ಹೈದರಾಬಾದ್: ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ತನ್ನದೇ ಛಾಪು ಮೂಡಿಸಿರುವ ನಟಿ ಸಮಂತಾ ಹಾಗೂ ನಟ ನಾಗ ಚೈತನ್ಯ ಡಿವೋರ್ಸ್ ನೀಡಲಿದ್ದಾರೆ ಎಂಬ ಊಹಾಪೋಹಾಗಳಿಗೆ ತೆರೆಬಿದ್ದಿದೆ. ಇದು ಕೇವಲ ವದಂತಿ ಅಲ್ಲ, ಸತ್ಯ ಎಂಬುದನ್ನು ದಂಪತಿ ತಿಳಿಸಿದ್ದಾರೆ. ನಾವಿಬ್ಬರೂ ಪತಿ -ಪತ್ನಿಯಾಗಿ ಬೇರೆಯಾಗುತ್ತಿದ್ದು, ನಮ್ಮ ಸ್ನೇಹ ಹಾಗೇ ಇರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ನಾಗ ಚೈತನ್ಯ, "ಬಹಳ ಆಲೋಚನೆ ಮಾಡಿದ ಬಳಿಕ ನಾನು ಮತ್ತು ಸ್ಯಾಮ್ (ಸಮಂತಾ) ಗಂಡ ಮತ್ತು ಹೆಂಡತಿಯಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ಒಂದು ದಶಕದ ಕಾಲ ಸ್ನೇಹಿತರಾಗಿರಲು ನಾವು ಅದೃಷ್ಟಶಾಲಿಯಾಗಿದ್ದೇವೆ. ಈ ಸ್ನೇಹ ನಮ್ಮ ನಡುವೆ ವಿಶೇಷ ಬಾಂಧವ್ಯವಾಗಿ ಎಂದಿಗೂ ಇರಲಿದೆ ಎಂದು ನಾವು ಭಾವಿಸುತ್ತೇವೆ. ಈ ಕಷ್ಟದ ಸಮಯದಲ್ಲಿ ನಮ್ಮ ಅಭಿಮಾನಿಗಳು, ಹಿತೈಷಿಗಳು ಮತ್ತು ಮಾಧ್ಯಮಗಳು ನಮ್ಮನ್ನು ಬೆಂಬಲಿಸಬೇಕು ಮತ್ತು ನಮಗೆ ಬೇಕಾದ ಖಾಸಗಿತನವನ್ನ ನಮಗೆ ನೀಡಬೇಕೆಂದು ನಾವು ವಿನಂತಿಸುತ್ತೇವೆ. ನಿಮ್ಮ ಬೆಂಬಲಕ್ಕೆ ಧನ್ಯವಾದಗಳು" ಎಂದು ಹೇಳಿದ್ದಾರೆ.
ಇದನ್ನೂ ಓದಿ: Watch- 'ಬುದ್ಧಿ ಇದೆಯಾ?' ಪತಿಯಿಂದ ದೂರಾಗುವ ಬಗ್ಗೆ ವರದಿಗಾರನ ಪ್ರಶ್ನೆಗೆ ಸಮಂತಾ ಕೆಂಡಾಮಂಡಲ