ಹೈದರಾಬಾದ್: 2017ರಲ್ಲಿ ಅದ್ಧೂರಿಯಾಗಿ ಮದುವೆ ಮಾಡಿಕೊಳ್ಳುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಸಮಂತಾ ಹಾಗೂ ನಾಗಚೈತನ್ಯ ಕಳೆದ ಮೂರು ದಿನಗಳ ಹಿಂದೆ ಬೇರೆ ಬೇರೆ ಆಗುತ್ತಿರುವುದಾಗಿ ಘೋಷಣೆ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲೇ ನಟಿ ಬಳಕೆ ಮಾಡುವ ಸಾಮಾಜಿಕ ಜಾಲತಾಣದ ಅಕೌಂಟ್ಗಳಾಗಿರುವ ಟ್ವಿಟರ್ ಹಾಗೂ ಇನ್ಸ್ಟಾಗ್ರಾಂನಲ್ಲೂ ಹೆಸರು ಬದಲಾಯಿಸಿಕೊಂಡಿದ್ದಾರೆ.
2017ರಲ್ಲಿ ನಾಗಚೈತನ್ಯ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಸಮಂತಾ ಅಕ್ಕಿನೇನಿ ಎಂದು ಖಾತೆಗೆ ಹೆಸರು ಇಟ್ಟುಕೊಂಡಿದ್ದರು. ಇದಾದ ಬಳಿಕ ಕಳೆದ ಕೆಲ ದಿನಗಳ ಹಿಂದೆ ಸಮಂತಾ ಎಂದಷ್ಟೇ ಉಳಿಸಿಕೊಳ್ಳುವ ಮೂಲಕ ಅನೇಕ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದ್ದರು. ಇದರ ಬೆನ್ನಲ್ಲೇ ವಿಚ್ಛೇದನ ಅಧಿಕೃತವಾಗುತ್ತಿದ್ದಂತೆ ಇದೀಗ ಸಮಂತಾ ರುತ್ ಪ್ರಭು ಎಂದು ಬದಲಾಯಿಸಿಕೊಂಡಿದ್ದಾರೆ.