ಕರ್ನಾಟಕ

karnataka

ETV Bharat / sitara

ಚಿತ್ರಮಂದಿರಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ನೆರವಿಗೆ ನಿಂತ 'ಸಲಗ' ಚಿತ್ರತಂಡ - Salaga team distributed food kit

ಲಾಕ್​​​ಡೌನ್​​​​ನಿಂದ ಕಷ್ಟಕ್ಕೆ ಒಳಗಾದ ಸಿನಿ ಕಾರ್ಮಿಕರಿಗೆ 'ಸಲಗ' ಚಿತ್ರತಂಡ ಇಂದು ಆಹಾರ ಕಿಟ್​​​​​ಗಳನ್ನು ವಿತರಿಸಿದೆ. ನಟ, ನಿರ್ದೇಶಕ ದುನಿಯಾ ವಿಜಯ್, ಡಾಲಿ ಧನಂಜಯ್​, ಚಿತ್ರದ ಸಂಭಾಷಣೆಕಾರ ಮಾಸ್ತಿ ಹಾಗೂ ನಿರ್ಮಾಪಕ ಶ್ರೀಕಾಂತ್ ಈ ವೇಳೆ ಹಾಜರಿದ್ದರು.

Salaga movie team
ಸಿನಿ ಕಾರ್ಮಿಕರ ನೆರವಿಗೆ ನಿಂತ 'ಸಲಗ' ಚಿತ್ರತಂಡ

By

Published : Jun 9, 2020, 5:57 PM IST

ಚಿತ್ರರಂಗ ಕಳೆದ ಎರಡೂವರೆ ತಿಂಗಳಿನಿಂದ ಸಾಕಷ್ಟು ನಷ್ಟ ಅನುಭವಿಸಿದ್ದು ಚಿತ್ರರಂಗದ ಕಾರ್ಮಿಕರಿಗೆ ಕೆಲವರು ಸಹಾಯ ಮಾಡುತ್ತಾ ಬಂದಿದ್ದಾರೆ. ಇದೀಗ ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ನಿರ್ದೇಶಿಸಿ ನಟಿಸುತ್ತಿರುವ 'ಸಲಗ' ಚಿತ್ರತಂಡ ಕೂಡಾ ಥಿಯೇಟರ್​​​​ಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಿದೆ.

ಸಿನಿ ಕಾರ್ಮಿಕರ ನೆರವಿಗೆ ನಿಂತ 'ಸಲಗ' ಚಿತ್ರತಂಡ

ಸಂತೋಷ್ ಚಿತ್ರಮಂದಿರದ ಬಳಿ ಇರುವ ಡಾ. ರಾಜ್​​​​​​​​​​​​ಕುಮಾರ್ ಪುತ್ಥಳಿಗೆ ದುನಿಯಾ ವಿಜಯ್​​, ಡಾಲಿ ಧನಂಜಯ್ ಸಂಭಾಷಣೆಕಾರ ಮಾಸ್ತಿ ಹಾಗೂ 'ಸಲಗ' ಚಿತ್ರದ ನಿರ್ಮಾಪಕ ಹೂ ಮಾಲೆ ಹಾಕಿ ಅಣ್ಣಾವ್ರಿಗೆ ನಮಿಸಿ ನಂತರ ನರ್ತಕಿ ಚಿತ್ರಮಂದಿರ ಬಳಿ ನಗರದಲ್ಲಿರುವ ಪ್ರಮುಖ ಚಿತ್ರಮಂದಿಗಳಲ್ಲಿ ಕೆಲಸ ಮಾಡುವ ಸುಮಾರು 260 ಕಾರ್ಮಿಕರಿಗೆ ದಿನಸಿ ಕಿಟ್​​​​​​ಗಳನ್ನು ವಿತರಿಸಿದ್ದಾರೆ.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ದುನಿಯಾ ವಿಜಯ್, ಲಾಕ್​​​​ಡೌನ್​​​ನಿಂದ ಚಿತ್ರಮಂದಿರಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಬಹಳ ಸಮಸ್ಯೆ ಆಗಿದೆ. ಇದನ್ನು ಅರಿತ ನಮ್ಮ ನಿರ್ಮಾಪಕರು ಅವರ ನೆರವಿಗೆ ನಿಂತಿದ್ದಾರೆ. ಇವತ್ತು ಒಂದು ಬೈಕ್ ಇದ್ದರೆ ಸಾಕು 10-15 ಸಾವಿರ ರೂಪಾಯಿ ಸಂಪಾದನೆ ಮಾಡಬಹುದು ಅದರೆ ಸಿನಿಮಾದವರಿಗೆ ಕಷ್ಟ. ನಮಗೆ ಸಿನಿಮಾ ಬಿಟ್ಟು ಬೇರೆ ಪ್ರಪಂಚ ಇಲ್ಲ ಎಂದು ದುನಿಯಾ ವಿಜಯ್ ಹೇಳಿದರು.

ನಂತರ ಮಾತನಾಡಿದ ಡಾಲಿ ಧನಂಜಯ್, ಲಾಕ್​​​​​​ಡೌನ್ ನಂತರ ಬಹುತೇಕ ಎಲ್ಲಾ ಕೆಲಸಗಳು ಆರಂಭ ಆಗುತ್ತಿದೆ‌. ಆದರೆ ಚಿತ್ರರಂಗದ ಚಟುವಟಿಕೆಗಳಿಗೆ ಸರ್ಕಾರ ಇನ್ನೂ ಅನುಮತಿ ನೀಡಿಲ್ಲ. ಆದ್ದರಿಂದ ಕಷ್ಟದಲ್ಲಿರುವ ಚಿತ್ರಮಂದಿರಗಳ ಕಾರ್ಮಿಕರಿಗೆ ಇಂದು ದಿನಸಿ ಕಿಟ್ ನೀಡಿದ್ದೇವೆ‌. ಲಾಕ್​​​​ಡೌನ್ ಆರಂಭವಾದಾಗಿನಿಂದಲೂ ನಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡಿಕೊಂಡು ಬಂದಿದ್ದೇವೆ. ಈ ಕೊರೊನಾ ನಮಗೆ ಹೊಸ ಅನುಭವ ಮಾತ್ರವಲ್ಲದೆ ಹೊಸ ಪಾಠವನ್ನೂ ಕಲಿಸಿದೆ ಎಂದು ಧನಂಜಯ್ ಹೇಳಿದರು.

ABOUT THE AUTHOR

...view details