ಈ ವಾರದ 'ನನ್ನ ನೀನು ಗೆಲ್ಲಲಾರೆ' ಟಾಸ್ಕ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ವಾಸುಕಿ ವೈಭವ್ ಸಂತೋಷಕ್ಕೆ ದೊಡ್ಡ ಸುನಾಮಿಯೇ ಅಪ್ಪಳಿಸಿದೆ. ತಮ್ಮ ತಂದೆಯನ್ನು ಕಳೆದುಕೊಂಡಿದ್ದ ವಾಸುಕಿಗೆ ಇದೀಗ ಮತ್ತೊಂದು ಆಘಾತದ ಸುದ್ದಿ ಬಂದಿದೆ. ಬಿಗ್ ಬಾಸ್ ವಾಸುಕಿ ವೈಭವ್ ಅವರನ್ನು ಕನ್ಫೆಷನ್ ರೂಂಗೆ ಕರೆದು ಶಾಕಿಂಗ್ ನ್ಯೂಸ್ ನೀಡಿದ್ದಾರೆ.
ಬಿಗ್‍ಬಾಸ್ ಮನೆಯಲ್ಲಿ ವಾಸುಕಿಗೆ ಶಾಕಿಂಗ್ ನ್ಯೂಸ್... ಬಿಕ್ಕಿ ಬಿಕ್ಕಿ ಅತ್ತ ವೈಭವ್! - ವಾಸುಕಿ ವೈಭವ್
ಬಿಗ್ ಬಾಸ್ ಮನೆಯಲ್ಲಿ ವಾಸುಕಿ ವೈಭವ್ ಅವರಿಗೆ ಬಿಗ್ ಬಾಸ್ ಶಾಕಿಂಗ್ ನ್ಯೂಸ್ ನೀಡಿದ್ದು, ಇದರಿಂದ ಕನ್ಫೆಷನ್ ರೂಂನಲ್ಲಿ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ವಾಸುಕಿಯನ್ನು ಕನ್ಫೆಷನ್ ರೂಂಗೆ ಕರೆದ ಬಿಗ್ ಬಾಸ್, ಅನಾರೋಗ್ಯದ ಕಾರಣ ನಿಮ್ಮ ಮಾವ ತೀರಿಕೊಂಡಿದ್ದಾರೆ ಎಂಬ ಸುದ್ದಿ ತಿಳಿಸುತ್ತಾರೆ.ಈ ವೇಳೆ ತಾವು ಮನೆಗೆ ಹೋಗಬೇಕು ಎಂದು ಕೇಳಿದ್ದಾರೆ. ಆದರೆಅಂತ್ಯಕ್ರಿಯೆಗೆ ಸಂಬಂಧಿಸಿದ ಎಲ್ಲಾ ಕಾರ್ಯಗಳು ಮುಗಿದಿವೆ ಎಂದು ಬಿಗ್‍ಬಾಸ್ ತಿಳಿಸಿದ್ದಾರೆ. ಜತೆಗೆಈ ದುಃಖವನ್ನು ಭರಿಸುವ ಶಕ್ತಿ ನಿಮಗೆ ಮತ್ತು ನಿಮ್ಮ ಮನೆಯವರಿಗೆ ಸಿಗಲಿ ಎಂದು ಬಿಗ್ ಬಾಸ್ ಪ್ರಾರ್ಥಿಸುತ್ತಾರೆ.ತಕ್ಷಣ ವಾಸುಕಿ ಬಿಕ್ಕಿ ಬಿಕ್ಕಿ ಜೋರಾಗಿ ಅಳಲು ಶುರು ಮಾಡಿದ್ದಾರೆ.
ಇದಾದ ಮೇಲೆ ದು:ಖಿತರಾಗಿದ್ದ ವಾಸುಕಿಯನ್ನು ಸಮಾಧಾನ ಮಾಡಲು ಶೈನ್ ಅವರನ್ನು ಬಿಗ್ ಬಾಸ್ ಕನ್ಫೆಷನ್ ರೂಂಗೆ ಕರೆಸುತ್ತಾರೆ. ನಂತರ ಮನೆ ಮಂದಿಯೆಲ್ಲರೂ ಸೇರಿ ವಾಸುಕಿಯನ್ನು ಸಮಾಧಾನ ಮಾಡಿದ್ದಾರೆ.