ಕರ್ನಾಟಕ

karnataka

ETV Bharat / sitara

ಕನ್ನಡದ ಬಿಗ್​​​ಬಾಸ್​​​​​​​​​​​ ವೇದಿಕೆಯಲ್ಲಿ ಬಾಲಿವುಡ್​​ ಸುಲ್ತಾನ್​​ ಸಲ್ಮಾನ್​​ ಖಾನ್​​ ಪ್ರತ್ಯಕ್ಷ! - salman is the celebraty on kannada bigboss

ಕನ್ನಡ ಬಿಗ್​​ಬಾಸ್ ರಿಯಾಲಿಟಿ ಶೋನಲ್ಲಿ ಈ ವಾರ ವಿಶೇಷ ಅತಿಥಿಯಾಗಿ ಬಾಲಿವುಡ್​​ ಸಾರ್​​ ಸಲ್ಮಾನ್​ ಖಾನ್​​ ಕಾಣಿಸಿಕೊಂಡಿದ್ದಾರೆ. ಅದೂ ವಿಡಿಯೋ ಕಾಲ್​ ಮೂಲಕ.

sudeep
ಬಿಗ್​​ಬಾಸ್ ನಲ್ಲಿ ಸಲ್ಮಾನ್​ ಖಾನ್​​

By

Published : Dec 8, 2019, 9:47 AM IST

Updated : Dec 8, 2019, 1:51 PM IST

ಬಿಗ್​​ಬಾಸ್​​​ನಲ್ಲಿ ಈ ವಾರ ವಿಶೇಷ ಅತಿಥಿಯೊಬ್ಬರು ಕಾಣಿಸಿಕೊಂಡಿದ್ದಾರೆ. ಅದು ಬಾಲಿವುಡ್ ಭಾಯ್​ ಜಾನ್​ ಸಲ್ಮಾನ್ ಖಾನ್. ಬಿಗ್​​​ಬಾಸ್ ವೇದಿಕೆಯ ಮೇಲೆ ಸ್ಯಾಂಡಲ್​​ವುಡ್ ಪೈಲ್ವಾನ್ ಹಾಗೂ ಬಾಲಿವುಡ್ ಸುಲ್ತಾನನ ಸಮಾಗಮ ನಡೆದಿದೆ. ಈ ಸುಂದರ ಕ್ಷಣ ನಿನ್ನೆ ರಾತ್ರಿಯ ಎಪಿಸೋಡ್​ನಲ್ಲಿ ಪ್ರಸಾರವಾಯಿತು.

ಇನ್ನು ಕನ್ನಡದ ಬಿಗ್​​ಬಾಸ್​​ನ ನಿರೂಪಣೆಯನ್ನು ಕಿಚ್ಚ ಸುದೀಪ್ ಮಾಡುತ್ತಿದ್ದರೆ, ಹಿಂದಿ ಬಿಗ್​​ಬಾಸ್ ಶೋ ಸಲ್ಮಾನ್ ಖಾನ್ ನಿರೂಪಣೆ ಮಾಡುತ್ತಿದ್ದಾರೆ. ದಬಾಂಗ್-3 ಚಿತ್ರದ ಪ್ರಮೋಶನ್​​ಗಾಗಿ ಕನ್ನಡ ಕಿರುತೆರೆಯಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಂಡಿದ್ದು ಎಲ್ಲರಲ್ಲಿ ಕುತೂಹಲ ಮೂಡಿಸಿದೆ.

ಬಿಗ್​​ಬಾಸ್ ನಲ್ಲಿ ಸಲ್ಮಾನ್​ ಖಾನ್​​

ಇನ್ನು ಪ್ರಭುದೇವ ನಿರ್ದೇಶನ ಮಾಡಿರುವ 'ದಬಾಂಗ್-3' ಚಿತ್ರದ ಪ್ರಚಾರ ಸಲುವಾಗಿ ಚಿತ್ರತಂಡ 'ದಿ ಕಪಿಲ್ ಶರ್ಮಾ ಶೋ'ನಲ್ಲಿ ಈ ಹಿಂದೆ ಸುದೀಪ್ ಭಾಗವಹಿಸಿ ಇಡೀ ಶೋನಲ್ಲಿ ಎಲ್ಲರನ್ನು ನಕ್ಕು ನಗಿಸಿದ್ದರು.

ಇದೀಗ ಕನ್ನಡದ ಬಿಗ್​​ ಬಾಸ್​​ ವೇದಿಕೆ ಮೇಲೆ ಬಾಲಿವುಡ್​​ ಭಾಯ್​ ಜಾನ್​​ ಸಲ್ಮಾನ್​ ಖಾನ್​ ಕಾಣಿಸಿಕೊಂಡಿದ್ದು, ಎಲ್ಲರಲ್ಲೂ ಕುತೂಹಲ ಮೂಡಿಸಿದ್ರು. ಇನ್ನು ಈ ವೇದಿಕೆಯಲ್ಲಿ ಒಂದು ವಿಶೇಷತೆ ನಡೆದಿದ್ದು, ಅದೇನಂದ್ರೆ ಸಲ್ಮಾನ್​ ಖಾನ್​ ಕನ್ನಡದಲ್ಲಿಯೇ ಮಾತನಾಡಿದ್ರು. ಹೌದು, ಕನ್ನಡದಲ್ಲಿ ನಿರೂಪಕರ ರೀತಿ ಮಾತನಾಡಿದ ಅವರು ಬಿಗ್​ ಬಾಸ್​​ ಅಪೇಕ್ಷಿಸುತ್ತಾರೆ. ಮನೆಯಿಂದ ಹೊರಗೆ ಹಾಕೋದು, ನಿಯಮ ಉಲ್ಲಂಘನೆ ಎಂಬ ಪದಗಳನ್ನು ಬಳಸಿದ್ರು. ಅಲ್ಲದೆ ನಾನು ಕನ್ನಡದ ಬಿಗ್​ ಬಾಸ್​​​ ಶೋ ಹೋಸ್ಟ್​​ ಮಾಡಬಹುದಾ? ಎಂದು ಕೇಳಿದಾಗ ಖಂಡಿತಾ ಬನ್ನಿ, ನಮ್ಮ ಅಭಿಮಾನಿಗಳು, ಬಿಗ್​ ಬಾಸ್​​ ಸ್ಪರ್ಥಿಗಳು ಕೂಡ ಅದನ್ನೇ ಬಯಸುತ್ತಿದ್ದಾರೆ ಎಂದು ಕಿಚ್ಚ ಹೇಳಿದ್ರು. ಈ ಎಲ್ಲಾ ಸಂಭಾಷಣೆಗಳು ವಿಡಿಯೋ ಕಾಲ್​ ಮೂಲಕ ನಡೆದವು. ಈ ವೇಳೆ ಸಲ್ಮಾನ್​ ಖಾನ್ ಜೊತೆ ನಿರ್ದೇಶಕ ಪ್ರಭುದೇವ್​ ಮತ್ತು ನಟಿ ಸೋನಾಕ್ಷಿ ಸಿನ್ಹಾ ಇದ್ದರು.

ಇದನ್ನು ಗಮನಿಸಿದಾಗ ಮುಂದಿನ ದಿನಗಳಲ್ಲಿ ಬಾಲಿವುಡ್​​ ಸಲ್ಮಾನ್​ ಖಾನ್​ ಕನ್ನಡದ ಬಿಗ್​ ಬಾಸ್​​ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ ಎನ್ನಲಾಗುತ್ತಿದೆ.

Last Updated : Dec 8, 2019, 1:51 PM IST

For All Latest Updates

TAGGED:

ABOUT THE AUTHOR

...view details