ದುನಿಯಾ ವಿಜಯ್ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ಸಿನಿಮಾ 'ಸಲಗ'. ಈ ಔಟ್ ಅ್ಯಂಡ್ ಔಟ್ ಆ್ಯಕ್ಷನ್ ಚಿತ್ರಕ್ಕೂ ಶನಿವಾರದಿಂದ ಆರಂಭವಾಗಿರುವ ಐಪಿಎಲ್ ಕ್ರಿಕೆಟ್ ಮ್ಯಾಚ್ಗೂ ಕನೆಕ್ಷನ್ ಇದೆ. ಅದು ಏನು ಅಂತೀರಾ...?
'ಸಲಗ' ಚಿತ್ರದ ನಿರ್ಮಾಪಕ ಕೆ.ಪಿ. ಶ್ರೀಕಾಂತ್ಗೆ ಕ್ರಿಕೆಟ್ ಎಂದರೆ ಬಹಳ ಇಷ್ಟ. ಅದರಲ್ಲೂ ಆರ್ಸಿಬಿ ಟೀಂ ಅಂದ್ರೆ ಪಂಚಪ್ರಾಣ. 'ಸಲಗ' ಚಿತ್ರದಲ್ಲಿ ಡಾಲಿ ಧನಂಜಯ್ ದುನಿಯಾ ವಿಜಯ್ ಕುರಿತು ಹೇಳುವ ಖಡಕ್ ಡೈಲಾಗ್ವೊಂದನ್ನು ಚಿತ್ರತಂಡ ಬಿಡುಗಡೆ ಮಾಡುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸಪೋರ್ಟ್ ಮಾಡುವ ಮಾಡಿ ಶುಭ ಕೋರಿದೆ.
ಸದ್ಯಕ್ಕೆ 'ಸಲಗ' ಸಿನಿಮಾ ಸೆನ್ಸಾರ್ ಅಂಗಳದಲ್ಲಿದೆ. ಮುಂದಿನ ತಿಂಗಳು ಥಿಯೇಟರ್ಗಳು ತೆರೆಯಲಿದ್ದು ಸಿನಿಮಾ ಬಿಡುಗಡೆಯಾಗಲಿದೆ. ಒಂದು ಕಡೆ ಸಲಗ ಹಾಡುಗಳು ಬಹಳ ಹಿಟ್ ಆಗಿದ್ದು, ತಂಡ ಬಿಡುಗಡೆ ಮಾಡಿದ್ದ ರಾ ವಿಡಿಯೋಗೆ ಕೂಡಾ ಮೆಚ್ಚುಗೆ ವ್ಯಕ್ತವಾಗಿದ್ದು ಸಿನಿಮಾ ಗೆಲ್ಲುವ ಎಲ್ಲಾ ಸೂಚನೆಗಳಿವೆ ಎಂದು ಚಿತ್ರತಂಡ ಭರವಸೆ ವ್ಯಕ್ತಪಡಿಸಿದೆ.
ಆರ್ಸಿಬಿ ಬಗ್ಗೆ ಮಾತನಾಡಿದ ಕೆ.ಪಿ. ಶ್ರೀಕಾಂತ್, ನಾವು ಮೊದಲಿನಿಂದಲೂ ಆರ್ಸಿಬಿ ತಂಡಕ್ಕೆ ಬೆಂಬಲ ನೀಡುತ್ತಾ ಬಂದಿದ್ದೇವೆ. ಈ ಬಾರಿ ಆರ್ಸಿಬಿ, ಕಪ್ ಗೆದ್ದೇ ಗೆಲ್ಲುತ್ತದೆ, ಅಲ್ಲದೆ ವಿಜಯ್ ನಿರ್ದೇಶನದ 'ಸಲಗ' ಕೂಡಾ ಗೆಲ್ಲುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.