ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಕನ್ನಡದಲ್ಲಿ ನಟಿಸೋಕೆ ಓಕೆ ಎಂದಿದ್ದಾರೆ. ದಬಾಂಗ್ 3 ಚಿತ್ರದ ಟ್ರೈಲರ್ ಲಾಂಚ್ ಮಾಡಲು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಧ್ಯಮಗಳ ಮುಂದೆ ಹಾಜರಾಗಿದ್ದ ಚುಲ್ ಬುಲ್, ಕನ್ನಡದ ನಿರ್ದೇಶಕ ಅನೂಪ್ ಬಂಡಾರಿ ಕನ್ನಡದ ನಿರ್ದೇಶಕರ ಜೊತೆ ಸಿನಿಮಾ ಮಾಡ್ತಿರಾ ಎಂಬ ಪ್ರಶ್ನೆ ಕೇಳಿದ್ರು. ಇದಕ್ಕೆ ಬೋಲ್ಡ್ ಆಗಿಯೇ ಉತ್ತರಿಸಿದ ಸಲ್ಲು, ಒಳ್ಳೆ ಆಫರ್ ಕೊಟ್ಟರೆ ಖಂಡಿತಾ ನಟಿಸುತ್ತೇನೆ ಎಂದರು.
ಕಿಚ್ಚ ಸುದೀಪ ನನ್ನ ಸಹೋದರ ಎಂದ ಬಾಲಿವುಡ್ 'ಬ್ಯಾಡ್ ಬಾಯ್'... ಕನ್ನಡದಲ್ಲೇ ಡೈಲಾಗ್ ಹೊಡೆದ ಸಲ್ಲು - sallu speaks about sudeep
ಸಿಸಿಎಲ್ನಿಂದ ಸುದೀಪ್ ನನಗೆ ಪರಿಚಯವಾಗಿದ್ದಾರೆ. ಅಲ್ಲದೆ ಸುದೀಪ್ ಸೌಥ್ ಇಂಡಿಯಾದಲ್ಲೇ ಬೆಸ್ಟ್ ಆಕ್ಟರ್. ಆಗಾಗಿ ನಾನು ಈ ಚಿತ್ರಕ್ಕೆ ಸುದೀಪ್ ಅವರನ್ನ ಆಯ್ಕೆ ಮಾಡಿಕೊಂಡೆ ಎಂದು ಸಲ್ಮಾನ್ ಖಾನ್ ಹೇಳಿದ್ರು.
ಥಟ್ ಅಂತ ಅನೂಪ್ ನಾನು ಕನ್ನಡದ ನಿರ್ದೇಶಕ ನನ್ನ ಜೊತೆ ಸಿನಿಮಾ ಮಾಡಿ ಎಂದು ಆಫರ್ ಕೊಟ್ಟಾಗ ಒಂದು ಕ್ಷಣ ಮೌನವಾದ ಸಲ್ಲು ಯಾವ ಕಂಪನಿ ಎಂದು ನಗುತ್ತಲೆ ಉತ್ತರಿಸಿದ್ರು. ಅಲ್ಲದೆ ನಾನು ಕನ್ನಡದಲ್ಲಿ ನಟಿಸಿದರೆ ನನ್ನ ಡಬ್ಬಿಂಗ್ ಜವಾಬ್ದಾರಿ ನಿಮ್ಮದೆ ಎಂದು ನಗುತ್ತಲೆ ಹೇಳಿದ್ರು.
ಇನ್ನೂ ಈ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಅವರನ್ನ ಹಾಡಿ ಹೊಗಳಿದ ಸಲ್ಲು, ಕಿಚ್ಚ ನನ್ನ ಸಹೋದರನಿದ್ದಂತೆ. ನನ್ನ ಸಹೋದರ ಸೋಹೆಲ್ಗೆ ಕಿಚ್ಚ ಮೊದಲು ಪರಿಚಯವಾಗಿದ್ರು.
ಈಗ ನನಗೂ ಪರಿಚಯವಾಗಿದ್ದಾರೆ. ಸಿಸಿಎಲ್ನಿಂದಲೂ ಸುದೀಪ್ ನನಗೆ ಪರಿಚಯವಾಗಿದ್ದಾರೆ. ಅಲ್ಲದೆ ಸುದೀಪ್ ಸೌಥ್ ಇಂಡಿಯಾದಲ್ಲೇ ಬೆಸ್ಟ್ ಆಕ್ಟರ್. ಆಗಾಗಿ ನಾನು ಈ ಚಿತ್ರಕ್ಕೆ ಸುದೀಪ್ ಅವರನ್ನ ಆಯ್ಕೆ ಮಾಡಿಕೊಂಡೆ. ಇದರ ಜೊತೆಗೆ ಕಿಚ್ಚ ಸುದೀಪ್ ಹಾರ್ಟ್ಲಿ ತುಂಬಾ ಒಳ್ಳೆ ಮನುಷ್ಯ, ಹಾರ್ಡ್ ವರ್ಕರ್, ಕ್ಲಿಯರ್ ಹಾರ್ಟ್ ಮನುಷ್ಯ ಎಂದು ಕಿಚ್ಚನನ್ನು ಬ್ಯಾಡ್ ಬಾಯ್ ಹಾಡಿ ಹೊಗಳಿದ್ರು.