ಸಾಧು ಕೋಕಿಲ ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು. ಈ ವ್ಯಕ್ತಿಯ ನಟನೆಗೆ ನಗದವರೇ ಇಲ್ಲ. ಕನ್ನಡದ ಮೇರು ಹಾಸ್ಯನಟರಾದ ನರಸಿಂಹರಾಜು, ಧಿರೇಂದ್ರ ಗೋಪಾಲ್, ದಿನೇಶ್, ಮುಸುರಿ ಕೃಷ್ಣಮೂರ್ತಿ ಅವರ ನಂತರ ಕನ್ನಡ ಚಿತ್ರರಂಗದಲ್ಲಿ ನಗುವಿನ ಗುಳಿಗೆ ನುಂಗಿಸಿದ ಸಾಧು ಮಹಾರಾಜ್ ಇಂದಿಗೂ ಸಖತ್ ಬ್ಯುಸಿ ಇರುವ ನಟ.
ಲೋಕವೇ ನಗುವ ಸಾಧು ನಟನೆ ಈ ವ್ಯಕ್ತಿಗೆ ಮಾತ್ರ ಇಷ್ಟವಿಲ್ವಂತೆ... ಕೋಕಿಲಾಗೆ ಟಿಪ್ಸ್ ಕೊಟ್ಟ ಆ ವ್ಯಕ್ತಿ ಯಾರು? - ಹಾಸ್ಯ ನಟ ಸಾಧುಕೋಕಿಲಾ
ಸಾಧು ನಟನೆಗೆ ಅವರ ಮಗ ಸುರಾಗ್ ಫುಲ್ ಮಾರ್ಕ್ಸ್ ನೀಡಿಲ್ಲವಂತೆ.ಎಲ್ಲಾ ಚಿತ್ರಗಳಲ್ಲೂ ಒಂದೇ ರೀತಿ ಎಕ್ಸ್ಪ್ರೆಷನ್ ಕೊಡ್ತಿರಾ. ಪ್ರತಿಯೊಂದು ಚಿತ್ರದಲ್ಲೂ ಏನಾದರು ಹೊಸರೀತಿ ಟ್ರೈ ಮಾಡಿ ಎಂದು ಸಾಧು ಪುತ್ರ ಸಲಹೆ ನೀಡಿದ್ದಾರಂತೆ.
ಅದರೆ ಈ ಹಾಸ್ಯ ದಿಗ್ಗಜನ ನಟನೆ ಇಬ್ಬರಿಗೆ ಇಷ್ಟವಾಗಿಲ್ಲವಂತೆ. ಅಲ್ಲದೆ ಒಂದೇ ರೀತಿ ಹಾಸ್ಯ ಮಾಡೋದನ್ನು ಬಿಟ್ಟು ಹೊಸದನ್ನು ಪ್ರಯತ್ನ ಮಾಡಿ ಎಂದು ಸಾಧು ಮಾಹರಾಜ್ಗೆ ಆಜ್ಞೆ ಮಾಡಿದ್ದಾರಂತೆ.
ಹೌದು ಕಾಮಿಡಿ ದಿಗ್ಗಜ ಸಾಧು ನಟನೆಗೆ ಅವರ ಮಗ ಸುರಾಗ್ ಫುಲ್ ಮಾರ್ಕ್ಸ್ ನೀಡಿಲ್ಲವಂತೆ. ಎಲ್ಲಾ ಚಿತ್ರಗಳಲ್ಲೂ ಒಂದೇ ರೀತಿ ಎಕ್ಸ್ಪ್ರೆಷನ್ ಕೊಡ್ತಿರಾ. ಪ್ರತಿಯೊಂದು ಚಿತ್ರದಲ್ಲೂ ಏನಾದರು ಹೊಸರೀತಿ ಟ್ರೈ ಮಾಡಿ ಎಂದು ಸಾಧು ಪುತ್ರ ಸಲಹೆ ನೀಡಿದ್ದಾರಂತೆ. ಇನ್ನು ಈ ವಿಷಯವನ್ನು ಸಾಧು ಕೋಕಿಲ ಅವರೇ ಹೇಳಿದ್ದಾರೆ. ಅಲ್ಲದೆ ಮಗನ ಆಸೆಯಂತೆ ಸಾಧು ಕೋಕಿಲ ಮಯಾಬಜಾರ್ ಚಿತ್ರದಲ್ಲಿ ತುಂಬಾ ವಿಶೇಷವಾಗಿ ನಟಿಸಿದ್ದಾರಂತೆ.