ಪವರ್ ಸ್ಟಾರ್ ಒಡೆತನದ ಪಿಆರ್ಕೆ ಸಂಸ್ಥೆ ನಿರ್ಮಿಸಿರುವ ಮಾಯಾಬಜಾರ್ ಚಿತ್ರ ಕಳೆದ ಶುಕ್ರವಾರ ರಿಲೀಸ್ ಆಗಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ವಿಶೇಷ ಅಂದ್ರೆ ಈ ಚಿತ್ರದ ಟೈಟಲ್ ಹಾಡಿಗೆ ಅಮೆರಿಕದ ಮಿನ್ನಿಯಾಪೊಲೀಸ್ ಸಾಥ್ ಕೊರಿಯೋಗ್ರಫಿ ಶಾಲೆಯವರು ಹೆಜ್ಜೆ ಹಾಕಿದ್ದಾರೆ.
ಅಮೆರಿಕನ್ನರಿಂದ ಮಾಯಾಬಜಾರ್ ಹಾಡಿಗೆ ಡ್ಯಾನ್ಸ್: ಪವರ್ ಸ್ಟಾರ್ ಖುಷ್ - ಮಯಾಬಜಾರ್
ಮಯಾಬಜಾರ್ ಚಿತ್ರದ ಟೈಟಲ್ ಹಾಡಿಗೆ ಅಮೆರಿಕದ ಮಿನ್ನಿಯಾಪೊಲೀಸ್ ಸಾಥ್ ಕೊರಿಯೋಗ್ರಫಿ ಶಾಲೆಯವರು ಹೆಜ್ಜೆ ಹಾಕಿದ್ದಾರೆ. ಇದಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಮೆರಿಕಾದವರಿಂದ ಮಾಯಾಬಜಾರ್ ಹಾಡಿಗೆ ಡ್ಯಾನ್ಸ್ : ಅಪ್ಪು ಮೆಚ್ಚುಗೆ
ಈ ಖುಷಿಯನ್ನು ತಮ್ಮ ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ಅಪ್ಪು, ಅಮೆರಿಕದ ಮಿನ್ನಿಯಾಪೊಲೀಸ್ ಸಾಥ್ ಕೊರಿಯೋಗ್ರಫಿ ಶಾಲೆಯವರು ಮಾಯಾಬಜಾರ್ ಸಿನಿಮಾದ ಟೈಟಲ್ ಹಾಡಿಗೆ ನೃತ್ಯ ಮಾಡಿವುದು ಇಷ್ಟವಾಯಿತು. ಇದೇ ಮಾರ್ಚ್ 6ರಂದು ಮಾಯಾಬಜಾರ್ ಚಿತ್ರವನ್ನು ಅಮೆರಿಕದಲ್ಲೂ ರಿಲೀಸ್ ಮಾಡುತ್ತೇವೆ ಎಂದು ಬರೆದಿದ್ದಾರೆ.
ಈ ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ ಕೂಡ ಒಂದು ಹಾಡಿಗೆ ಕುಣಿದಿದ್ದಾರೆ. ಚಿತ್ರದಲ್ಲಿ ಪ್ರಕಾಶ್ ರಾಜ್, ಅಚ್ಯುತ್ ಕುಮಾರ್, ವಸಿಷ್ಠ ಸಿಂಹ ಸೇರಿದಂತೆ ಬಹುತಾರಾಗಣವಿದೆ.