ಕರ್ನಾಟಕ

karnataka

ETV Bharat / sitara

'ಸಲಗ'ನಿಗೂ ಕೊರೊನಾ ಭೀತಿ: ಈ ತಿಂಗಳು ರಿಲೀಸ್​​ ಆಗೋದು ಡೌಟ್​​​ - ದುನಿಯಾ ವಿಜಯ್​ ಸಲಗ ಸಿನಿಮಾ

ದುನಿಯಾ ವಿಜಯ್ ನಿರ್ದೇಶನ ಮಾಡಿ ನಟಿಸಿರುವ ಬಹು ನಿರೀಕ್ಷಿತ ಸಲಗ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ. ಈ ಹಿನ್ನೆಲೆಯಲ್ಲಿ ಚಾಮರಾಜಪೇಟೆಯ ಬಂಡೆ ಮಹಾಂಕಾಳಿ ದೇವಾಲಯದಲ್ಲಿ ಕುಂಬಳಕಾಯಿ ಒಡೆದಿಯುವ ಮೂಲಕ ಪೂಜೆ ಸಲ್ಲಿಸಲಾಗಿದೆ.

salaga Shooting complete
'ಸಲಗ'ಕ್ಕೂ ಕೊರೊನಾ ಭೀತಿ : ಈ ತಿಂಗಳು ರಿಲೀಸ್​ ಡೌಟ್​

By

Published : Mar 11, 2020, 8:07 AM IST

ಕರಿ ಚಿರತೆ ದುನಿಯಾ ವಿಜಯ್ ನಿರ್ದೇಶನ ಮಾಡಿ ನಟಿಸಿರುವ ಬಹು ನಿರೀಕ್ಷಿತ ಸಲಗ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ. ಈ ಹಿನ್ನೆಲೆಯಲ್ಲಿ ಚಾಮರಾಜಪೇಟೆಯ ಬಂಡೆ ಮಹಾಂಕಾಳಿ ದೇವಾಲಯದಲ್ಲಿ ಕುಂಬಳಕಾಯಿ ಒಡೆದಿಯುವ ಮೂಲಕ ಪೂಜೆ ಸಲ್ಲಿಸಲಾಗಿದೆ.

'ಸಲಗ'ನಿಗೂ ಕೊರೊನಾ ಭೀತಿ: ಈ ತಿಂಗಳು ರಿಲೀಸ್​ ಡೌಟ್​

ಇನ್ನು ಈ ವೇಳೆ ನಟ ವಿಜಯ್, ಸಂಜನಾ ಆನಂದ್, ಸಂಭಾಷಣೆಕಾರ ಮಾಸ್ತಿ, ಕಾಕ್ರೋಚ್ ಸುದಿ ಹಾಗೂ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಭಾಗಿಯಾಗಿದ್ದರು. ಸದ್ಯ ಸಲಗ ಚಿತ್ರ ರಿಲೀಸ್​​ಗೆ ರೆಡಿಯಾಗಿದ್ದು, ಸೆನ್ಸಾರ್ ಮಂಡಳಿ ಕದ ತಟ್ಟಿದೆ. ಸೆನ್ಸಾರ್​​ನಿಂದ ಗ್ರೀನ್ ಸಿಗ್ನಲ್ ಸಿಕ್ಕ ಕೂಡಲೇ ಚಿತ್ರ ತೆರೆಗೆ ಅಪ್ಪಳಿಸಲಿದೆ. ಈಗಾಗಲೇ ಸಲಗ ಚಿತ್ರದ ಮೇಕಿಂಗ್ ಹಾಡುಗಳು ಸಖತ್ ಹವಾ ಕ್ರಿಯೇಟ್ ಮಾಡಿದ್ದು, ಸಲಗನಿಗಾಗಿ ಕೋಬ್ರಾ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಎಲ್ಲಾ ಅಂದುಕೊಂಡಂತೆ ಆದ್ರೆ ಚಿತ್ರವನ್ನು ಇದೇ ಮಾರ್ಚ್ 27ಕ್ಕೆ ರಿಲೀಸ್ ಮಾಡಲು ನಿರ್ಧರಿಸಿದ್ವಿ. ಆದ್ರೆ ಕೊರೊನಾ ಭೀತಿಯಿಂದ ಚಿತ್ರವನ್ನು ಯಾವಾಗ ರಿಲೀಸ್​ ಮಾಡುತ್ತೇವೆ ಎಂಬುದನ್ನು ತಿಳಿಸುವುದಾಗಿ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಹೇಳಿದ್ದಾರೆ.

ABOUT THE AUTHOR

...view details