ಕನ್ನಡದ ಲೆಜೆಂಡರಿ ತಾರೆಯರಿಗೆ ಆಕ್ಷನ್ ಕಟ್ ಹೇಳಿರುವ ನಿರ್ದೇಶಕ ಎಸ್. ನಾರಾಯಣ್ ಇದೀಗ ಸೀರಿಯಲ್ ಕಡೆ ಮುಖ ಮಾಡಿದ್ದಾರೆ. ಅರೆ.. ಏನಪ್ಪ ಇದು ಇವರು ಸೀರಿಯಲ್ ಮಾಡ್ತಿದ್ದಾರಾ ಅಂದುಕೊಂಡ್ರಾ?. ಇಲ್ಲಿ ಎಸ್ ನಾರಾಯಣ್ ನಿರ್ದೇಶಕನಾಗಿ ಬರುತ್ತಿಲ್ಲ, ಬದಲಾಗಿ ಕಿರುತೆರೆ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
'ಪಾರು' ಧಾರಾವಾಹಿಯಲ್ಲಿ ನಿರ್ದೇಶಕ ಎಸ್. ನಾರಾಯಣ್ ನಟನೆ...! - 'ಪಾರು' ಧಾರಾವಾಹಿಯಲ್ಲಿ ನಟಿಸಲಿದ್ದಾರೆ ನಿರ್ದೇಶಕ ಎಸ್. ನಾರಾಯಣ್
ಕನ್ನಡದ ಹಲವು ಸಿನಿಮಾಗಳಿಗೆ ನಿರ್ದೇಶನ ಮಾಡಿದ ಎಸ್. ನಾರಾಯಣ್ , ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಪಾರು' ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
!['ಪಾರು' ಧಾರಾವಾಹಿಯಲ್ಲಿ ನಿರ್ದೇಶಕ ಎಸ್. ನಾರಾಯಣ್ ನಟನೆ...! s narayan acting in paru serial](https://etvbharatimages.akamaized.net/etvbharat/prod-images/768-512-5336130-thumbnail-3x2-giri.jpg)
'ಪಾರು' ಧಾರಾವಾಹಿಯಲ್ಲಿ ನಟಿಸಲಿದ್ದಾರೆ ನಿರ್ದೇಶಕ ಎಸ್. ನಾರಾಯಣ್
ಕನ್ನಡದಲ್ಲಿ ಡಾ. ಅಂಬರೀಶ್, ವಿಷ್ಣುವರ್ಧನ್ ವಿ.ರವಿಚಂದ್ರನ್, ಸುದೀಪ್, ದರ್ಶನ್, ಪುನೀತ್, ಶಿವಣ್ಣನಂತಹ ಹೆಸರಾಂತ ನಾಯಕರ ಸಿನಿಮಾಗಳಿಗೆ ನಿರ್ದೇಶನ ಮಾಡಿರುವ ಇವರು, ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಪಾರು' ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
‘ಪಾರು’ ಈಗಾಗಲೇ ಒಳ್ಳೆಯ ವೀಕ್ಷಕರನ್ನು ಪಡೆದುಕೊಂಡಿದೆ. ಪಕ್ಕ ಸಿನಿಮಾ ಶೈಲಿಯ ಮೇಕಿಂಗ್ ಸಹ ಇದರಲ್ಲಿದೆ. ಪಾರು ಧಾರಾವಾಹಿಗೆ ಎಸ್ ನಾರಾಯಣ್ನಂತಹ ಜನಪ್ರಿಯ ವ್ಯಕ್ತಿ ಆಗಮನ ಕುತೂಹಲವನ್ನು ಹೆಚ್ಚು ಮಾಡಿದೆ.