ಬಿಡುಗಡೆಗೂ ಮುನ್ನವೇ ಅಬ್ಬರಿಸಿ ಬೊಬ್ಬಿರಿಯುತ್ತಿದ್ದ ಡಾರ್ಲಿಂಗ್ ಪ್ರಭಾಸ್ ಹಾಗೂ ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್ ನಟನೆಯ ಸಾಹೋ ಸಿನಿಮಾ ಅಂತೂ ಕಳೆದ ಶುಕ್ರವಾರ ತೆರೆ ಕಂಡಿದೆ. ವಿಶ್ವದಾದ್ಯಂತ ಬಿಡುಗಡೆಯಾಗಿರುವ ಸಾಹೋ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಹಿಂದಿ ಆವೃತ್ತಿಯಲ್ಲಿ ಮುಗ್ಗರಿಸಿದ "ಸಾಹೋ" : ಗಳಿಸಿದ್ದು ಎಷ್ಟು ಗೊತ್ತಾ..? - ಸಾಹೋ ಸಿನಿಮಾ
ಸಾಹೋ ಬಿಡುಗಡೆಯಾದ ಆರೇ ದಿನಕ್ಕೆ ಬರೋಬ್ಬರಿ 248 ಕೋಟಿ ರೂ. ಬಾಚಿದೆ. ಆದ್ರೆ ಹಿಂದಿ ಆವೃತ್ತಿಯಲ್ಲಿ ಸಾಹೋ ಗಳಿಕೆ ಗಣನೀಯವಾಗಿ ಕಡಿಮೆಯಾಗುತ್ತಾ ಬಂದಿದೆ. ಬಿಡುಗಡೆಯಾದ ಐದು ದಿನಕ್ಕೆ ಹಿಂದಿ ಆವೃತ್ತಿಯಲ್ಲಿ 100 ಕೋಟಿ ರೂ. ಮಾತ್ರ ಗಳಿಕೆ ಮಾಡಿದೆ. ಆದ್ರೆ ನೂರು ಕೋಟಿ ದಾಟಿದ ನಂತರ ಗಳಿಕೆಯಲ್ಲಿ ಇಳಿಮುಖ ಕಂಡಿದೆ.
ಈ ಸಾಹೋ ಬಿಡುಗಡೆಯಾದ ಆರೇ ದಿನಕ್ಕೆ ಬರೋಬ್ಬರಿ 248 ಕೋಟಿಯನ್ನು ಬಾಚಿದೆ. ಆದ್ರೆ, ಹಿಂದಿ ಆವೃತ್ತಿಯಲ್ಲಿ ಸಾಹೋ ಗಳಿಕೆ ಗಣನೀಯವಾಗಿ ಕಡಿಮೆಯಾಗುತ್ತಾ ಬಂದಿದೆ. ಬಿಡುಗಡೆಯಾದ ಐದು ದಿನಕ್ಕೆ ಹಿಂದಿ ಆವೃತ್ತಿಯಲ್ಲಿ 100 ಕೋಟಿ ದಾಟಿತ್ತು. ಆದ್ರೆ ನೂರು ಕೋಟಿ ದಾಟಿದ ನಂತರ ಗಳಿಕೆಯಲ್ಲಿ ಇಳಿಮುಖ ಕಂಡಿದೆ.
ಬಿಡುಗಡೆಯ ಮೊದಲ ದಿನ 24.40 ಕೋಟಿ, ನಂತರ ಶನಿವಾರ ಮತ್ತು ಭಾನುವಾರ ಕ್ರಮವಾಗಿ 25.20 ಕೋಟಿಗಳಿಸಿದೆ. ಆದ್ರೆ ಸೋಮವಾರದ ನಂತರ ಇಳಿಮುಖ ಕಂಡಿದ್ದು ಸೋಮವಾರ 14.20 ಕೋಟಿ, ಮಂಗಳವಾರ 9.10 ಕೋಟಿ, ಮತ್ತು ಬುಧವಾರ 6.90 ಕೋಟಿ ಗಳಿಸಿದೆ. ಪ್ರಸ್ತುತ ಹಿಂದಿ ಅವತರಣಿಕೆಯಲ್ಲಿ ಒಟ್ಟು 109.28 ಕೋಟಿ ಗಳಿಕೆ ಮಾಡಿದ್ದು, ಸಿನಿಮಾ ವಿಮರ್ಶಕರಿಂದ ಚರ್ಚೆಗೆ ಗ್ರಾಸವಾಗಿದೆ.