ಕರ್ನಾಟಕ

karnataka

ETV Bharat / sitara

ಮಾರ್ಚ್​ನಲ್ಲಿ ಸೆಟ್ಟೇರಲಿದೆ ಸಾಧುಕೋಕಿಲ 'ಜಾಲಿ ಲೈಫ್' - famous comedian Sadhukokila

ಖ್ಯಾತ ಹಾಸ್ಯ ನಟ ಸಾಧುಕೋಕಿಲ ಪ್ರಸ್ತುತ ಜಾಲಿ ಲೈಫ್ ಎಂಬ ಹೊಸ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದು, ಈ ಚಿತ್ರ ಮಾರ್ಚ್​ನಲ್ಲಿ ಸೆಟ್ಟೇರಲಿದೆ.

Jollylife Cinema
ಜಾಲಿಲೈಫ್ ಸಿನಿಮಾಗೆ ಆ್ಯಕ್ಷನ್ ಕಟ್​ ಹೇಳುತ್ತಿರುವ ಸಾಧುಕೋಕಿಲ

By

Published : Feb 25, 2021, 7:57 AM IST

ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ, ಸಂಗೀತ ನಿರ್ದೇಶಕ ಹಾಗೂ ಸಿನಿಮಾ ನಿರ್ದೇಶಕರೂ ಆಗಿ ಗುರುತಿಸಿಕೊಂಡಿರುವ ಸಾಧುಕೋಕಿಲ ನಿರ್ದೇಶನದ ಮತ್ತೊಂದು ಸಿನಿಮಾ ಮಾರ್ಚ್​ನಲ್ಲಿ ಸೆಟ್ಟೇರಲಿದೆ.

ಜಾಲಿ ಲೈಫ್ ಚಿತ್ರತಂಡ

ಸಾಧುಕೋಕಿಲ ಪ್ರಸ್ತುತ ಜಾಲಿ ಲೈಫ್ ಎಂಬ ಹೊಸ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದು, ಮಾರ್ಚ್​ನಲ್ಲಿ ಸೆಟ್ಟೇರಲಿದೆ. ಈ ಹಿಂದೆ ತ್ರಿಕೋನ ಸಿನಿಮಾ‌ ನಿರ್ಮಿಸಿದ್ದ ರಾಜಶೇಖರ್ ಜಾಲಿ ಲೈಫ್ ಚಿತ್ರವನ್ನು ಪೊಲೀಸ್ ಪ್ರಕ್ಕಿ ಲಾಂಛನದಲ್ಲಿ ನಿರ್ಮಿಸುತ್ತಿದ್ದಾರೆ. ಕಥೆ ಹಾಗು ಚಿತ್ರಕಥೆಯನ್ನು ರಾಜಶೇಖರ್ ಅವರೇ ಬರೆದಿದ್ದು, ತಮ್ಮ ಸಂಸ್ಥೆ ಮೂಲಕ ಈ ವರ್ಷ ನಾಲ್ಕು ಚಿತ್ರಗಳನ್ನು ನಿರ್ಮಿಸುವುದಾಗಿ ತಿಳಿಸಿದ್ದಾರೆ.

ಜಾಲಿ ಲೈಫ್ ಚಿತ್ರತಂಡ

ಜಾಲಿ ಲೈಫ್ ಚಿತ್ರಕ್ಕೆ ತಾರಾಗಣದ ಆಯ್ಕೆಗಾಗಿ ಸುಚೇಂದ್ರ ಪ್ರಸಾದ್ ನೇತೃತ್ವದಲ್ಲಿ ವಿಭಿನ್ನವಾಗಿ ಆಡಿಶನ್ ನಡೆಸಲಾಯಿತು. ರಂಗಾಯಣ, ನೀನಾಸಂ ಹಾಗೂ ಟೆಂಟ್ ಸಿನಿಮಾ ಮೂಲಕ ಸುಮಾರು 500 ರಿಂದ 600 ಜನರು ಆಡಿಶನ್​​ಗೆ ಆಗಮಿಸಿದ್ದು, 18 ಪ್ರತಿಭೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಓದಿ:ಕ್ಷಮೆ ಯಾಚಿಸಿದ ದರ್ಶನ್​: ದಾಸನಿಗೆ ನವರಸನಾಯಕನ ಧನ್ಯವಾದ

ಚಿತ್ರದಲ್ಲಿ ಐದು ಹಾಡುಗಳಿದ್ದು, ಸಾಧುಕೋಕಿಲ ಸಂಗೀತ ನೀಡುತ್ತಿದ್ದಾರೆ. ಗುಂಡ್ಲುಪೇಟೆ ಸುರೇಶ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಸುಚೇಂದ್ರ ಪ್ರಸಾದ್ ಕಾಸ್ಟಿಂಗ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ‌.

ABOUT THE AUTHOR

...view details