ಕರ್ನಾಟಕ

karnataka

ETV Bharat / sitara

ಮೊದಲ ಬಾರಿಗೆ ವಿಭಿನ್ನ, ನೆಗೆಟಿವ್​​​ ರೋಲ್​​ನಲ್ಲಿ ನಟಿಸುತ್ತಿರುವ ಸ್ಯಾಮ್​​​​​​​ - ವೆಬ್​​ ಸೀರೀಸ್​ನಲ್ಲಿ ಸಮಂತಾ ಅಕ್ಕಿನೇನಿ

'ದಿ ಫ್ಯಾಮಿಲಿ ಮ್ಯಾನ್​​​​​​ 2' ಎಂಬ ಸೀರೀಸ್​​​ನಲ್ಲಿ ಸಮಂತಾ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಸಮಂತಾ ಅಕ್ಕಿನೇನಿ

By

Published : Nov 12, 2019, 9:33 AM IST

'ಏಂ ಮಾಯಮ್ ಚೇಸಾವೆ' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ಸಮಂತಾ ಅಕ್ಕಿನೇನಿ, ನಾಯಕಿಯಾಗಿ ಹಾಗೂ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದೇ ಮೊದಲ ಬಾರಿಗೆ ಅವರು ನೆಗೆಟಿವ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಸಮಂತಾ ಅಕ್ಕಿನೇನಿ

ಆದರೆ ಸಮಂತಾ ನೆಗೆಟಿವ್ ರೋಲ್​​ನಲ್ಲಿ ನಟಿಸುತ್ತಿರುವುದು ಸಿನಿಮಾದಲ್ಲಿ ಅಲ್ಲ, ವೆಬ್​ ಸೀರೀಸ್​ನಲ್ಲಿ. 'ದಿ ಫ್ಯಾಮಿಲಿ ಮ್ಯಾನ್​​​​​​ 2' ಎಂಬ ಸೀರೀಸ್​​​ನಲ್ಲಿ ಸಮಂತಾ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಸೀರೀಸ್​​ನಲ್ಲಿ ಸ್ಯಾಮ್, ಟೆರರಿಸ್ಟ್​​​​​​​​​​​ ಆಗಿ ನಟಿಸುತ್ತಿದ್ದಾರೆ ಎಂದು ಸುದ್ದಿ. ಮನೋಜ್ ಬಾಜ್​​ಪಾಯ್​​​​​​, ಪ್ರಿಯಾಮಣಿ, ಸಂದೀಪ್ ಕಿಷನ್​ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸ್ಪೈ ಥ್ರಿಲ್ಲರ್​​​​​​​​ 'ಫ್ಯಾಮಿಲಿ ಮ್ಯಾನ್​' ಸೀರೀಸ್​, ಇದೇ ಸೆಪ್ಟೆಂಬರ್​​ನಲ್ಲಿ ಅಮೆಜಾನ್ ಪ್ರೈಂನಲ್ಲಿ ಪ್ರಸಾರವಾಗಿತ್ತು. ಇದೀಗ ಈ ಸೀರೀಸ್​​​​​ ಸೀಕ್ವೆಲ್ ಚಿತ್ರೀಕರಣವಾಗುತ್ತಿದೆ. 'ಫ್ಯಾಮಿಲಿ ಮ್ಯಾನ್​ -2' ರಲ್ಲಿ ಸಮಂತಾ ಪಾತ್ರಕ್ಕೆ ಹೆಚ್ಚಿನ ಪ್ರಾಧ್ಯಾನತೆ ಇದೆ ಎನ್ನಲಾಗಿದೆ.

ಈ ವೆಬ್​ ಸೀರೀಸ್​​​ನಲ್ಲಿ ಸಮಂತಾ ಟೆರರ್ರಿಸ್ಟ್​ ಪಾತ್ರದಲ್ಲಿ ನಟಿಸುತ್ತಿರುವುದರಿಂದ ಈ ಸೀರೀಸ್ ಮೇಲೆ ಮತ್ತಷ್ಟು ಕುತೂಹಲ ಹೆಚ್ಚಾಗಿದೆ. ಮೊದಲ ಸೀರೀಸ್​ಗಿಂತ ಈ ಸೀಕ್ವೆಲ್​​​ಗೆ ಇನ್ನೂ ಹೆಚ್ಚಿನ ಜನಮನ್ನಣೆ ಸಿಗುತ್ತದೆ ಎಂದು ಸೀರೀಸ್ ತಯಾರಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈಗಾಗಲೇ ವೆಬ್​​​ಸೀರೀಸ್ ಶೂಟಿಂಗ್ ಆರಂಭವಾಗಿದೆ. ಸಮಂತಾ ಕೂಡಾ ಶೀಘ್ರವೇ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಹಿಂದಿ, ತಮಿಳು ಹಾಗೂ ತೆಲುಗು ಮೂರು ಭಾಷೆಗಳಲ್ಲಿ ಇದು ಪ್ರಸಾರವಾಗಲಿದೆ. ಮತ್ತೊಂದೆಡೆ ಸಮಂತಾ ತಮಿಳಿನ '96' ಸಿನಿಮಾ ರಿಮೇಕ್​​​ನಲ್ಲಿ ನಟಿಸುತ್ತಿದ್ದಾರೆ.

ABOUT THE AUTHOR

...view details