ಕರ್ನಾಟಕ

karnataka

ETV Bharat / sitara

'ಸಪ್ತಸಾಗರದಾಚೆ ಎಲ್ಲೋ' ಚಿತ್ರದ ಬಗ್ಗೆ ರುಕ್ಮಿಣಿ ವಸಂತ್ ಹೇಳಿದ್ದು ಹೀಗೆ - Director Hemant rao

ರಕ್ಷಿತ್ ಶೆಟ್ಟಿ ಜೊತೆ ನಟಿಸುತ್ತಿರುವುದು ಬಹಳ ಖುಷಿಯಾಗಿದೆ. ಈ ಚಿತ್ರ ಗೆಲ್ಲುವ ಭರವಸೆಯಿದೆ. ಹೇಮಂತ್ ರಾವ್ ಅವರಂತ ನಿರ್ದೇಶಕರೊಂದಿಗೆ ಕೆಲಸ ಮಾಡುತ್ತಿರುವುದು ಸಂತೋಷದ ವಿಚಾರ ಎಂದು ನಟಿ ರುಕ್ಮಿಣಿ ವಸಂತ್ 'ಸಪ್ತಸಾಗರದಾಚೆ ಎಲ್ಲೋ' ಚಿತ್ರದ ಬಗ್ಗೆ ಮಾತನಾಡಿದ್ದಾರೆ.

Rukmini vasant
ರುಕ್ಮಿಣಿ ವಸಂತ್

By

Published : Feb 4, 2021, 2:03 PM IST

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 'ಸಪ್ತಸಾಗರದಾಚೆ ಎಲ್ಲೋ' ನಾಯಕಿ ಬಗ್ಗೆ ಚಿತ್ರತಂಡ ಕುತೂಹಲ ಮೂಡಿಸಿ ನಂತರ ಆ ನಟಿ ಯಾರು ಎಂದು ರಿವೀಲ್ ಮಾಡಿತ್ತು. ಬೀರಬಲ್ ಸಿನಿಮಾ ಖ್ಯಾತಿಯ ರುಕ್ಮಿಣಿ ವಸಂತ್‌ ರಕ್ಷಿತ್ ಶೆಟ್ಟಿ ಜೊತೆ ಸಪ್ತಸಾಗರ ದಾಟುತ್ತಿದ್ದಾರೆ. ರುಕ್ಮಿಣಿ ವಂಸತ್ ಪೋಸ್ಟರನ್ನು ಚಿತ್ರತಂಡ ಇತ್ತೀಚೆಗೆ ಬಿಡುಗಡೆ ಮಾಡಿದೆ.

ರುಕ್ಮಿಣಿ ವಸಂತ್

ಇದನ್ನೂ ಓದಿ:'ನೋಡು ಶಿವ' ಆಲ್ಬಂ ಸಾಂಗ್​ ಶೂಟಿಂಗ್​ನಲ್ಲಿ ಚಂದನ್​ ಶೆಟ್ಟಿ : ವಿಡಿಯೋ

"ಸಪ್ತಸಾಗರದಾಚೆ ಎಲ್ಲೋ ಒಂದು ಲವ್ ಸ್ಟೋರಿ ಆಗಿದ್ದು, ಗೋಧಿಬಣ್ಣ ಸಾಧಾರಣ ಮೈ ಕಟ್ಟು ಸಿನಿಮಾ ತಂಡದೊಂದಿಗೆ ಕೆಲಸ ಮಾಡುತ್ತಿರುವುದು ಬಹಳ ಖುಷಿ ಇದೆ‌. ಅದರಲ್ಲೂ ಹೇಮಂತ್ ರಾವ್​​ ಅವರಂಥ ನಿರ್ದೇಶಕರೊಂದಿಗೆ ಕೆಲಸ ಮಾಡಲು ಬಹಳ ಎಕ್ಸೈಟ್ ಆಗಿದ್ದೇನೆ. ಈ ಚಿತ್ರದ ಕಥೆ ಬಹಳ ಚೆನ್ನಾಗಿದೆ. ನಾನು ಹವ್ಯಾಸಿ ಗಾಯಕಿಯಾಗಿ ಇದರಲ್ಲಿ ಕಾಣಿಸಿಕೊಂಡಿದ್ದೇನೆ. ರಕ್ಷಿತ್ ಶೆಟ್ಟಿ ಅವರೊಂದಿಗೆ ನಟಿಸಲು ಕಾತರಳಾಗಿದ್ದೇನೆ" ಎಂದು ರುಕ್ಮಿಣಿ ವಸಂತ್ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಚಿತ್ರದಲ್ಲಿ ರಕ್ಷಿತ್‌ ಶೆಟ್ಟಿ ಮತ್ತು ರುಕ್ಮಿಣಿ ವಸಂತ್‌ ಜೋಡಿ ಖಂಡಿತ್ ಹಿಟ್‌ ಆಗಲಿದೆ ಎಂದು ಚಿತ್ರತಂಡ ವಿಶ್ವಾಸ ವ್ಯಕ್ತಪಡಿಸಿದೆ. ಸಿನಿಮಾಗೆ ಪುಷ್ಕರ್‌ ಮಲ್ಲಿಕಾರ್ಜುನಯ್ಯ ಬಂಡವಾಳ ಹೂಡಿದ್ದಾರೆ. ಚಿತ್ರದ ಹಾಡುಗಳಿಗೆ ಚರಣ್ ರಾಜ್ ಸಂಗೀತ ನೀಡಿದ್ದು ಅದ್ವೈತ್ ಗುರುಮೂರ್ತಿ ಛಾಯಾಗ್ರಹಣವಿದೆ.

ರಕ್ಷಿತ್ ಶೆಟ್ಟಿ

ABOUT THE AUTHOR

...view details