ಕರ್ನಾಟಕ

karnataka

ETV Bharat / sitara

ಕಿಚ್ಚನ ಪೋಸ್ಟರ್​ ಬಿಡುಗಡೆ ಮಾಡಿದ ಸೈರಾ ಚಿತ್ರತಂಡ.. ವಂದನೆ ಸಲ್ಲಿಸಿದ ಪೈಲ್ವಾನ್! - ಸೈರಾ ನರಸಿಂಹ ರೆಡ್ಡಿ ಪೋಸ್ಟರ್​,

ಟಾಲಿವುಡ್ ಬಹುನಿರೀಕ್ಷಿತ ಚಿತ್ರ ಸೈರಾ ನರಸಿಂಹ ರೆಡ್ಡಿ ಸಿನಿಮಾದಲ್ಲಿ ಕಿಚ್ಚ ಸುದೀಪ್ ನಟಿಸಿದ್ದು, ಕಿಚ್ಚನ ಹುಟ್ಟುಹಬ್ಬದಕ್ಕೆ  'ಸೈರಾ ನರಸಿಂಹ ರೆಡ್ಡಿ' ಚಿತ್ರತಂಡ ಹಾಗೂ ನಿರ್ದೇಶಕ ಸುರೇಂದರ್ ರೆಡ್ಡಿ ಕಿಚ್ಚನ ಹೊಸ ಪೋಸ್ಟರ್ ಬಿಡುಗಡೆ ಮಾಡಿ ಶುಭಕೋರಿದ್ದಾರೆ. ಇದಕ್ಕೆ ಕಿಚ್ಚ ಸುದೀಪ್​​ ಅವರು ತಮ್ಮ ಟ್ವಿಟರ್​ ಖಾತೆ ಫೋಟೋ ಪೋಸ್ಟ್​ ಮಾಡುವ ಮೂಲಕ ಚಿತ್ರತಂಡಕ್ಕೆ ವಂದನೆ ಸಿಲ್ಲಿಸಿದ್ದಾರೆ.

ಕಿಚ್ಚ ಸುದೀಪ್

By

Published : Sep 2, 2019, 11:59 PM IST

ಸೈರಾ ನರಸಿಂಹ ರೆಡ್ಡಿ ಟಾಲಿವುಡ್ ಬಹುನಿರೀಕ್ಷಿತ ಚಿತ್ರ. ಈ ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ ಪ್ರಮುಖ ಪಾತ್ರಧಾರಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಕಿಚ್ಚ ಸುದೀಪ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಕಿಚ್ಚನ ಹುಟ್ಟುಹಬ್ಬದಕ್ಕೆ 'ಸೈರಾ ನರಸಿಂಹ ರೆಡ್ಡಿ' ಚಿತ್ರತಂಡ ಹಾಗೂ ನಿರ್ದೇಶಕ ಸುರೇಂದರ್ ರೆಡ್ಡಿ ಕಿಚ್ಚನ ಹೊಸ ಪೋಸ್ಟರ್ ಬಿಡುಗಡೆ ಮಾಡಿ ಶುಭಕೋರಿದ್ದಾರೆ.

ಕಳೆದ ವರ್ಷವೂ ಸೈರಾ ತಂಡ ಕಿಚ್ಚನ ಪೋಸ್ಟರ್ ಬಿಡುಗಡೆಗೊಳಿಸಿ ಸುದೀಪ್​ ಹುಬ್ಬಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು. ಈ ಬಾರಿ ಕಿಚ್ಚನ ಹೊಸ ಪೋಸ್ಟರ್ ಬಿಡುಗಡೆ ಮಾಡಿದ್ದು, ಕಿಚ್ಚ ಸುದೀಪ್​​ ಅವರು ತಮ್ಮ ಟ್ವಿಟರ್​ ಖಾತೆ ಫೋಟೋ ಪೋಸ್ಟ್​ ಮಾಡುವ ಮೂಲಕ ಚಿತ್ರತಂಡಕ್ಕೆ ವಂದನೆ ಸಲ್ಲಿಸಿದ್ದಾರೆ.

ಬಿಗ್ ಬಜೆಟ್ ಸಿನಿಮಾ ಇದಾಗಿದ್ದು, ಮೆಗಾಸ್ಟಾರ್ ಚಿರಂಜೀವಿ ,ಅಮಿತಾಭ್ ಬಚ್ಚನ್ , ಕಿಚ್ಚ ಸುದೀಪ್​​, ನಯನತಾರಾ ಹೀಗೆ ದೊಡ್ಡ ದೊಡ್ಡ ನಟರ ದಂಡೆ ಈ ಸಿನಿಮಾದಲ್ಲಿದೆ. ಇನ್ನೂ ಈ ಸಿನಿಮಾದಲ್ಲಿ ಕಿಚ್ಚನ ಖಡಕ್ ಲುಕ್​ಗೆ ಅಭಿಮಾನಿಗಳು ಬಹುಪರಾಕ್ ಎಂದಿದ್ದಾರೆ.ಅಭಿನಯ ಚಕ್ರವರ್ತಿ ಈ ಚಿತ್ರದಲ್ಲಿ ಅಭಿನಯಿಸುತ್ತಿರುವುದರಿಂದ ಕರ್ನಾಟಕದಲ್ಲೂ ಈ ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಇದೆ. ಈ ಐತಿಹಾಸಿಕ ಚಿತ್ರ ಅಕ್ಟೋಬರ್ 2ಕ್ಕೆ ತೆರೆಗೆ ಬರುವ ನಿರೀಕ್ಷೆಯಿದೆ.

ABOUT THE AUTHOR

...view details