ಕರ್ನಾಟಕ

karnataka

ETV Bharat / sitara

8 ವರ್ಷಗಳ ಹಿಂದಿನ ಸಾಯಿ ಪಲ್ಲವಿ ಸಾಲ್ಸಾ ಡ್ಯಾನ್ಸ್ ವಿಡಿಯೋ ವೈರಲ್ - Tango festival

2013 ರಲ್ಲಿ ಜಾರ್ಜಿಯಾದಲ್ಲಿ ನಡೆದ ಟ್ಯಾಂಗೋ ಫೆಸ್ಟಿವಲ್​​​ನಲ್ಲಿ ಸಾಯಿ ಪಲ್ಲವಿ ಮಾಡಿದ್ದ ಡ್ಯಾನ್ಸ್ ವಿಡಿಯೋವೊಂದು ಈಗ ಯೂಟ್ಯೂಬ್​​​ನಲ್ಲಿ ಲಭ್ಯವಿದ್ದು ಈ ವಿಡಿಯೋ ಈಗ ಬಹಳ ವೈರಲ್ ಆಗುತ್ತಿದೆ.

Sai Pallavi
ಸಾಯಿ ಪಲ್ಲವಿ

By

Published : Feb 9, 2021, 7:05 AM IST

ಸಾಯಿ ಪಲ್ಲವಿ, ತಮ್ಮ ಮನಮೋಹಕ ನೃತ್ಯ ಹಾಗೂ ಸರಳತೆಯಿಂದಲೇ ಅಭಿಮಾನಿಗಳ ಮನಸ್ಸು ಕದ್ದ ಚೆಲುವೆ. ಯಾವುದೇ ತರಬೇತಿ ಇಲ್ಲದೆ, ಯಾವ ಆ್ಯಕ್ಟಿಂಗ್ ಕ್ಲಾಸ್​​​ಗೆ ಕೂಡಾ ಹೋಗದೆ ಇಂದು ಬೇಡಿಕೆ ನಟಿಯಾಗಿ ಹೆಸರು ಮಾಡಿರುವ ಈ ಚೆಲುವೆಗೆ ಲಕ್ಷಾಂತರ ಸಂಖ್ಯೆಯ ಅಭಿಮಾನಿಗಳಿದ್ದಾರೆ.

ಸಾಯಿ ಪಲ್ಲವಿ, ಆ್ಯಕ್ಟಿಂಗ್​​ಗಿಂತ ಹೆಚ್ಚಾಗಿ ಡ್ಯಾನ್ಸರ್ ಆಗಿ ಫೇಮಸ್. ಆಕೆ ಬಣ್ಣದ ಲೋಕಕ್ಕೆ ಬರುವ ಮುನ್ನ ಅನೇಕ ಡ್ಯಾನ್ಸ್ ಕಾಂಪಿಟೇಷನ್​​​​ಗಳಲ್ಲಿ ಭಾಗವಹಿಸುತ್ತಿದ್ದರು. ಬಹುತೇಕ ಎಲ್ಲಾ ಸ್ಪರ್ಧೆಗಳಲ್ಲೂ ಜಡ್ಜ್​​​​​ಗಳ ಮೆಚ್ಚುಗೆಗೆ ಪಾತ್ರರಾಗಿ ಗೆಲುವು ಸಾಧಿಸುತ್ತಿದ್ದರು. ಯೂಟ್ಯೂಬ್​​​​​ನಲ್ಲಿ 1 ಬಿಲಿಯನ್ ವೀಕ್ಷಣೆ ಪಡೆದಿರುವ 'ಮಾರಿ 2' ಚಿತ್ರದ ರೌಡಿ ಬೇಬಿ ಹಾಡು ಇದಕ್ಕೆ ಸಾಕ್ಷಿ. ಇದೀಗ ಸಾಯಿ ಪಲ್ಲವಿ ಸಾಲ್ಸಾ ಡ್ಯಾನ್ಸ್ ಮಾಡಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ. ಆದರೆ ಇದು 8 ವರ್ಷಗಳ ಹಿಂದಿ ವಿಡಿಯೋ. 2013 ರಲ್ಲಿ ಜಾರ್ಜಿಯಾದಲ್ಲಿ ನಡೆದ ಟ್ಯಾಂಗೋ ಫೆಸ್ಟಿವಲ್​​​ನಲ್ಲಿ ಸಾಯಿ ಪಲ್ಲವಿ ತಮ್ಮ ಸಹಸ್ಪರ್ಧಿ ಜೊತೆ ಮಾಡಿದ್ದ ಸಾಲ್ಸಾ ಡ್ಯಾನ್ಸ್ ಈಗ ವೈರಲ್ ಆಗುತ್ತಿದೆ. ಕಂದು ಬಣ್ಣ ಧರಿಸಿ ವೇದಿಕೆ ಮೇಲೆ ನೃತ್ಯ ಮಾಡುತ್ತಿರುವ ಸಾಯಿ ಪಲ್ಲವಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಸಾಯಿ ಪಲ್ಲವಿ

ಇದನ್ನೂ ಓದಿ:ಬಿಗ್ ಬಾಸ್ ನಲ್ಲಿ ಭಾಗವಹಿಸುತ್ತೀರಾ ಎಂಬ ಪ್ರಶ್ನೆಗೆ ಹಿತಾ ಹೇಳಿದ್ದೇನು?

ಸಿನಿಮಾ ವಿಚಾರಕ್ಕೆ ಬರುವುದಾದರೆ ಸಾಯಿ ಪಲ್ಲವಿ ಸದ್ಯಕ್ಕೆ ಲವ್ ಸ್ಟೋರಿ, ವಿರಾಟ ಪರ್ವಂ, ಶ್ಯಾಮ್ ಸಿಂಗ ರಾಯ್ ಹಾಗೂ ತೆಲುಗಿನ ರೀಮೇಕ್ ಆದ ಅಯ್ಯಪ್ಪನುಮ್ ಕೋಶಿಯುಮ್ ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ.

ABOUT THE AUTHOR

...view details