ಕರ್ನಾಟಕ

karnataka

ETV Bharat / sitara

ಸಲಗ ಚಿತ್ರದ ಟೈಟಲ್ ಸಾಂ‌ಗ್‌ಗೆ ಚೆನ್ನೈನಲ್ಲಿ ಫೈನಲ್ ಟಚ್! - ಸಲಗ ಚಿತ್ರ

ಈವರೆಗೂ ಬೆಳ್ಳಿತೆರೆಯಲ್ಲಿ ನಾಯಕರಾಗಿ ಅಬ್ಬರಿಸಿದ ನಟ ದುನಿಯಾ ವಿಜಯ್ ಇದೇ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಹೀಗಾಗಿ ಸಲಗ ಚಿತ್ರ ಸ್ಯಾಂಡಲ್​​ವುಡ್​ನಲ್ಲಿ ಒಂದಲ್ಲ ಒಂದು ವಿಚಾರಕ್ಕೆ ಗಮನ ಸೆಳೆಯುತ್ತಿದೆ..

salaga Moviege  Final touch in  Chennai
salaga Moviege Final touch in Chennai

By

Published : Jan 6, 2021, 7:12 PM IST

ದುನಿಯಾ ವಿಜಯ್ ನಿರ್ದೇಶಿಸಿ, ನಾಯಕರಾಗಿ ಅಭಿನಯಿಸಿರುವ ಸಲಗ ರಿಲೀಸ್​ಗೆ ರೆಡಿಯಾಗುತ್ತಿದೆ. ಅದಕ್ಕೆ ತಕ್ಕಂತೆ ಚಿತ್ರ ತಂಡ ಎಲ್ಲಾ ರೀತಿಯಲ್ಲೂ ಸಿದ್ಧವಾಗುತ್ತಿದ್ದು, ಸದ್ಯಕ್ಕೆ ಚಿತ್ರತಂಡ ಟೈಟಲ್ ಟ್ರ್ಯಾಕ್‌ನ ಫೈನಲ್ ಕಂಪೋಸಿಂಗ್ ಕೆಲಸದಲ್ಲಿ ಬ್ಯುಸಿಯಾಗಿದೆ.

ಚಿತ್ರ ತಂಡದ ಮಾಹಿತಿ ಪ್ರಕಾರ ಟ್ರೇಲರ್ ಲಾಂಚ್​​ಗೂ ಮುನ್ನ ಟೈಟಲ್ ಟ್ರ್ಯಾಕ್ ಹೊರ ತಂದು, ಅದರದ್ದೇ ಒಂದು ಹವಾ ಸೃಷ್ಟಿಸಿದ ನಂತರವೇ ಚಿತ್ರ ತೆರೆಗೆ ಬರಲಿದೆಯಂತೆ. ಹಾಗಾಗಿಯೇ, ಚಿತ್ರದ ನಿರ್ದೇಶಕ ಕಮ್ ನಾಯಕ ನಟ ದುನಿಯಾ ವಿಜಯ್, ಸಂಗೀತ ನಿರ್ದೇಶಕ ಚರಣ್ ರಾಜ್ ಮತ್ತವರ ತಂಡ ಚೆನ್ನೈಗೆ ಪ್ರಯಾಣ ಬೆಳೆಸಿದೆ.

ಸಲಗ ಚಿತ್ರದ ಟೈಟಲ್ ಹಾಡಿಗೆ ಚೆನ್ನೈನಲ್ಲಿ ಫೈನಲ್ ಟಚ್!

ಅಲ್ಲಿ ಟೈಟಲ್ ಟ್ರ್ಯಾಕ್​ ಫೈನಲ್ ಟಚ್ ನೀಡುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಟಗರು ಖ್ಯಾತಿಯ ನಿರ್ಮಾಪಕ ಕೆ ಪಿ ಶ್ರೀಕಾಂತ್ ನಿರ್ಮಾಣದಲ್ಲಿ ತಯಾರಾಗಿರೋ ಈ ಚಿತ್ರ ಈಗಾಗ್ಲೇ ಹತ್ತು ಹಲವು ವಿಶೇಷಗಳಿಂದ ಚಿತ್ರೋದ್ಯಮದಲ್ಲಿ ಹಾಗೂ ಸಿನಿಮಾಸಕ್ತರಲ್ಲಿ ದೊಡ್ಡ ನಿರೀಕ್ಷೆ ಹುಟ್ಟಿಸಿದೆ. ಅದಕ್ಕೆ ಕಾರಣ ದುನಿಯಾ ವಿಜಯ್ ಜತೆಗೆ ಸಂಗೀತ ನಿರ್ದೇಶಕ ಚರಣ್ ರಾಜ್.

ಸಲಗ ಸಿನಿಮಾ ಪೋಸ್ಟರ್​​

ಈವರೆಗೂ ಬೆಳ್ಳಿತೆರೆಯಲ್ಲಿ ನಾಯಕರಾಗಿ ಅಬ್ಬರಿಸಿದ ನಟ ದುನಿಯಾ ವಿಜಯ್ ಇದೇ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಹೀಗಾಗಿ ಸಲಗ ಚಿತ್ರ ಸ್ಯಾಂಡಲ್​​ವುಡ್​ನಲ್ಲಿ ಒಂದಲ್ಲ ಒಂದು ವಿಚಾರಕ್ಕೆ ಗಮನ ಸೆಳೆಯುತ್ತಿದೆ.

ABOUT THE AUTHOR

...view details