ಅಜಯ್ ದೇವಗನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ತಾನಾಜಿ ಸಿನಿಮಾ ರಿಲೀಸ್ ಆಗಿ ಬಿಗ್ ಹಿಟ್ ನೀಡುತ್ತಿದೆ. ಈ ಸಿನಿಮಾ ಮರಾಠರ ಬಗ್ಗೆ ನಿರ್ಮಾಣಾಗಿದ್ದು, ಸ್ವಾತಂತ್ರ್ಯ ಪೂರ್ವದ ಭಾರತದ ಬಗ್ಗೆ ಚಿತ್ರದಲ್ಲಿ ಹೇಳಲಾಗಿದೆ.
ಇದೀಗ ಈ ಸಿನಿಮಾ ಬಗ್ಗೆ ಮಾತನಾಡಿರುವ ನಟ ಸೈಫ್ ಅಲಿಖಾನ್ ಸಖತ್ ಟ್ರೋಲ್ ಆಗ್ತಿದ್ದಾರೆ. ಭಾರತದ ಬಗ್ಗೆ ಸೈಫ್ ಅಲಿಖಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ನೆಟ್ಟಿಗರು ನಟನಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇತ್ತೀಚೆಗೆ ನಡೆದಿದ್ದ ಸಂದರ್ಶನವೊಂರದಲ್ಲಿ ಮಾತನಾಡಿದ್ದ ಸೈಫ್ ಅಲಿಖಾನ್, ಈ ಸಿನಿಮಾವನ್ನ ನಾನು ಇತಿಹಾಸ ಎನ್ನಲಾರೆ. ಬ್ರಿಟಿಷರು ಭಾರತಕ್ಕೆ ಬರುವವರೆಗೂ ಇಂಡಿಯಾ ಎಂಬ ಕಾನ್ಸಪ್ಟೇ ಇರಲಿಲ್ಲ ಎಂದು ಹೇಳಿದ್ದಾರೆ.
ಈ ಹೇಳಿಕೆಯನ್ನಿಟ್ಟುಕೊಂಡು ಸೈಫ್ ಅವರನ್ನ ಕಾಲೆಳೆಯುತ್ತಿರುವ ನೆಟ್ಟಿಗರು, ನೀವು ಮೊದಲು ಭಾರತದ ಇತಿಹಾಸವನ್ನು ತಿಳಿದುಕೊಳ್ಳಿ. 1600 ಈಸ್ಟ್ ಇಂಡಿಯಾ ಕಂಪನಿ ಭಾರತಕ್ಕೆ ಬಂತು. 1492ರಲ್ಲಿ ಕೊಲಂಬಸ್ ಭಾರತವನ್ನು ಅನ್ವೇಶಿಸಿದ. 1515ರಲ್ಲಿ ಹಿಂದೂ ಮಹಾಸಾಗರ ಎಂದು ಹೆಸರಿಲಾಗಿದೆ ಎಂದು ಕಮೆಂಟ್ ಮಾಡುವ ಮೂಲಕ ಭಾರತದ ಇತಿಹಾಸ ಬಗ್ಗೆ ಸೈಫ್ ಅಲಿಖಾನ್ಗೆ ಪಾಠ ಮಾಡಿದ್ದಾರೆ.