ಸಾಹೋ ಸಿನಿಮಾ ರಿಲೀಸ್ಗೆ ದಿನಗಣನೆ ಶುರುವಾಗಿದೆ. ನಿನ್ನೆಯಷ್ಟೆ ಹೈದರಾಬಾದ್ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಅದ್ಧೂರಿಯಾಗಿ ಸಾಹೋ ಆಡಿಯೋ ರಿಲೀಸ್ ನಡೆಯಿತು.
ಬ್ಯಾಡ್ ಬಾಯ್ ಪ್ರಭಾಸ್ ಜತೆ ಮಸ್ತ್ ಪಾರ್ಟಿ ಮಾಡಿದ ಜಾಕ್ವೇಲಿನ್ - ಹೈದರಾಬಾದ್ನ ರಾಮೋಜಿ ಫಿಲ್ಮ್ ಸಿಟಿ
ಬಾಹುಬಲಿ ಸ್ಟಾರ್ ಪ್ರಭಾಸ್ ಹಾಗೂ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ನಟಿಸಿರುವ ಸಾಹೋ ಚಿತ್ರ ಆಗಸ್ಟ್ 30 ರಂದು ವಿಶ್ವಾದ್ಯಂತ ತೆರೆಗೆ ಬರುತ್ತಿದೆ.
ಇಡೀ ಭಾರತದ ಸಿನಿರಸಿಕರು ಎದುರು ನೋಡುತ್ತಿರುವ ಸಾಹೋ ಚಿತ್ರ ಈ ತಿಂಗಳ ಕೊನೆಯಲ್ಲಿ ರಿಲೀಸ್ ಆಗುತ್ತಿದೆ. ಅದಕ್ಕೂ ಮುಂಚೆ ಅಭಿಮಾನಿಗಳಿಗೆ ಪ್ರಭಾಸ್ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ.
ಟಾಲಿವುಡ್ ಡಾರ್ಲಿಂಗ್ ಪ್ರಭಾಸ್ ನಟಿಸಿರುವ ಸಾಹೋ ಚಿತ್ರದ ಮೂರನೇ ಸಾಂಗ್ ಇಂದು ರಿಲೀಸ್ ಆಗಿದೆ. ಬ್ಯಾಡ್ ಬಾಯ್ ಸಾಲುಗಳ ಈ ವಿಡಿಯೋ ಸಾಂಗ್ ಜಬರ್ದಸ್ತ್ ಆಗಿ ಮೂಡಿ ಬಂದಿದೆ. ಈ ಹಾಟ್ ಹಾಟ್ ಸಾಂಗ್ನಲ್ಲಿ ಬಾಲಿವುಡ್ ಬೆಡಗಿ, ಶ್ರೀಲಂಕಾ ಚೆಲುವೆ ಜಾಕ್ವೆಲಿನ್ ಫರ್ನಾಂಡೀಸ್, ಪ್ರಭಾಸ್ ಜತೆ ಮಸ್ತ್ ಆಗಿ ಕುಣಿದಿದ್ದಾರೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ ಈ ಸಾಂಗ್.