ಕರ್ನಾಟಕ

karnataka

ETV Bharat / sitara

ತಮಿಳಿನಲ್ಲೂ ರಿಲೀಸ್ ಆಗ್ತಿದ್ಯಾ 'ಸಲಗ'... ಟೈಟಲ್ ಹಾಡಿನ ಬಗ್ಗೆ ನಾಗೇಂದ್ರ ಪ್ರಸಾದ್ ಹೇಳಿದ್ದೇನು? - ತಮಿಳಿನಲ್ಲಿ ಬಿಡುಗಡೆಯಾಗಲಿರುವ ಸಲಗ

'ಸಲಗ' ಮೇಕಿಂಗ್ ವಿಡಿಯೋ ನೋಡಿದ ಮೇಲೆ ಈ ಸಿನಿಮಾವನ್ನು ಕಾಲಿವುಡ್ ಮಂದಿ ಕೂಡಾ ಸ್ವೀಕರಿಸುತ್ತಾರೆ ಎಂಬ ಮಾತು ಕೇಳಿಬರುತ್ತಿದೆ. ಹಾಗಾಗಿ ಚಿತ್ರವನ್ನು ತಮಿಳಿನಲ್ಲಿ ಕೂಡಾ ಬಿಡುಗಡೆ ಮಾಡಲು ಪ್ಲಾನ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

Salaga
'ಸಲಗ'

By

Published : Dec 19, 2019, 12:00 AM IST

ಸ್ಯಾಂಡಲ್​ವುಡ್​​​ನಲ್ಲಿ 'ಸಲಗ'ನ ಆರ್ಭಟ ಆರಂಭವಾಗಿದೆ. ಅದರಲ್ಲೂ ಇಂದು ಚಿತ್ರದ ಮೇಕಿಂಗ್ ವಿಡಿಯೋ ಬಿಡುಗಡೆಯಾದ ಮೇಲಂತೂ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. 'ಸಲಗ' ಚಿತ್ರತಂಡ ಬಹುತೇಕ ಚಿತ್ರೀಕರಣ ಮುಗಿಸಿದೆ. 'ದುನಿಯಾ' ಚಿತ್ರ ಬಿಡುಗಡೆ ಆದ ದಿನದಂದೇ 'ಸಲಗ' ಚಿತ್ರವನ್ನೂ ಬಿಡುಗಡೆ ಮಾಡಲು ಚಿತ್ರತಂಡ ಸಾಕಷ್ಟು ಶ್ರಮ ವಹಿಸುತ್ತಿದೆ.

'ಸಲಗ' ಸುದ್ದಿಗೋಷ್ಟಿ

ಚಿತ್ರದ ಮೇಕಿಂಗ್ ವಿಡಿಯೋ ನೋಡಿದ ಮೇಲೆ ಈ ಸಿನಿಮಾವನ್ನು ಕಾಲಿವುಡ್ ಮಂದಿ ಕೂಡಾ ಸ್ವೀಕರಿಸುತ್ತಾರೆ ಎಂಬ ಮಾತು ಕೇಳಿಬರುತ್ತಿದೆ. ಹಾಗಾಗಿ ಚಿತ್ರವನ್ನು ತಮಿಳಿನಲ್ಲಿ ಬಿಡುಗಡೆ ಮಾಡಬಹುದು ಎಂಬ ಮಾತು ಕೇಳಿಬರುತ್ತಿದೆ. ಕಾಲಿವುಡ್​​​ನಲ್ಲಿ ಚಿತ್ರ ಬಿಡುಗಡೆ ಮಾಡಲು ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದೇವೆ ಎಂದು ಸ್ವತ: ನಿರ್ಮಾಪಕ ಶ್ರೀಕಾಂತ್ ಕೂಡಾ ಹೇಳಿದ್ದಾರೆ.

ಇನ್ನು, ಇಂದಿನ ಸುದ್ದಿಗೋಷ್ಟಿಯಲ್ಲಿ ದುನಿಯಾ ವಿಜಯ್​​​ ಕಷ್ಟದ ದಿನಗಳಲ್ಲಿ ತಮಗೆ ಸಹಾಯ ಮಾಡಿದ ಸಾಹಿತಿ ನಾಗೇಂದ್ರ ಪ್ರಸಾದ್ ಅವರಿಗೆ ಧನ್ಯವಾದ ಅರ್ಪಿಸಿದರು. ಈ ವೇಳೆ ನಾಗೇಂದ್ರ ಪ್ರಸಾದ್ ಕೂಡಾ ಹಾಜರಿದ್ದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ನಾಗೇಂದ್ರ ಪ್ರಸಾದ್​​, ಸ್ಟಾರ್ ನಟರ ಸಿನಿಮಾಗಳ ಶಿರ್ಷಿಗೆ ಗೀತೆಗಳ ಬಗ್ಗೆ ಮಾತನಾಡಿದರು.

ಚಿ. ಉದಯಶಂಕರ್ ಅವರ ಕಾಲದಿಂದಲೂ ಓರ್ವ ನಾಯಕ ನಟನ ಇಮೇಜನ್ನು ಹೊಸದಾಗಿ ಕಟ್ಟಿಕೊಡುತ್ತಾ ಬರಲಾಗಿದೆ. ಅದೇ ನಿಟ್ಟಿನಲ್ಲಿ 'ಟಗರು' ಚಿತ್ರದ ಟೈಟಲ್ ಹಾಡು ಕೂಡಾ ಹುಟ್ಟಿತು. 'ಟಗರು' ಟೈಟಲ್, ಶಿವಣ್ಣನ ಇಮೇಜ್ ಹಾಗೂ ರೌಡಿಸಂ ಮೂರನ್ನೂ ಗುಣಾಕಾರ ಮಾಡಿ ಹಾಡು ಬರೆದುಕೊಂಡುವಂತೆ ನಿರ್ದೇಶಕ ಸೂರಿ ನನಗೆ ಡಿಮ್ಯಾಂಡ್ ಮಾಡಿದ್ದರು ಎಂದು ಹೇಳಿದ್ದರು.

ಜೊತೆಗೆ 'ಟಗರು' ಹಾಡಿನಂತೆಯೇ ದುನಿಯಾ ಮ್ಯಾನರಿಸಂಗೆ ತಕ್ಕಂತೆ ಹಾಗೂ ಕಾಡಿನಲ್ಲಿ ಅಲೆಯುವ ಸಲಗ ನಾಡಿಗೆ ಬಂದರೆ ಹೇಗಿರುತ್ತದೆ ಎಲ್ಲವನ್ನೂ ಸೇರಿಸಿ ಈ ಚಿತ್ರಕ್ಕೆ ಕೂಡಾ ಟೈಟಲ್ ಹಾಡು ಬರೆಯುತ್ತಿರುವುದಾಗಿ ನಾಗೇಂದ್ರ ಪ್ರಸಾದ್ ಹೇಳಿದರು.

ABOUT THE AUTHOR

...view details