ಎಸ್.ಎಸ್. ರಾಜಮೌಳಿ ನಿರ್ದೇಶನದಲ್ಲಿ ರಾಮ್ಚರಣ್ ತೇಜ ಹಾಗೂ ಜ್ಯೂನಿಯರ್ ಎನ್ಟಿಆರ್ ನಟಿಸುತ್ತಿರುವ 'ಆರ್ಆರ್ಆರ್' ಸಿನಿಮಾ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿದೆ. ಈ ನಡುವೆ ಚಿತ್ರದಲ್ಲಿ ಸೀತಾ ಪಾತ್ರದಲ್ಲಿ ನಟಿಸುತ್ತಿರುವ ಆಲಿಯಾ ಭಟ್ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ಡೇಟ್ಸ್ ಹೊಂದಾಣಿಕೆಯಾಗದ ಕಾರಣ ನಿರ್ದೇಶಕ ಎಸ್.ಎಸ್. ರಾಜಮೌಳಿ, ಸಿನಿಮಾದಲ್ಲಿ ಆಲಿಯಾ ಭಟ್ ಭಾಗದ ದೃಶ್ಯಗಳಿಗೆ ಕತ್ತರಿ ಹಾಕುತ್ತಿದ್ದಾರೆ ಎಂಬ ಮಾತು ಹರಿದಾಡುತ್ತಿದೆ.
'ಆರ್ಆರ್ಆರ್'ಗೆ ಸಂಬಂಧಿಸಿದಂತೆ ಆಲಿಯಾ ಭಟ್ ಬಗ್ಗೆ ಹರಿದಾಡುತ್ತಿರುವ ಸುದ್ದಿ ನಿಜಾನಾ...? - Alia Bhat RRR shooting
'ಆರ್ಆರ್ಆರ್' ಚಿತ್ರದಲ್ಲಿ ಆಲಿಯಾ ಭಟ್ ಭಾಗದ ದೃಶ್ಯಗಳಿಗೆ ಕತ್ತರಿ ಹಾಕಲಾಗುತ್ತಿದೆ ಎಂಬ ಸುದ್ದಿ ಶುದ್ಧ ಸುಳ್ಳು. ಆಲಿಯಾ ಭಟ್ ಭಾಗದ ದೃಶ್ಯಗಳು ಇನ್ನೂ ಮುಗಿದಿಲ್ಲ ನಿಜ. ಆದರೆ, ಏಪ್ರಿಲ್ನಲ್ಲಿ ಅವರು ಮತ್ತೆ ಹೈದರಾಬಾದ್ಗೆ ಬಂದು ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ ಎಂದು ಚಿತ್ರತಂಡ ಸ್ಪಷ್ಟಪಡಿಸಿದೆ.
ಇದನ್ನೂ ಓದಿ:ಕಬಿನಿ ಹಿನ್ನೀರಿನಲ್ಲಿ ಬಾಲಿವುಡ್ ನಟಿ ಜೂಹಿ ಚಾವ್ಲಾ ಸಫಾರಿ
ಕಳೆದ ಬಾರಿ ಆಲಿಯಾ ಭಟ್ ಹೈದರಾಬಾದ್ಗೆ ಬಂದು ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಆದರೆ ಅವರ ಭಾಗದ ಚಿತ್ರೀಕರಣ ಇನ್ನೂ ಮುಗಿದಿಲ್ಲ ಎನ್ನಲಾಗಿದೆ. "ಆರ್ಆರ್ಆರ್ ಚಿತ್ರದ ಆಲಿಯಾ ಭಟ್ ಚಿತ್ರೀಕರಣ ಇನ್ನೂ ಪೂರ್ತಿಯಾಗಿಲ್ಲ ನಿಜ. ಆದರೆ, ಚಿತ್ರದಲ್ಲಿ ಅವರ ಭಾಗದ ದೃಶ್ಯಗಳನ್ನು ತೆಗೆದುಹಾಕಲಾಗುತ್ತಿದೆ ಎನ್ನುವುದು ಮಾತ್ರ ಸುಳ್ಳು. ಏಪ್ರಿಲ್ನಲ್ಲಿ ಆಲಿಯಾ ಭಟ್ ಮತ್ತೆ ಹೈದರಾಬಾದ್ಗೆ ಬಂದು ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ . ರಾಮ್ಚರಣ್ ಜೊತೆ ಸೇರಿ ಎರಡು ಹಾಡುಗಳ ಚಿತ್ರೀಕರಣದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ"ಎಂದು ಚಿತ್ರತಂಡ ತಿಳಿಸಿದೆ. ಈ ಚಿತ್ರದಲ್ಲಿ ರಾಮ್ಚರಣ್ ತೇಜ, ಅಲ್ಲುರಿ ಸೀತಾರಾಮರಾಜು ಪಾತ್ರದಲ್ಲಿ ನಟಿಸುತ್ತಿದ್ದು ಆಲಿಯಾ ಭಟ್, ರಾಮ್ ಚರಣ್ಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ಮತ್ತೊಂದಡೆ ಕೋಮುರಂ ಭೀಮ ಪಾತ್ರದಲ್ಲಿ ಜ್ಯೂ. ಎನ್ಟಿಆರ್ ನಟಿಸುತ್ತಿದ್ದಾರೆ. ಇವರಿಗೆ ನಾಯಕಿಯಾಗಿ ಬಾಲಿವುಡ್ ನಟಿ ಒಲಿವಿಯಾ ಮೋರಿಸ್ ನಟಿಸುತ್ತಿದ್ದಾರೆ. ಡಿವಿವಿ ದಾನಯ್ಯ ನಿರ್ಮಿಸುತ್ತಿರುವ ಈ ಚಿತ್ರದ ಹಾಡುಗಳಿಗೆ ಕೀರವಾಣಿ ಸಂಗೀತ ನೀಡುತ್ತಿದ್ದಾರೆ. ಅಜಯ್ ದೇವಗನ್, ಸಮುದ್ರಖನಿ, ಅಲಿಸನ್ ಡೂಡಿ, ರೇ ಸ್ಟೀವೆನ್ಸನ್ ಹಾಗೂ ಇನ್ನಿತರರು ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ. ಸಿನಿಮಾ ಇದೇ ವರ್ಷ ಅಕ್ಟೋಬರ್ 13 ರಂದು ತೆರೆ ಕಾಣಲಿದೆ.