ಕರ್ನಾಟಕ

karnataka

ETV Bharat / sitara

ರವಿಚಂದ್ರನ್​ ಸಿನಿಮಾಗೆ ಮಹೇಂದರ್​ ನಿರ್ದೇಶನ - ಎಸ್​ ಮಹೇಂದರ್

ಮೊದಲ ಬಾರಿಗೆ ರವಿಚಂದ್ರನ್ ಅಭಿನಯದಲ್ಲಿ ಮಹೇಂದರ್ ಒಂದು ಚಿತ್ರವನ್ನು ನಿರ್ದೇಶಿಸುವುದಕ್ಕೆ ಸಜ್ಜಾಗಿದ್ದಾರೆ. ಈ ಬಗ್ಗೆ ಖುದ್ದಾಗಿ ಮಹೇಂದರ್ ಮಾಹಿತಿ ನೀಡಿದ್ದಾರೆ.

s-mahendar
ರವಿಚಂದ್ರನ್​ ಸಿನಿಮಾಗೆ ಮಹೇಂದರ್​ ನಿರ್ದೇಶನ

By

Published : May 4, 2021, 9:40 AM IST

ಮಹೇಂದರ್ ಇದುವರೆಗೂ 20ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಶಿವರಾಜ್​ ಕುಮಾರ್, ಸುದೀಪ್ ಸೇರಿದಂತೆ ಕನ್ನಡ ಚಿತ್ರರಂಗದ ಹಲವು ಜನಪ್ರಿಯ ಹೀರೋಗಳ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಆದರೆ, ಇದುವರೆಗೂ ಕ್ರೇಜಿ ಸ್ಟಾರ್ ರವಿಚಂದ್ರನ್ ಜೊತೆ ಸಿನಿಮಾ ಮಾಡಿರಲಿಲ್ಲ.

ರವಿಚಂದ್ರನ್ ಮತ್ತು ಮಹೇಂದರ್ ಅವರನ್ನು ಒಟ್ಟಿಗೆ ತರುವ ಪ್ರಯತ್ನಗಳಾದರೂ ಕಾರಣಾಂತರಗಳಿಂದ ಇದುವರೆಗೂ ಯಾವುದೇ ಚಿತ್ರ ಸೆಟ್ಟೇರಿರಲಿಲ್ಲ. ಈಗ ಮೊದಲ ಬಾರಿಗೆ ರವಿಚಂದ್ರನ್ ಅಭಿನಯದಲ್ಲಿ ಮಹೇಂದರ್ ಒಂದು ಚಿತ್ರವನ್ನು ನಿರ್ದೇಶಿಸುವುದಕ್ಕೆ ಸಜ್ಜಾಗಿದ್ದಾರೆ. ಈ ಬಗ್ಗೆ ಖುದ್ದಾಗಿ ಮಹೇಂದರ್ ಮಾಹಿತಿ ನೀಡಿದ್ದಾರೆ.

ರವಿಚಂದ್ರನ್​ರಿ​ಗೆ ಮಹೇಂದರ್ ಕಥೆಯನ್ನು ಹೇಳಿದ್ದು, ಅದು ಅವರಿಗೆ ಇಷ್ಟವಾಗಿದೆಯಂತೆ. ವಿಶೇಷವೆಂದರೆ, ಇದೊಂದು ಗ್ರಾಮೀಣ ಚಿತ್ರ. ರವಿಚಂದ್ರನ್ ಮತ್ತು ಮಹೇಂದರ್​ ಇಬ್ಬರೂ ಗ್ರಾಮೀಣ ಚಿತ್ರಗಳನ್ನು ಮಾಡುವುದರಲ್ಲಿ ತಜ್ಞರು. ಅದಕ್ಕೆ ಪುರಾವೆಯಾಗಿ ಇಬ್ಬರೂ ನಿರ್ದೇಶಿಸಿರುವ ಹಲವು ಚಿತ್ರಗಳು ಸಿಗುತ್ತವೆ. ಈಗ ಇಬ್ಬರೂ ಗ್ರಾಮೀಣ ಚಿತ್ರವೊಂದರ ಮೂಲಕ ಜೊತೆಯಾಗುತ್ತಿರುವುದು ವಿಶೇಷ.

ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಇಷ್ಟರಲ್ಲಿ ಈ ಚಿತ್ರ ಸೆಟ್ಟೇರಬೇಕಿತ್ತು. ಆದರೆ, ಅಷ್ಟರಲ್ಲಿ ಜನತಾ ಕರ್ಫ್ಯೂ ಘೋಷಣೆಯಾದ ಹಿನ್ನೆಲೆಯಲ್ಲಿ ಚಿತ್ರೀಕರಣ ಶುರುವಾಗಿಲ್ಲ. ಮಿಕ್ಕಂತೆ ಮಹೇಂದರ್ ಪ್ರೀಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು, ಜನತಾ ಕರ್ಫ್ಯೂ ಮುಗಿದ ನಂತರ ಈ ಚಿತ್ರವನ್ನು ಪ್ರಾರಂಭ ಮಾಡುವ ಸಾಧ್ಯತೆ ಇದೆ.

ABOUT THE AUTHOR

...view details