ಕರ್ನಾಟಕ

karnataka

ETV Bharat / sitara

ಸಿನಿಮಾಗೆ ತಮ್ಮ ಹೆಸರು ಹೀಗೆ ಬಳಸಿಕೊಂಡಿದ್ದಕ್ಕೆ ಸಾಯಿಕುಮಾರ್​​ ಬೇಸರ - saikumar upset

ಕನ್ನದಲ್ಲಿ ಹಲ್ಕ ಡಾನ್ ಸಾಯಿಕುಮಾರ್ ಫ್ಯಾನ್ ಎಂಬ ಸಿನಿಮಾ ನಿರ್ಮಾಣವಾಗುತ್ತಿದ್ದು, ಈ ಚಿತ್ರದ ಹೆಸರಿನಿಂದ ಸಾಯಿಕುಮಾರ್​ ಬೇಸರಗೊಂಡಿದ್ದಾರೆ.

SAIKUMAR UPSET ON KANNADA TITLE
ಸಾಯಿಕುಮಾರ್

By

Published : Dec 14, 2019, 8:56 AM IST

ಕನ್ನಡದಲ್ಲಿ ಸಿನಿಮಾವೊಂದು ನಿರ್ಮಾಣವಾಗುತ್ತಿದ್ದು, ಈ ಸಿನಿಮಾಕ್ಕೆ ಸಾಯಿಕುಮಾರ್​ ಹೆಸರು ಬಳಕೆಯಾಗಿದೆ. ಚಿತ್ರದ ಹೆಸರಿಡುವಾಗ ಸಾಯಿಕುಮಾರ್​​ಗೆ ಕಸಿವಿಸಿಯಾಗುವ ಸಿನಿಮಾ ಹೆಸರು ಇಟ್ಟಿದ್ದಾರೆ. ಆ ಸಿನಿಮಾ ಹೆಸರೇ ‘ಹಲ್ಕ ಡಾನ್ ಸಾಯಿಕುಮಾರ್ ಫ್ಯಾನ್’. ಈ ಸಿನಿಮಾ ಹೆಸರು ಕೇಳಿ ಸಾಯಿಕುಮಾರ್​​ ಬೇಸರಗೊಂಡಿದ್ದಾರೆ.

‘ಹಲ್ಕ ಡಾನ್ ಸಾಯಿಕುಮಾರ್ ಫ್ಯಾನ್ ಪೋಸ್ಟರ್​

ಈ ಸಿನಿಮಾಕ್ಕೆ ‘ಅಂದವಾದ’ ಚಿತ್ರ ನಿರ್ದೇಶಕ ಚಲ ಆಕ್ಷನ್​ ಕಟ್​ ಹೇಳುತ್ತಿದ್ದಾರೆ. ಈ ಚಿತ್ರದಲ್ಲಿ ನಾಯಕನಾಗಿ ಜೈ ಕಾಣಿಸಿಕೊಂಡಿದ್ದಾರೆ.

ಇನ್ನು ಜನಪ್ರಿಯ ನಟರೊಬ್ಬರ ಹೆಸರನ್ನು ಈ ರೀತಿ ಉಪಯೋಗ ಮಾಡಬಾರದು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಫರ್ಮಾನು ಹೊರಡಿಸಲಾಗಿದೆ. ಹೇಳಿ ಕೇಳಿ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಸುಮಾರು 200ಕ್ಕೂ ಹೆಚ್ಚು ಸಿನಿಮಾಗಳನ್ನು ಮಾಡಿರುವ ಸಾಯಿಕುಮಾರ್ ಹೆಸರೇ ಯಾಕೆ ಬೇಕು ಎಂದು ಅವರ ಅಭಿಮಾನಿಗಳು ಕೇಳುತ್ತಿದ್ದಾರೆ.

‘ಹಲ್ಕ ಡಾನ್ ಸಾಯಿಕುಮಾರ್ ಫ್ಯಾನ್’ ಚಿತ್ರಕ್ಕೆ ಡಿ.ಆರ್.ಮಧು ಜಿ. ರಾಜ್ ಹಾಗೂ ಕಿರಣ್ ಗೌಡ ಬಿ.ಆರ್. ಹಣ ಹೂಡುತ್ತಿದ್ದಾರೆ.

ABOUT THE AUTHOR

...view details