ಕರ್ನಾಟಕ

karnataka

By

Published : Feb 5, 2021, 5:24 PM IST

Updated : Feb 5, 2021, 6:45 PM IST

ETV Bharat / sitara

ಕೃಷ್ಣ ಮೃಗ ಬೇಟೆ ಪ್ರಕರಣ: ಸಲ್ಮಾನ್​ ಖಾನ್​ಗೆ ರಿಲೀಫ್​​​​

​​ಕೃಷ್ಣ ಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನಿಂದಲೇ ವಿಡಿಯೋ ಕಾನ್ಫರೆನ್ಸ್​​​ ಮೂಲಕ ವಿಚಾರಣೆಗೆ ಹಾಜರಾಗಲು ಅನುಮತಿ ನೀಡಬೇಕೆಂದು ಸಲ್ಮಾನ್​ ಖಾನ್​​​ ರಾಜಸ್ಥಾನ​​ ಹೈಕೋರ್ಟ್​​ಗೆ ಮನವಿ ಮಾಡಿದ್ದರು. ಈ ಸಂಬಂಧ ಸೆಷನ್​ ಕೋರ್ಟ್​​ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿದ್ದು, ಇದನ್ನು ಪ್ರಶ್ನಿಸಿ ರಾಜಸ್ಥಾನ​ ಹೈಕೋರ್ಟ್​ಗೆ ಖಾನ್​​ ಅರ್ಜಿ ಸಲ್ಲಿಸಿದ್ದರು. ಇದೀಗ ಸಲ್ಮಾನ್​ ಖಾನ್​ಗೆ ಕೋರ್ಟ್​ ಅನುಮತಿ ನೀಡಿದೆ.

ಕೃಷ್ಣ ಮೃಗ ಬೇಟೆ ಪ್ರಕರಣ :  ವಿಡಿಯೋ ಕಾನ್ಫರೆನ್ಸ್​​ನಲ್ಲಿ ವಿಚಾರಣೆ ಎದುರಿಸುತ್ತೇನೆಂದ ಸಲ್ಮಾನ್​​
ಕೃಷ್ಣ ಮೃಗ ಬೇಟೆ ಪ್ರಕರಣ : ವಿಡಿಯೋ ಕಾನ್ಫರೆನ್ಸ್​​ನಲ್ಲಿ ವಿಚಾರಣೆ ಎದುರಿಸುತ್ತೇನೆಂದ ಸಲ್ಮಾನ್​​

​​ರಾಜಸ್ಥಾನ: ಕೃಷ್ಣ ಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನಿಂದಲೇ ವಿಡಿಯೋ ಕಾನ್ಫರೆನ್ಸ್​​​ ಮೂಲಕ ವಿಚಾರಣೆಗೆ ಹಾಜರಾಗಲು ಅನುಮತಿ ನೀಡಬೇಕೆಂದು ಸಲ್ಮಾನ್​ ಖಾನ್​​​ ರಾಜಸ್ಥಾನ​​ ಹೈಕೋರ್ಟ್​​ಗೆ ಮನವಿ ಮಾಡಿದ್ದರು. ಮನವಿ ಪರಿಗಣಿಸಿರುವ ನ್ಯಾಯಾಲಯ, ಇದಕ್ಕೆ ಒಪ್ಪಿಗೆ ನೀಡಿದೆ.

ಈ ಸಂಬಂಧ ಸೆಷನ್​ ಕೋರ್ಟ್​​ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿದ್ದು, ಇದನ್ನು ಪ್ರಶ್ನಿಸಿ ರಾಜಸ್ಥಾನ​ ಹೈಕೋರ್ಟ್​ಗೆ ಖಾನ್​​ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆಯು ರಾಜಸ್ಥಾನ ಸೆಷನ್​ ಕೋರ್ಟ್​​ನಲ್ಲಿ ಫೆಬ್ರವರಿ 6ರಂದು ನಡೆಯಲಿದೆ.

ಮುಖ್ಯ ನ್ಯಾಯಮೂರ್ತಿ ಇಂದ್ರಜಿತ್ ಮಹಾಂತಿ ಮತ್ತು ನ್ಯಾಯಮೂರ್ತಿ ದಿನೇಶ್ ಮೆಹ್ತಾ ಅವರಿದ್ದ ವಿಭಾಗೀಯ ಪೀಠವು ಅರ್ಜಿಯನ್ನು ಸ್ವೀಕರಿಸಿ, ವಿಡಿಯೋ ಕಾನ್ಫರೆನ್ಸ್​ ಮೂಲಕ ವಿಚಾರಣೆಗೆ ಹಾಜರಾಗಲು ಅನುಮತಿ ನೀಡಲಾಗಿದೆ.

ಇದೇ ಪ್ರಕಣದಲ್ಲಿ ಭಾಗಿಯಾಗಿದ್ದ ಸೈಫ್ ಅಲಿ ಖಾನ್, ಟಬು, ನೀಲಂ, ಸೋನಾಲಿ ಬೇಂದ್ರೆ ಮತ್ತು ಸ್ಥಳೀಯ ವ್ಯಕ್ತಿ ದುಶ್ಯಂತ್ ಸಿಂಗ್ ಅವರನ್ನು ಕೂಡ ವಿಚಾರಣೆ ನಡೆಸಲಿದೆ.

17 ಬಾರಿ ವಿನಾಯಿತಿಗಳ ನಂತರ ಫೆಬ್ರವರಿ 6ರಂದು ಖಾನ್ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಕೋರ್ಟ್​​ ಆದೇಶಿಸಿದೆ ಎಂದು ಸಲ್ಮಾನ್​ ಖಾನ್​​ ಪರ ವಕೀಲ ಹೆಚ್.ಎಂ.ಸರಸ್ವತ್ ತಿಳಿಸಿದ್ದಾರೆ. ಇನ್ನು ಮುಂಬೈನಿಂದಲೇ ವಿಡಿಯೋ ಕಾನ್ಫರೆನ್ಸ್​​​ ಮೂಲಕ ವಿಚಾರಣೆಗೆ ಹಾಜರಾಗಲು ಅನುಮತಿ ನೀಡಲಾಗಿದೆ ಎಂದು ಸರಸ್ವತ್ ಹೇಳಿದರು.

Last Updated : Feb 5, 2021, 6:45 PM IST

ABOUT THE AUTHOR

...view details