ನಟಿ ಕರೀನಾ ಕಪೂರ್ ಮುದ್ದಿನ ಮಗ ತೈಮೂರ್ ಆಗಿಂದಾಗ್ಗೆ ಸುದ್ದಿ ಆಗ್ತಾನೆ ಇರ್ತಾನೆ. ಅಪ್ಪ ಅಮ್ಮನ ಜೊತೆ ತನ್ನ ತುಂಟ ಆಟಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಜನರನ್ನು ಸೆಳೆಯುತ್ತಿದ್ದಾನೆ. ಇದೀಗ ಜಮೀನಿನ ಕೆಸರಿನಲ್ಲಿ ಆಟವಾಡುವ ತೈಮೂರ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕರೀನಾ ಕಂದನ ಕೆಸರಾಟ : ಫೋಟೋ ವೈರಲ್ - ಸೈಫ್ ಅಲಿಖಾನ್ ಮಗ ತೈಮೂರ್
ಬಾಲಿವುಡ್ ನಟ ಸೈಫ್ ಅಲಿ ಖಾನ್ 'ಬೂಟ್ ಪಾಲೀಶ್' ಸಿನಿಮಾದ ಶೂಟಿಂಗ್ನಲ್ಲಿದ್ದಾರೆ. ಡಾಲ್ಹೌಸಿಯ ಪಟೌಡಿ ಬಂಗಲೆಯಲ್ಲಿರುವ ಸೈಫ್ ಅಲಿಖಾನ್ ಚಿತ್ರೀಕರಣದ ಬಿಡುವಿನ ವೇಳೆಯಲ್ಲಿ ಮಗನ ಜೊತೆ ಪಕ್ಕದ ಜಮೀನಿನಲ್ಲಿ ಆಟವಾಡಿದ್ದಾರೆ. ಈ ವೇಳೆ ಸೈಫ್ ಪುತ್ರ, ಪೋರ ತೈಮೂರ್ ಕೆಸರಿನಲ್ಲಿ ಆಟವಾಡುತ್ತಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.
![ಕರೀನಾ ಕಂದನ ಕೆಸರಾಟ : ಫೋಟೋ ವೈರಲ್ Saif Ali Khan and son Taimur took up farming in Pataudi, Kareena Kapoor is missing as they enjoy getting their feet dirty in mud](https://etvbharatimages.akamaized.net/etvbharat/prod-images/768-512-9467181-thumbnail-3x2-giri.jpg)
ಸದ್ಯ ಬಾಲಿವುಡ್ ನಟ ಸೈಫ್ ಅಲಿ ಖಾನ್ 'ಬೂಟ್ ಪಾಲೀಶ್' ಸಿನಿಮಾದ ಶೂಟಿಂಗ್ನಲ್ಲಿದ್ದಾರೆ. ಡಾಲ್ಹೌಸಿಯ ಪಟೌಡಿ ಬಂಗಲೆಯಲ್ಲಿರುವ ಸೈಫ್ ಅಲಿಖಾನ್ ಚಿತ್ರೀಕರಣದ ಬಿಡುವಿನ ವೇಳೆಯಲ್ಲಿ ಮಗನ ಜೊತೆ ಪಕ್ಕದ ಜಮೀನಿನಲ್ಲಿ ಆಟವಾಡಿದ್ದಾರೆ. ಈ ವೇಳೆ ಸೈಫ್ ಪುತ್ರ, ಪೋರ ತೈಮೂರ್ ಕೆಸರಿನಲ್ಲಿ ಆಟವಾಡುತ್ತಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.
ಸದ್ಯ ಎರಡನೇ ಮಗುವಿಗೆ ತಾಯಿಯಾಗುತ್ತಿರುವ ಕರೀನಾ ಕಪೂರ್, ಅಮಿರ್ ಖಾನ್ ಅಭಿನಯದ 'ಲಾಲ್ ಸಿಂಗ್ ಚಡ್ಡ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹಾಗಾಗ್ಗೆ ತೈಮೂರ್ ಫೋಟೋಗಳನ್ನು ಶೇರ್ ಮಾಡುವ ಕರೀನಾ ಕಪೂರ್ ಇತ್ತೀಚೆಗೆ ಕ್ರಿಕೆಟ್ ಆಡುವ ವಿಡಿಯೋವನ್ನು ಶೇರ್ ಮಾಡಿದ್ದರು.