ಹೈದರಾಬಾದ್: ಬಾಲಿವುಡ್ ನಟ ಅಮೀರ್ ಖಾನ್ ಅವರ 'ಲಾಲ್ ಸಿಂಗ್ ಚಡ್ಡಾ' ಸಿನಿಮಾದಲ್ಲಿ ಸಲ್ಮಾನ್ ಖಾನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಸುದ್ದಿಯ ಬೆನ್ನಲ್ಲೇ, ಶಾರುಖ್ ಖಾನ್ ಅವರ ಮುಂಬರುವ ಸಿನಿಮಾದಲ್ಲಿ ಸಲ್ಲು ಅತಿಥಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
'ಪಥನ್' ಮೂಲಕ ತೆರೆ ಮೇಲೆ ಸಲ್ಲು-ಶಾರುಖ್: ಮೋಡಿ ಮಾಡಲಿದೆಯೇ ಈ ಜೋಡಿ - ಶಾರುಖ್ ಖಾನ್ ಸುದ್ದಿ
ಬಾಲಿವುಡ್ ಬಾದ್ಶಾ ಶಾರುಖ್ ಖಾನ್ ಅಭಿನಯದ 'ಪಥನ್' ಚಿತ್ರದಲ್ಲಿ ಬ್ಯಾಡ್ಬಾಯ್ ಸಲ್ಮಾನ್ ಖಾನ್ ಕಾಣಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವರದಿಗಳ ಪ್ರಕಾರ, ಸಿದ್ಧಾರ್ಥ್ ಆನಂದ್ ನಿರ್ದೇಶನದ ಶಾರುಕ್ ಅಭಿನಯದ ಮುಂದಿನ 'ಪಥನ್' ಚಿತ್ರದಲ್ಲಿ ಸಲ್ಮಾನ್ ಮಹತ್ವದ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರಂತೆ. ಪ್ರಸ್ತುತ ಆ್ಯಂಟಿಮ್ ಚಿತ್ರದ ಚಿತ್ರೀಕರಣ ನಡೆಸುತ್ತಿರುವ ಭಾಯ್ಜಾನ್, ಪಥನ್ ಸಿನಿಮಾದಲ್ಲಿ ತಮ್ಮ 15 ನಿಮಿಷಗಳ ಅವಧಿಯ ಸೀನ್ ಚಿತ್ರೀಕರಣಕ್ಕಾಗಿ ಸದ್ಯ ಯುಎಇಗೆ ಪ್ರಯಾಣ ಬೆಳೆಸಿದ್ದಾರೆ.
ಬಾಲಿವುಡ್ ನಟ ಹೃತಿಕ್ ರೋಷನ್ ಸಹ ಇದೇ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ ಈ ಹಿಂದೆ ಝೀರೋ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಪಥನ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದು, ಜಾನ್ ಅಬ್ರಹಂ ವಿಲನ್ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ.