ಕರ್ನಾಟಕ

karnataka

By

Published : Jan 29, 2021, 3:55 PM IST

ETV Bharat / sitara

ಸಲಾರ್​​ ಶೂಟಿಂಗ್​ ಸ್ಟಾರ್ಟ್.. ಪ್ರಭಾಸ್​​ ಫೋಟೋ ವೈರಲ್​​​..​

ಸದ್ಯ ಗೋದಾವರಿಖಾನಿಯಲ್ಲಿನ ಕಲ್ಲಿದ್ದಲು ಗಣಿಗಳಲ್ಲಿ ಪ್ರಭಾಸ್-ಶ್ರುತಿ ಹಾಸನ್ ಜೊತೆ ಇರುವ ಪ್ರಮುಖ ದೃಶ್ಯ ಚಿತ್ರೀಕರಿಸಲಾಗುತ್ತಿದೆಯಂತೆ..

ಸಲಾರ್​​ ಶೂಟಿಂಗ್​ ಸ್ಟಾರ್ಟ್​​ :  ಪ್ರಭಾಸ್​​ ಫೋಟೋ ವೈರಲ್​​​​
ಸಲಾರ್​​ ಶೂಟಿಂಗ್​ ಸ್ಟಾರ್ಟ್​​ : ಪ್ರಭಾಸ್​​ ಫೋಟೋ ವೈರಲ್​​​​

ಪ್ರಭಾಸ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ 'ಸಲಾರ್' ಚಿತ್ರದ ಶೂಟಿಂಗ್ ಇಂದಿನಿಂದ (ಶುಕ್ರವಾರ-29) ಆರಂಭವಾಗಿದೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರವನ್ನು ಇಂದು ಬೆಳಗ್ಗೆ ತೆಲಂಗಾಣದ ಗೋದಾವರಿಖಾನಿಯಲ್ಲಿ ಚಿತ್ರೀಕರಿಸಲಾಗಿದೆ.

ಸಲಾರ್​​ ಶೂಟಿಂಗ್​ ಸ್ಥಳವಾದ ರಾಮಗುಂಡಂ ತಲುಪುವ ಮುನ್ನ ಅಲ್ಲಿನ ಪೊಲೀಸ್ ಅಧಿಕಾರಿಗಳನ್ನು ಪ್ರಭಾಸ್​ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಪೊಲೀಸರು ಸ್ಟಾರ್​​ ನಟನ ಜೊತೆ ಫೋಟೋಗೆ ಪೋಸ್​ ನೀಡಿದ್ದು, ಆ ಫೋಟೋಗಳು ಇದೀಗ ವೈರಲ್​ ಆಗುತ್ತಿವೆ.

ಸಲಾರ್​​ ಶೂಟಿಂಗ್​ ಸ್ಟಾರ್ಟ್​​ : ಪ್ರಭಾಸ್​​ ಫೋಟೋ ವೈರಲ್​​​​

ಮುಂಬರುವ ಪ್ಯಾನ್ ಇಂಡಿಯನ್ ಚಿತ್ರಗಳಲ್ಲಿ ಸಲಾರ್​ ಕೂಡ ಮೊದಲ ಸ್ಥಾನದಲ್ಲಿಯೇ ನಿಲ್ಲುತ್ತದೆ. ಚಿತ್ರದಲ್ಲಿ ಪ್ರಭಾಸ್ ವಿಭಿನ್ನ ನೋಟದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು, ನಿನ್ನೆಯಷ್ಟೇ ಸಿನಿಮಾ ನಾಯಕಿಯಾಗಿ ಶೃತಿ ಹಾಸನ್​​ರನ್ನು ಘೋಷಿಸಿದ್ದಾರೆ.

ಸದ್ಯ ಗೋದಾವರಿಖಾನಿಯಲ್ಲಿನ ಕಲ್ಲಿದ್ದಲು ಗಣಿಗಳಲ್ಲಿ ಪ್ರಭಾಸ್-ಶ್ರುತಿ ಹಾಸನ್ ಜೊತೆ ಇರುವ ಪ್ರಮುಖ ದೃಶ್ಯ ಚಿತ್ರೀಕರಿಸಲಾಗುತ್ತಿದೆ ಎಂಬ ಮಾಹಿತಿ ಬಂದಿದೆ.

ABOUT THE AUTHOR

...view details