ಕರ್ನಾಟಕ

karnataka

ETV Bharat / sitara

ಇನ್​ಸ್ಟಾಗ್ರಾಮ್​​ನಲ್ಲಿ 15 ಮಿಲಿಯನ್​ ಹಿಂಬಾಲಕರನ್ನು ಸಂಪಾದಿಸಿದ ಸಮಂತಾ - Samantha Akkineni celebrated 15 million followers

ನಿಮ್ಮಿಂದ ನಿಮ್ಮ ಲೈಕ್​ ಮತ್ತು ಕಮೆಂಟ್​​ಗಳಿಂದ ಸಹಾಯವಾಗಿದೆ. ಅಲ್ಲದೆ ನನಗೆ ನಿಮ್ಮ ಸೂಚನೆಗಳು ಸ್ಪೂರ್ತಿಯಾಗಿವೆ ಎಂದು ಬರೆದುಕೊಂಡಿದ್ದಾರೆ..

ಇನ್​ಸ್ಟಾಗ್ರಾಮ್​​ನಲ್ಲಿ 15 ಮಿಲಿಯನ್​ ಹಿಂಬಾಲಕರನ್ನು ಸಂಪಾದಿಸಿದ ಸಮಂತಾ
ಇನ್​ಸ್ಟಾಗ್ರಾಮ್​​ನಲ್ಲಿ 15 ಮಿಲಿಯನ್​ ಹಿಂಬಾಲಕರನ್ನು ಸಂಪಾದಿಸಿದ ಸಮಂತಾ

By

Published : Feb 6, 2021, 6:45 PM IST

ತೆಲುಗು ನಟಿ ಸಮಂತಾ ಅಕ್ಕಿನೇನಿ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟೀವ್​ ಆಗಿರುವ ನಟಿ. ತಮ್ಮ ಜೀವನ ಪಯಣದ ಪ್ರಮುಖ ಮಜಲುಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡುತ್ತ ಅಭಿಮಾನಿಗಳ ಜತೆ ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಾರೆ. ಇದೀಗ ಸಮಂತಾಗೆ ತಮ್ಮ ಇನ್​ಸ್ಟಾ ಫ್ಯಾಮಿಲಿಯಿಂದ ಬಿಗ್​​ ಗಿಫ್ಟ್​​ ಸಿಕ್ಕಿದೆ.

ತಮ್ಮ ಇನ್​ಸ್ಟಾಗ್ರಾಮ್​​ನಲ್ಲಿ ಬರೋಬ್ಬರಿ 15 ಮಿಲಿಯನ್​​ ಹಿಂಬಾಲಕರನ್ನು ಸಂಪಾದನೆ ಮಾಡಿದ್ದಾರೆ. ತಮ್ಮನ್ನು ಫಾಲೋ ಮಾಡುವ ಈ ಅಭಿಮಾನಿಗಳಿಗೆಲ್ಲ ಸಮಂತಾ ಧನ್ಯವಾದ ತಿಳಿಸಿದ್ದಾರೆ.

ಈ ಬಗ್ಗೆ ಇನ್​ಸ್ಟಾದಲ್ಲಿ ಪೋಸ್ಟ್​ ಮಾಡಿದ್ದು, ನನ್ನ ಪೋಸ್ಟ್​​ಗೆ ಲೈಕ್​​, ಕಮೆಂಟ್​ ಮಾಡಿ ಪ್ರೋತ್ಸಾಹ ನೀಡುವ ನಿಮಗೆಲ್ಲರಿಗೂ ಧನ್ಯವಾದಗಳು.

ನಿಮ್ಮಿಂದ ನಿಮ್ಮ ಲೈಕ್​ ಮತ್ತು ಕಮೆಂಟ್​​ಗಳಿಂದ ಸಹಾಯವಾಗಿದೆ. ಅಲ್ಲದೆ ನನಗೆ ನಿಮ್ಮ ಸೂಚನೆಗಳು ಸ್ಪೂರ್ತಿಯಾಗಿವೆ ಎಂದು ಬರೆದುಕೊಂಡಿದ್ದಾರೆ.

ಸಮಂತಾ ಅಕ್ಕಿನೇನಿ ನಾಗಾರ್ಜುನ ಪುತ್ರ ನಾಗಚೈತ್ಯರನ್ನು ಮದುವೆಯಾಗಿದ್ದಾರೆ. ಈ ದಂಪತಿಯು ತಮ್ಮ ಲೈಫ್​​ ಬಗ್ಗೆ ಆಗಾಗ ಇನ್​ಸ್ಟಾಗ್ರಾಮ್​​ನಲ್ಲಿ ಪೋಸ್ಟ್​ ಮಾಡ್ತಾನೆ ಇರ್ತಾರೆ. ಅದ್ರಲ್ಲೂ ಲಾಕ್​ಡೌನ್​ ಸಂದರ್ಭದಲ್ಲಿ ಸಮಂತಾ ಸಾಕಷ್ಟು ಪೋಸ್ಟ್​​ಗಳನ್ನು ಮಾಡಿದ್ದು, ಆ ಮೂಲಕ ಅಭಿಮಾನಿಗಳಿಗೆ ಖುಷಿ ನೀಡಿದ್ದರು.

ಸದ್ಯ ನಟಿಯು ಫ್ಯಾಮಿಲಿ ಮ್ಯಾನ್​ 2 ವೆಬ್​ ಸಿರೀಸ್​​ನಲ್ಲಿ ಬ್ಯುಸಿ ಇದ್ದಾರೆ. ಅಮೇಜಾನ್​ ಪ್ರೈಮ್​ ವಿಡಿಯೋದಲ್ಲಿ ಮುಂಬರುವ ಬೇಸಿಗೆಗೆ ಈ ವೆಬ್​ ಸಿರೀಸ್​ ತೆರೆ ಕಾಣುತ್ತಿದೆ. ಈ ಹಿಂದೆ ರಿಲೀಸ್​ ಆಗಿದ್ದ ಫ್ಯಾಮಿಲಿ ಮ್ಯಾನ್​​ ಮೊದಲ ಭಾಗ ಸಖತ್​ ಹಿಟ್​ ಆಗಿದೆ.

ABOUT THE AUTHOR

...view details