ಮುಂಬೈ : ಸೈರಾಟ್ ಸುಂದರಿ ರಿಂಕು ರಾಜ್ಗುರು HSC (ದ್ವಿತೀಯ ಪಿಯುಸಿ) ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಪ್ರತಿಶತ 82 ಅಂಕ ಬಾಚಿಕೊಂಡು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.
ಮರಾಠಿಯ ಬ್ಲಾಕ್ ಬಸ್ಟರ್ 'ಸೈರಾಟ್' ಸಿನಿಮಾ ಮೂಲಕ ನ್ಯಾಷನಲ್ ಸ್ಟಾರ್ ಆಗಿರುವ ರಿಂಕು, ಓದಿನಲ್ಲಿ ಹಿಂದೆ ಬಿದ್ದಿಲ್ಲ. ಅಭಿನಯದ ಜತೆಗೆ ವಿದ್ಯಾಭ್ಯಾಸಕ್ಕೆ ಪ್ರಾಮುಖ್ಯತೆ ನೀಡುತ್ತ ಬಂದಿದ್ದಾರೆ. ಜೈ ತುಳಜಾ ಭವಾನಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಬಾಹ್ಯ ವಿದ್ಯಾರ್ಥಿಯಾಗಿ ಪರೀಕ್ಷೆಗೆ ಹಾಜರಾಗಿದ್ದ ರಿಂಕು, ಭೌಗೋಳ ಶಾಸ್ತ್ರದಲ್ಲಿ ಅತೀ ಹೆಚ್ಚು ಅಂಕ ಪಡೆದಿದ್ದಾರೆ. ಇನ್ನುಳಿದಂತೆ ಇಂಗ್ಲಿಷ್- 54, ಮರಾಠಿ - 83, ರಾಜ್ಯಶಾಸ್ತ್ರ-77, ಅರ್ಥಶಾಸ್ತ್ರ-77 ಹಾಗೂ ಪರಿಸರ ಅಧ್ಯಯನದಲ್ಲಿ 49 ಅಂಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.