'ಬಾಲಿವುಡ್ ಬ್ಯಾಡ್ ಬಾಯ್' ಸಲ್ಮಾನ್ ಖಾನ್ ಒಂದಲ್ಲೊಂದು ವಿಚಾರವಾಗಿ ಸುದ್ದಿ ಆಗ್ತಿರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ತರಹೇವಾರಿ ಫೋಟೋಗಳನ್ನು ಹಾಕುವ ಸಲ್ಲು ಅಭಿಮಾನಿಗಳ ಚಿತ್ತವನ್ನು ತಮ್ಮತ್ತ ಸೆಳೆಯುತ್ತಾರೆ.
ಶರ್ಟ್ ಬಿಚ್ಚಿ ಕಟ್ಟುಮಸ್ತು ದೇಹ ತೋರಿಸಿದ 'ಬ್ಯಾಡ್ ಬಾಯ್' - ಸಲ್ಮಾನ್ ಖಾನ್ ಸುದ್ದಿ
ಭರ್ಜರಿ ಮೈಕಟ್ಟು ಹೊಂದಿರುವ ಸಲ್ಮಾನ್ ಖಾನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋ ಒಂದನ್ನು ಹಾಕಿದ್ದಾರೆ. ಫೋಟೋದಲ್ಲಿ ಸಿಕ್ಸ್ ಪ್ಯಾಕ್ ಪ್ರದರ್ಶಿಸಿ ಕ್ಯಾಮೆರಾಕ್ಕೆ ಗಂಭೀರ ಪೋಸ್ ಕೊಟ್ಟಿದ್ದಾರೆ.
![ಶರ್ಟ್ ಬಿಚ್ಚಿ ಕಟ್ಟುಮಸ್ತು ದೇಹ ತೋರಿಸಿದ 'ಬ್ಯಾಡ್ ಬಾಯ್' Salman Khan shows off his washboard abs](https://etvbharatimages.akamaized.net/etvbharat/prod-images/768-512-9820476-thumbnail-3x2-giri.jpg)
ಮತ್ತೆ ಶರ್ಟ್ ಬಿಚ್ಚಿದ 'ಬ್ಯಾಡ್ ಬಾಯ್'
ಹುರಿಗಟ್ಟಿದ ದೇಹವನ್ನು ತೋರಿಸಿರುವ ಭಜರಂಗಿ ಭಾಯಿಜಾನ್ ನಟ 'ಸದೃಢರಾಗಿ' ಎಂದು ಬರೆದಿದ್ದಾರೆ. ಮತ್ತೊಂದು ಪದವನ್ನೂ ಬರೆದಿದ್ದು 'ಜಗತ್ತು ಸದೃಢವಾಗಲಿ' ಎಂದಿದ್ದಾರೆ.
ಸಲ್ಮಾನ್ ವೃತ್ತಿ ಜೀವನದ ಕಡೆ ನೋಡುವುದಾದ್ರೆ, ಸದ್ಯ ರಾಧೆ ಚಿತ್ರದಲ್ಲಿ ನಟಿಸಿದ್ದಾರೆ. ಹಿಂದಿಯಲ್ಲಿ ಮೂಡಿ ಬರುತ್ತಿರುವ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಕರಾಗಿಯೂ ಕೆಲಸ ಮಾಡುತ್ತಾರೆ.