಸಮಂತಾ.. ಏನ್​ ಹೇಳಿದ್ರು? - ಸಮಂತಾ ಇತ್ತೀಚಿನ ಸುದ್ದಿ

ಡಿವೋರ್ಸ್​ ಪಡೆದುಕೊಳ್ಳುತ್ತಿದ್ದಂತೆ ನಟಿ ಸಮಂತಾ ವಿರುದ್ಧ ಅನೇಕ ರೀತಿಯ ಗಂಭೀರ ಆರೋಪ ಕೇಳಿ ಬರುತ್ತಿದ್ದು, ಇದಕ್ಕೆ ಖುದ್ದಾಗಿ ನಟಿ ಉತ್ತರ ನೀಡಿದ್ದಾರೆ.

Samantha
Samantha

By

Published : Oct 8, 2021, 7:45 PM IST

ಹೈದರಾಬಾದ್​:ನಟ ನಾಗಚೈತನ್ಯ ಜೊತೆಗಿನ ದಾಂಪತ್ಯ ಜೀವನಕ್ಕೆ ವಿದಾಯ ಘೋಷಣೆ ಮಾಡಿರುವ ನಟಿ ಸಮಂತಾ, ಇದೀಗ ಅನೇಕ ವಿಷಯಗಳ ಬಗ್ಗೆ ಬಹಿರಂಗವಾಗಿ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಡಿವೋರ್ಸ್​​ ಘೋಷಣೆ ಮಾಡುತ್ತಿದ್ದಂತೆ ನಟಿ ವಿರುದ್ಧ ಅನೇಕ ರೀತಿಯ ಮಾತುಗಳು ಕೇಳಿ ಬರಲು ಶುರುವಾಗಿದ್ದು, ಇದಕ್ಕೆ ಖುದ್ದಾಗಿ ನಟಿ ಉತ್ತರ ನೀಡಿದ್ದಾರೆ.

ಕಳೆದ ನಾಲ್ಕು ವರ್ಷಗಳ ಹಿಂದೆ ನಾಗಚೈತನ್ಯ ಜೊತೆ ಅದ್ಧೂರಿಯಾಗಿ ಮದುವೆ ಮಾಡಿಕೊಂಡಿದ್ದ ನಟಿ ಸಮಂತಾ, ಕಳೆದ ವಾರ ದಿಢೀರ್​ ಆಗಿ ಬೇರೆ ಆಗುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ. ಇದಾದ ಬಳಿಕ ಅವರ ವಿರುದ್ಧ ಕೇಳಿ ಬಂದಿರುವ ಆರೋಪಗಳಿಗೆ ಉತ್ತರ ನೀಡುತ್ತಿದ್ದಾರೆ.

ಇದನ್ನೂ ಓದಿರಿ:ಮಹಿಳೆಯರು ತಪ್ಪು ಮಾಡಿದಾಗ ಪ್ರಶ್ನಿಸುವ ಸಮಾಜ, ಪುರುಷರನ್ನೇಕೆ ಪ್ರಶ್ನಿಸೋದಿಲ್ಲ?: ನಟಿ ಸಮಂತಾ​​

ನಟಿ ಸಮಂತಾ ಮಕ್ಕಳನ್ನ ಮಾಡಿಕೊಳ್ಳಲು ಇಷ್ಟವಿರಲಿಲ್ಲ. ಬೇರೆ ಸಂಬಂಧ ಇಟ್ಟುಕೊಂಡಿದ್ದರು. ಜೊತೆಗೆ ಗರ್ಭಪಾತ ಮಾಡಿಸಿಕೊಂಡಿದ್ದರು ಎಂಬ ಆರೋಪ ಕೇಳಿ ಬಂದಿದ್ದವು. ಇದರ ಬಗ್ಗೆ ಮೌನ ಮುರಿದಿರುವ ನಟಿ, ನನ್ನ ವೈಯಕ್ತಿಯ ವಿಷಯಗಳ ಬಗ್ಗೆ ನೀವು ಸ್ಪಂದನೆ ನೀಡಿರುವುದು ಖುಷಿ ನೀಡಿದೆ.

ಈ ವಿಚಾರದಲ್ಲಿ ನನ್ನ ಪರವಾಗಿ ನಿಂತಿರುವುದಕ್ಕೆ ನಿಮಗೆ ಧನ್ಯವಾದ. ನಿಮ್ಮ ಆಳವಾದ ಸಹಾನುಭೂತಿ, ಕಾಳಜಿಗೆ ನಾವು ಆಭಾರಿ. ನೀವು ಮಾಡಿರುವ ಆರೋಪಗಳು ಸುಳ್ಳು. ನನಗೆ ಬೇರೆ ಸಂಬಂಧವಿದೆ, ಮಕ್ಕಳನ್ನ ಪಡೆದುಕೊಳ್ಳಲು ಸಾಧ್ಯವಿಲ್ಲ ಹಾಗೂ ಗರ್ಭಪಾತ ಮಾಡಿಸಿಕೊಂಡಿದ್ದೇನೆ ಎಂಬ ಸುದ್ದಿ ಹರಿದಾಡುತ್ತಿದ್ದು, ಅದು ಸುಳ್ಳು. ವಿಚ್ಛೇದನ ಎಂಬುದು ನೋವಿನ ಸಂಗತಿಯಾಗಿದೆ ಎಂದಿದ್ದಾರೆ.

ಇದಕ್ಕೂ ಮೊದಲು ಮತ್ತೊಂದು ಫೋಸ್ಟ್ ಹಾಕಿಕೊಂಡಿದ್ದ ನಟಿ ಸಮಂತಾ, ಮಹಿಳೆಯರು ಯಾವುದೇ ಕೆಲಸ ಮಾಡಿದ್ರೂ, ಏನೇ ಮಾಡಿದರೂ ಅದನ್ನ ಎಲ್ಲರೂ ಪ್ರಶ್ನೆ ಮಾಡುತ್ತಾರೆ. ಆದರೆ, ಪುರುಷರು ಮಾಡಿರುವ ಕೆಲಸ ಹಾಗೂ ತಪ್ಪನ್ನೂ ಸಹ ಪ್ರಶ್ನೆ ಮಾಡಬೇಕು. ಆದರೆ, ಪುರುಷರು ಏನಾದರೂ ಮಾಡಿದಾಗ ಅದನ್ನು ನೈತಿಕ ಪ್ರಶ್ನೆ ಮಾಡುವುದಿಲ್ಲ ಎಂದಾದರೆ ನಮ್ಮ ಸಮಾಜದಲ್ಲಿ ನೈತಿಕತೆ ಇಲ್ಲ ಎಂದರ್ಥ ಎನ್ನುವ ಸಾಲು ಶೇರ್ ಮಾಡಿಕೊಂಡಿದ್ದರು.

ABOUT THE AUTHOR

...view details