ಕರ್ನಾಟಕ

karnataka

ETV Bharat / sitara

ಮತ್ತೊಂದು ಯೂಟ್ಯೂಬ್ ದಾಖಲೆ ಮುರಿದ ಸಾಯಿಪಲ್ಲವಿ: ಎಲ್ಲೆಡೆ ರೌಡಿ ಬೇಬಿಯದ್ದೇ ಹವಾ..! - undefined

ಈ ಮುನ್ನ 'ಫಿದಾ' ಸಿನಿಮಾದ 'ವಚ್ಚಿಂದೆ ಪಿಲ್ಲ ಮೆಲ್ಲಗೆ ವಚ್ಚಿಂದೆ' ಹಾಡು ಯೂಟ್ಯೂಬ್​ನಲ್ಲಿ ಅತಿ ಹೆಚ್ಚು ವೀಕ್ಷಿಸಲಾದ ದಕ್ಷಿಣ ಭಾರತದ ಹಾಡು ಎಂಬ ದಾಖಲೆ ಮಾಡಿತ್ತು. ಆದರೆ ಈಗ ಆ ದಾಖಲೆಯನ್ನು 'ಮಾರಿ-2' ಸಿನಿಮಾದ 'ರೌಡಿಬೇಬಿ' ಹಾಡು ಬ್ರೇಕ್ ಮಾಡಿದೆ.

ಸಾಯಿಪಲ್ಲವಿ

By

Published : May 8, 2019, 7:14 PM IST

ಸಾಯಿ ಪಲ್ಲವಿ, ದಕ್ಷಿಣ ಭಾರತದ ಹೆಚ್ಚು ಫ್ಯಾನ್ ಫಾಲೋಯಿಂಗ್ ಹೊಂದಿರುವ ನಟಿಯರಲ್ಲಿ ಒಬ್ಬರು. ಮಲಯಾಳಂ 'ಪ್ರೇಮಂ' ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ಇಂಡಸ್ಟ್ರಿಗೆ ಕಾಲಿಟ್ಟ ಈ ಪಿಂಪಲ್ ಬ್ಯೂಟಿ 'ಫಿದಾ' ಸಿನಿಮಾ ಮೂಲಕ ಟಾಲಿವುಡ್​​​ಗೆ ಪರಿಚಯವಾದರು.

'ಫಿದಾ'

2017 ರಲ್ಲಿ ಬಿಡುಗಡೆಯಾಗದ ಶೇಖರ್ ಕಮ್ಮುಲ ನಿರ್ದೇಶನದ 'ಫಿದಾ' ಸಿನಿಮಾದ 'ವಚ್ಚಿಂದೆ ಪಿಲ್ಲ ಮೆಲ್ಲಗ ವಚ್ಚಿಂದೆ' ಎಲ್ಲರ ಮೋಸ್ಟ್ ಫೇವರೆಟ್ ಹಾಡಾಗಿತ್ತು. ಯೂಟ್ಯೂಬ್​​​​ನಲ್ಲಿ ಅತಿ ಹೆಚ್ಚು ವೀಕ್ಷಿಸಲಾದ ದಕ್ಷಿಣ ಭಾರತದ ತೆಲುಗು ಸಿನಿಮಾ ಹಾಡು ಎಂಬ ಹೆಗ್ಗಳಿಕೆ ಗಳಿಸಿತ್ತು. ಇದುವರೆಗೂ ಸುಮಾರು 200 ಮಿಲಿಯನ್ ಜನರು ಈ ಹಾಡನ್ನು ವೀಕ್ಷಿಸಿದ್ದು ಈ ಖ್ಯಾತಿ ಗಳಿಸಿದ ಮೊದಲ ತೆಲುಗು ಹಾಡು ಎಂಬ ಕೀರ್ತಿಗೆ ಕೂಡಾ ಪಾತ್ರವಾಗಿದೆ.

'ಮಾರಿ-2'

ಇದೀಗ ಆ ದಾಖಲೆಯನ್ನು ತಮಿಳಿನ ಮಾರಿ-2 ಸಿನಿಮಾದ 'ರೌಡಿ ಬೇಬಿ' ಹಾಡು ಬ್ರೇಕ್ ಮಾಡಿದೆ. ಅತಿ ಹೆಚ್ಚು ವೀಕ್ಷಿಸಲಾದ ದಕ್ಷಿಣ ಭಾರತದ ತಮಿಳು ಹಾಡು ಎಂಬ ದಾಖಲೆಗೆ ಈ ಹಾಡು ಸೇರಿದೆ. ಇದುವರೆಗೂ ಈ ಹಾಡಿಗೆ 448 ಮಿಲಿಯನ್ ಹಿಟ್ಸ್ ದೊರಕಿದೆ. ವಿಶೇಷ ಎಂದರೆ ಈ ಎರಡೂ ಹಾಡುಗಳು ಸಾಯಿಪಲ್ಲವಿ ನಟಿಸಿರುವ ಸಿನಿಮಾವಾಗಿದೆ. ಸದ್ಯಕ್ಕೆ ಸಾಯಿ ಪಲ್ಲವಿ ಯೂಟ್ಯೂಬ್​​​ನಲ್ಲೂ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ನಟಿ ಎಂದರೆ ತಪ್ಪಾಗಲಾರದು.

For All Latest Updates

TAGGED:

ABOUT THE AUTHOR

...view details