ಟಾಲಿವುಡ್ ನಟಿ ಸಮಂತಾ ಅತ್ಯಂತ ಬ್ಯುಸಿ ನಟಿಯರಲ್ಲಿ ಒಬ್ಬರು. ಇತ್ತೀಚೆಗಷ್ಟೇ ಪುಷ್ಪ ಸಿನಿಮಾದಲ್ಲಿ 'ಹೂ ಅಂತಿಯಾ ಮಾವಾ?' ಐಟಂ ಸಾಂಗ್ನಲ್ಲಿ ಕಾಣಿಸಿಕೊಂಡು ಸಿನಿ ರಸಿಕರ ಎದೆಯಲ್ಲಿ ಕಿಚ್ಚು ಹಚ್ಚಿದ್ದ ಸಮಂತಾ ಈಗ ಹಾಡೊಂದಕ್ಕೆ ಡ್ಯಾನ್ಸ್ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.
ಬೀಸ್ಟ್ ಸಿನಿಮಾದ ಹಾಡಿಗೆ ಸಮಂತಾ ಡ್ಯಾನ್ಸ್: ವಿಡಿಯೋ ವೈರಲ್ - ಕನ್ನಡತಿ ಪೂಜಾ ಹೆಗಡೆ
ಟಾಲಿವುಡ್ ನಟಿ ಸಮಂತಾ ಕಾಲಿವುಡ್ನಲ್ಲಿ ಟಾಕ್ ಆಫ್ ದ ಟೌನ್ ಆಗುತ್ತಿರುವ ಬೀಸ್ಟ್ ಸಿನಿಮಾದ ಹಾಡಿಗೆ ಡ್ಯಾನ್ಸ್ ಮಾಡಿದ್ದು, ವಿಡಿಯೋ ವೈರಲ್ ಆಗಿದೆ.
ಬೀಸ್ಟ್ ಸಿನಿಮಾದ ಹಾಡಿಗೆ ಸಮಂತಾ ಡ್ಯಾನ್ಸ್: ವಿಡಿಯೋ ವೈರಲ್
ಕಾಲಿವುಡ್ನಲ್ಲಿ ಟಾಕ್ ಆಫ್ ದ ಟೌನ್ ಆಗುತ್ತಿರುವ ಬೀಸ್ಟ್ ಸಿನಿಮಾದ 'ಹಲಾಮಿತಿ ಹಬಿಬೋ' ಹಾಡಿಗೆ ಸಮಂತಾ ಏರ್ಪೋರ್ಟ್ನಲ್ಲಿ ಡ್ಯಾನ್ಸ್ ಮಾಡಿದ ವಿಡಿಯೋ ವೈರಲ್ ಆಗಿದೆ. ಇನ್ನು ಬೀಸ್ಟ್ ಸಿನಿಮಾದಲ್ಲಿ ನಟ ವಿಜಯ್ ಮತ್ತು ಕನ್ನಡತಿ ನಟಿ ಪೂಜಾ ಹೆಗಡೆ ಕಾಣಿಸಿಕೊಳ್ಳುತ್ತಿದ್ದು, ಸಿನಿಮಾದ ಮೇಲೆ ನಿರೀಕ್ಷೆಗಳು ಹೆಚ್ಚಾಗಿವೆ.
ಸಮಂತಾ ಪುಷ್ಪ ಸಿನಿಮಾದ ನಂತರ ಅನೇಕ ಚಿತ್ರಗಳಲ್ಲಿ ಬ್ಯುಸಿಯಾಗಿದ್ದು, ಯಶೋಧಾ ಎಂಬ ಸಿನಿಮಾ ಶೀಘ್ರದಲ್ಲೇ ತೆರೆಗೆ ಅಪ್ಪಳಿಸಲಿದೆ.