ಕರ್ನಾಟಕ

karnataka

ETV Bharat / sitara

ಆಧ್ಯಾತ್ಮಿಕ ಸ್ಥಳಗಳಿಗೆ ಭೇಟಿ ನೀಡುತ್ತಿರುವ ಸಮಂತಾ: ಈಕೆ ಹೋಗಿದ್ದು ಒಬ್ಬಳೇ ಅಲ್ಲ! - ಶಿಲ್ಪಾರೆಡ್ಡಿ

ನಟಿ ಸಮಂತಾ, ನಾಗ ಚೈತ್ಯರಿಂದ ದೂರಾದ ಬಳಿಕ ಟೆಂಪಲ್​ರನ್​ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ರಿಷಿಕೇಷಕ್ಕೆ ಭೇಟಿ ನೀಡಿದ್ದ ಅವರು, ಇಂದು ಚಾರ್​ಧಾಮ್ ಯಾತ್ರೆ ಕೈಗೊಂಡಿದ್ದಾರೆ..

ಸಮಂತಾ ನಾಗ ಚೈತನ್ಯ
ಸಮಂತಾ ನಾಗ ಚೈತನ್ಯ

By

Published : Oct 22, 2021, 5:22 PM IST

Updated : Oct 22, 2021, 8:22 PM IST

ನಟ ನಾಗಚೈತನ್ಯರಿಂದ ದೂರಾದ ಬಳಿಕ ನಟಿ ಸಮಂತಾ ಆಧ್ಯಾತ್ಮಿಕತೆಯತ್ತ ವಾಲುತ್ತಿದ್ದಾರಾ ಎಂಬ ಪ್ರಶ್ನೆ ಉದ್ಭವವಾಗಿದೆ. ಅವರು ಇತ್ತೀಚೆಗಷ್ಟೇ ರಿಷಿಕೇಷಕ್ಕೆ ತೆರಳಿದ್ದರು. ಇದೀಗ ಅವರ ಗೆಳತಿ ಶಿಲ್ಪಾರೆಡ್ಡಿಯೊಂದಿಗೆ ಚಾರ್​ಧಾಮ್ ಯಾತ್ರೆಗೆ ತೆರಳಿದ್ದಾರೆ.

ಗೆಳತಿ ಶಿಲ್ಪಾರೆಡ್ಡಿ ಜತೆ ಸಮಂತಾ

ಚಾರ್​ಧಾಮ್ ಯಾತ್ರೆಯ ಫೋಟೋಗಳನ್ನು ಹಂಚಿಕೊಂಡಿರುವ ಶಿಲ್ಪಾರೆಡ್ಡಿ, ಮೊದಲು ಟೇಕ್​ ಆಫ್ ಮಾಡಿ ಎಂದು ಕ್ಯಾಪ್ಷನ್ ನೀಡಿದ್ದಾರೆ. ಫೋಟೋದಲ್ಲಿ ಸಮಂತಾ, ನೇರಳೆ ಬಣ್ಣದ ಚೂಡಿದಾರ್ ಧರಿಸಿದ್ದಾರೆ. ಶಿಲ್ಪಾರೆಡ್ಡಿ ಶರ್ಟ್​ ಮತ್ತು ಜೀನ್ಸ್ ಧರಿಸಿದ್ದಾರೆ.

ಗೆಳತಿಯೊಂದಿಗೆ ಸಮಂತಾ

ಇತ್ತೀಚೆಗಷ್ಟೇ ಸಮಂತಾ ರಿಷಿಕೇಶದಲ್ಲಿರುವ ಶ್ರೀ ಸ್ವಾಮಿ ಪುರುಷೋತ್ತಮಾನಂದ ಜೀ ಮಹಾರಾಜ್ ವಸಿಷ್ಠ್ ಆಶ್ರಮಕ್ಕೆ ಭೇಟಿ ನೀಡಿದ್ದರು. ಜತೆಗೇ, ಅಲ್ಲಿನ ಫೋಟೋಗಳನ್ನು ತಮ್ಮ ಇನ್​ಸ್ಟಾದಲ್ಲಿ ಹಂಚಿಕೊಂಡಿದ್ದರು. ಸಂತಸ ಬೇರೆಲ್ಲೂ ಇಲ್ಲ, ನಮ್ಮೊಳಗೆ ಇದೆ ಎಂದು ಶೀರ್ಷಿಕೆ ನೀಡಿದ್ದರು.

ಇದನ್ನೂ ಓದಿ: ವೈಯಕ್ತಿಕ ಬದುಕಿನ ಬಗ್ಗೆ ಸುಳ್ಳು ಸುದ್ದಿ ನೀಡಿದ್ದನ್ನು ಖಂಡಿಸಿ ಮಾನನಷ್ಟ ಮೊಕದ್ದಮೆ ಹೂಡಿದ ಸಮಂತಾ

ಕೆಲ ಸಮಯದ ಹಿಂದಷ್ಟೇ ಸಾಮಾಜಿಕ ಜಾಲತಾಣಗಳ ಮುಖಾಂತರ ಸಮಂತಾ ಹಾಗೂ ನಾಗ ಚೈತನ್ಯ ಪರಸ್ಪರ ದೂರವಾಗುತ್ತಿರುವ ನಿರ್ಧಾರವನ್ನು ಘೋಷಿಸಿದ್ದರು. ಇದೊಂದು ಕಠಿಣ ನಿರ್ಧಾರವಾಗಿದೆ. ಬಹಳ ನೋವು ನೀಡುತ್ತಿದೆ ಎಂದೂ ಅವರು ಬರೆದುಕೊಂಡಿದ್ದರು. ಇತ್ತೀಚೆಗೆ ಅವರು ಡಿವೋರ್ಸ್​​ ಕುರಿತು ಹರಿದಾಡುತ್ತಿರುವ ವೈಯಕ್ತಿಕ ದಾಳಿಯ ವಿರುದ್ಧ ಮಾತನಾಡಿ, ಅವುಗಳನ್ನು ಸಂಪೂರ್ಣ ನಿರಾಕರಿಸಿದ್ದರು.

Last Updated : Oct 22, 2021, 8:22 PM IST

ABOUT THE AUTHOR

...view details