ಕರ್ನಾಟಕ

karnataka

ETV Bharat / sitara

ಲಕ್ಷ ಗಿಡಗಳನ್ನು ನೆಡಲು ಅಭಿಮಾನಿಗಳ ಬೆಂಬಲ ಕೋರಿದ ಸಮಂತಾ ಅಕ್ಕಿನೇನಿ! - ಸದ್ಗುರು ಜಗ್ಗಿವಾಸುದೇವ್​​

ಟಾಲಿವುಡ್ ನಟಿ ಸಮಂತಾ ಅಕ್ಕಿನೇನಿ ಕಾವೇರಿ ಕೂಗು ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ವಿಡಿಯೋವೊಂದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಸಮಂತಾ ಅಭಿಮಾನಿಗಳ ಜೊತೆ ಸೇರಿ ನಾನು ಒಂದು ಲಕ್ಷ ಗಿಡಗಳನ್ನು ನೆಡಲು ನಿರ್ಧರಿಸಿದ್ದೇನೆ. ಇದಕ್ಕೆ ನಿಮ್ಮ ಬೆಂಬಲ ನೀಡಿ ಎಂದು ಮನವಿ ಮಾಡಿದ್ದಾರೆ.

ಸಮಂತಾ ಅಕ್ಕಿನೇನಿ

By

Published : Aug 25, 2019, 4:45 PM IST

ಕಾವೇರಿ ನದಿ ಸಂರಕ್ಷಣೆಗಾಗಿ ಇಶಾ ಫೌಂಡೇಶನ್ ಸಂಸ್ಥೆಯ ಸದ್ಗುರು ಜಗ್ಗಿವಾಸುದೇವ್​​ ಅಂಕಿತ ಹಾಕಿರುವುದು ತಿಳಿದಿರುವ ಸಂಗತಿ. ರಕ್ಷಿತ್ ಶೆಟ್ಟಿ, ಹರಿಪ್ರಿಯಾ ಹಾಗೂ ಇನ್ನಿತರ ಸೆಲಬ್ರೆಟಿಗಳು 'ಕಾವೇರಿ ಅಭಿಯಾನ'ಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ.

ಇದೀಗ ಈ ಅಭಿಯಾನಕ್ಕೆ ತೆಲುಗು ನಟಿ ಸಮಂತಾ ಅಕ್ಕಿನೇನಿ ಕೂಡಾ ಕೈ ಜೋಡಿಸಿದ್ದಾರೆ. ಒಂದು ಲಕ್ಷ ಗಿಡಗಳನ್ನು ನೆಡಲು ಸಮಂತಾ ಅಕ್ಕಿನೇನಿ ನಿರ್ಧರಿಸಿದ್ದಾರೆ. 'ದೇಶದಲ್ಲಿ ನಾವು ಎದುರಿಸುತ್ತಿರುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ನಾವೂ ಕೂಡಾ ಕೈ ಜೋಡಿಸಬೇಕಿದೆ. ಈ ಸಮಸ್ಯೆಗೆ ಇದೀಗ ಪರಿಹಾರ ದೊರೆಯುತ್ತಿದೆ. 'ಕಾವೇರಿ ಕೂಗು' ಅಭಿಯಾನಕ್ಕೆ ನಾವೆಲ್ಲಾ ಬೆಂಬಲಿಸಬೇಕಿದೆ. ನನ್ನ ಅಭಿಮಾನಿಗಳೊಂದಿಗೆ ನಾನು ಒಂದು ಲಕ್ಷ ಗಿಡ ನೆಡಲು ಸಿದ್ಧಳಿದ್ದೇನೆ. ಇದಕ್ಕೆ ಎಲ್ಲರೂ ಸಹಕರಿಸಬೇಕಿದೆ' ಎಂದು ಸಮಂತಾ ಹೇಳಿದ್ದಾರೆ. ಈ ವಿಡಿಯೋವನ್ನು ಸ್ಯಾಮ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ABOUT THE AUTHOR

...view details