ಟಾಲಿವುಡ್ ನಟಿ ಸಮಂತ ಅಕ್ಕಿನೇನಿ ಸಿನಿಮಾ ಹೊರತು ಪಡಿಸಿ ಕೆಲವೊಂದು ಸಾಮಾಜಿಕ ಕಾರ್ಯಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದೀಗ ರಾಮ್ ಚರಣ್ ತೇಜ ಪತ್ನಿ ಉಪಾಸನಾ ಕೊನಿಡೇಲ ವ್ಯವಸ್ಥಾಪಕ ನಿರ್ದೇಶಕರಾಗಿರುವ 'ಯುವರ್ ಲೈಫ್'ಗೆ ಸಮಂತ ಅತಿಥಿ ಸಂಪಾದಕಿಯಾಗಿದ್ದಾರೆ. ಇದೊಂದು ಹೆಲ್ತ್ ವೆಬ್ಸೈಟ್.
ಬ್ಯುಸಿ ಜೀವನದಲ್ಲಿ ಆರೋಗ್ಯದ ಕಡೆ ಗಮನ ಕೊಡುವುದು ಬಹಳ ಮುಖ್ಯವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಈ ಜಾಲತಾಣದ ಮೂಲಕ ವೃತ್ತಿಪರ ವೈದ್ಯರು, ಆಹಾರ ತಜ್ಞರು, ಫಿಟ್ನೆಸ್ ತರಬೇತುದಾರರು ತಮ್ಮ ಅನುಭವ, ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ..? ಯಾವ ಬಗೆಯ ಆಹಾರ ಪದ್ಧತಿ ಅನುಸರಿಸಿದರೆ ಕಾಯಿಲೆಗಳಿಂದ ಮುಕ್ತರಾಗಬಹುದು ಎಂಬೆಲ್ಲಾ ಮಾಹಿತಿಗಳನ್ನು ಯುವರ್ ಲೈಫ್ ವೆಬ್ಸೈಟ್ನಲ್ಲಿ ಬರವಣಿಗೆ ಮತ್ತು ತಜ್ಞರ ವಿಡಿಯೋಗಳ ಮೂಲಕ ಜನಸಾಮಾನ್ಯರಿಗೆ ತಲುಪಿಸಲಾಗುತ್ತಿದೆ.