ದುನಿಯಾ ವಿಜಯ್ ಮೊದಲ ಬಾರಿ ನಿರ್ದೇಶನ ಮಾಡಿ ನಟಿಸುತ್ತಿರುವ ಚಿತ್ರ 'ಸಲಗ'. ಚಿತ್ರದ ಟೈಟಲ್, ಪೋಸ್ಟರ್ ಹಾಗೂ ಟೀಸರ್ ಸಿನಿಪ್ರಿಯರಲ್ಲಿ ಸಾಕಷ್ಟು ಭರವಸೆ ಮೂಡಿಸಿದೆ. ಬಹುತೇಕ ಟಾಕಿ ಪೋಷನ್ ಮುಗಿಸಿದ್ದ ಚಿತ್ರತಂಡ ಇತ್ತೀಚೆಗೆ ಬಾಕಿ ಇರುವ ಹಾಡಿನ ಚಿತ್ರೀಕರಣ ಮಾಡಿ ಮುಗಿಸಿದೆ.
'ಸಲಗ' ಹಾಡುಗಳ ಚಿತ್ರೀಕರಣ...ರೊಮ್ಯಾಂಟಿಕ್ ಮೂಡ್ನಲ್ಲಿ ದುನಿಯಾ ವಿಜಯ್ - Salaga songs shoot
ಸಂಜನಾ ಆನಂದ್ ಹಾಗೂ ದುನಿಯಾ ವಿಜಯ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಸಲಗ' ಚಿತ್ರದ ರೊಮ್ಯಾಂಟಿಕ್ ಹಾಡೊಂದನ್ನು ಇತ್ತೀಚೆಗೆ ಚಿಕ್ಕಮಗಳೂರು, ಹಾಸನದ ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ.
ಮಲೆನಾಡಿನ ಮಳೆಯಲ್ಲಿ ರೊಮ್ಯಾಂಟಿಕ್ ಹಾಡನ್ನು ಚಿತ್ರೀಕರಣ ಮಾಡಲಾಗಿದ್ದು ಈ ಚಿತ್ರೀಕರಣದಲ್ಲಿ ದುನಿಯಾ ವಿಜಯ್ ಹಾಗೂ ಸಂಜನಾ ಆನಂದ್ ಭಾಗವಹಿಸಿದ್ದರು. ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ, ಹಾಸನದ ಸಕಲೇಶಪುರದ ಸುಂದರ ತಾಣಗಳಲ್ಲಿ, ನೈಸರ್ಗಿಕ ಮಳೆಯಲ್ಲಿ 'ಸಲಗ' ಚಿತ್ರದ ಹಾಡನ್ನು ಚಿತ್ರೀಕರಣ ಮಾಡಲಾಗಿದೆ. ಕೋವಿಡ್-19 ಸಮಸ್ಯೆ ನಡುವೆ ಸರ್ಕಾರ ನೀಡಿರುವ ಎಲ್ಲಾ ಸೂಚನೆಗಳನ್ನು ಪಾಲಿಸಿ, ನಾಯಕ-ನಾಯಕಿ ಸೇರಿ ಕೇವಲ 12 ತಂತ್ರಜ್ಞರೊಂದಿಗೆ ಈ ಸುಂದರ ಹಾಡನ್ನು ಚಿತ್ರೀಕರಿಸಲಾಗಿದೆ.
ಸಂಗೀತ ನಿರ್ದೇಶಕ ಚರಣ್ ರಾಜ್ ಸಂಯೋಜನೆ ಮಾಡಿರುವ 'ಮಳೆಯೇ ಮಳೆಯೇ ಅಂಬೆಗಾಲಿಡುತ್ತಾ ಸುರಿಯೇ' ಎಂಬ ರೊಮ್ಯಾಂಟಿಕ್ ಹಾಡಿಗೆ ವಿಜಯ್ ಮತ್ತು ಸಂಜನಾ ಆನಂದ್ ರೊಮ್ಯಾನ್ಸ್ ಮಾಡಿದ್ಧಾರೆ. 'ಟಗರು' ಸಿನಿಮಾ ಬಳಿಕ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಅದ್ದೂರಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ 'ಸಲಗ' ಚಿತ್ರ ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ. ಈ ಕೊರೊನಾ ಹಾವಳಿ ಕಡಿಮೆ ಆಗಿ ಚಿತ್ರಮಂದಿರಗಳು ಓಪನ್ ಆದಾಗ ಸಿನಿಮಾ ತೆರೆ ಕಾಣಲಿದೆ.